ಮಕ್ಕಳೆದುರೇ ತಾಯಿಯ ಕೂದಲು ಹಿಡಿದೆಳೆದು, ಥಳಿಸಿದ ಜನ; ವಿಡಿಯೋ ವೈರಲ್
3 ನಿಮಿಷಗಳ ಈ ವೀಡಿಯೊ ಕ್ಲಿಪ್‌ನಲ್ಲಿ ಕೆಲವರು ಮಹಿಳೆಯನ್ನು ಆಕೆಯ ಮಕ್ಕಳೆದುರೇ ಕೂದಲನ್ನು ಹಿಡಿದು, ಆಕೆಯ ಮನೆಯಿಂದ ಹೊರಗೆಳೆದುಕೊಂಡು ಬಂದು ಥಳಿಸಿದ್ದಾರೆ. ಅಮ್ಮನಿಗೆ ಹೊಡೆಯುತ್ತಿರುವುದನ್ನು ನೋಡಿ ಆಕೆಯ ಮಗು ಅಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಟುವಾ ಜಿಲ್ಲೆಯಲ್ಲಿ ಗಂಡಸರ ಗುಂಪೊಂದು ಮಹಿಳೆಯನ್ನು ಆಕೆಯ ಮನೆಯಿಂದ ಹೊರಗೆಳೆದು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Video Viral) ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಕಳೆದ ವಾರ ಕಟುವಾದ ದೇವಲ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸೋಮವಾರ ದೂರು ದಾಖಲಾಗಿತ್ತು. ಕೆಲವು ಗಂಟೆಗಳ ನಂತರ ಆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
3 ನಿಮಿಷಗಳ ಈ ವೀಡಿಯೊ ಕ್ಲಿಪ್‌ನಲ್ಲಿ ಕೆಲವರು ಮಹಿಳೆಯನ್ನು ಆಕೆಯ ಮಕ್ಕಳೆದುರೇ ಕೂದಲನ್ನು ಹಿಡಿದು, ಆಕೆಯ ಮನೆಯಿಂದ ಹೊರಗೆಳೆದುಕೊಂಡು ಬಂದು ಥಳಿಸಿದ್ದಾರೆ. ಅಮ್ಮನಿಗೆ ಹೊಡೆಯುತ್ತಿರುವುದನ್ನು ನೋಡಿ ಆಕೆಯ ಮಗು ಅಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸೋಮವಾರ ನೀಡಿದ ಲಿಖಿತ ದೂರಿನಲ್ಲಿ, ಕ್ರಿಮಿನಲ್ ಉದ್ದೇಶ ಹೊಂದಿರುವ ನಾಲ್ವರು ತನ್ನ ಮನೆಗೆ ನುಗ್ಗಿ ತನ್ನ ಮೇಲೆ ಹಲ್ಲೆ ನಡೆಸಿ ನಿಂದಿಸಿದ್ದಾರೆ ಎಂದು ಮಹಿಳೆ ತಿಳಿಸಿದ್ದಾರೆ.
ಇದನ್ನೂ ಓದಿ: Teachers Day 2023: ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ವಿದ್ಯಾರ್ಥಿಯನ್ನು ಥಳಿಸಿದ ಶಿಕ್ಷಕ
ಸೆಕ್ಷನ್ 452 (ಮನೆ ಅತಿಕ್ರಮಣ), 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶಪೂರ್ವಕ ಅವಮಾನ), ಮತ್ತು 506 (ಅಪರಾಧ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾಕು ರಾಮ್, ಬಲ್ಲು ರಾಮ್, ಹ್ಯಾಪಿ ಮತ್ತು ಬಂಟಿ ಎಂಬ ನಾಲ್ವರ ವಿರುದ್ಧ ಕೇಸ್ ದಾಖಲಿಸಲಾಗಿದೆ.
This isn’t #Manipur or #Rajsthan but #Billawar of #Kathua Distt in #JammuAndKashmir where a woman has been thrashed mercilessly by some people while her kids kept crying. The video surfaced on social media. An action is warranted against all those taking law into their hands… pic.twitter.com/ddwHTttyZ9
— Jammu Tweeter (@jammu_tweeter) September 4, 2023
ಆ ಗ್ರಾಮದ ಹೊರಗಿನ ವ್ಯಕ್ತಿಗಳಿಗೆ ಆಕೆ ತನ್ನ ಮನೆಗೆ ಭೇಟಿ ನೀಡಲು ಅವಕಾಶ ನೀಡುತ್ತಿದ್ದ ಕಾರಣದಿಂದ ಗ್ರಾಮಸ್ಥರು ಆ ಮಹಿಳೆಯನ್ನು ವಿರೋಧಿಸಿದ್ದರು. ಆ ಗ್ರಾಮಕ್ಕೆ ಭೇಟಿ ನೀಡದಂತೆ ಪೊಲೀಸರು ಆ ಗುಂಪಿಗೆ ಮೊದಲೇ ಎಚ್ಚರಿಕೆ ನೀಡಿದ್ದರು. ಆದರೂ ಅವರು ಆಕೆಯ ಮನೆಗೆ ಬರುತ್ತಿದ್ದುದರಿಂದ ಆಕೆಯನ್ನು ಥಳಿಸಲಾಗಿದೆ.