Viral Video: ಲೋಕಲ್ ಟ್ರೇನ್​ನಲ್ಲಿ ಪಾನೀಪೂರಿ ಮಾರಾಟ; ಈ ಐಡಿಯಾ ಏನೋ ಚೆನ್ನಾಗಿದೆ ಆದರೆ…

Local Train: ಪಾನೀಪೂರಿ ಪ್ರಿಯರೆಲ್ಲರೂ ನೋಡಲೇಬೇಕಾದ ವಿಡಿಯೋ ಇದು. ನಮ್ಮೂರಿನ ರೈಲಿನೊಳಗೂ ಪಾನೀಪೂರಿ ಸಿಕ್ಕರೆ ಎಷ್ಟು ಒಳ್ಳೆಯದಲ್ಲವೇ? ಎಂದು ಅನ್ನಿಸುವುದು ನೂರಕ್ಕೆ ನೂರರಷ್ಟು ಸತ್ಯ. ಆದರೆ ನೆಟ್ಟಿಗರು ಈ ವಿಷಯವಾಗಿ ಏನೆಲ್ಲ ಚರ್ಚಿಸಿದ್ದಾರೆ? ನಾಲ್ಕು ಗಂಟೆಗಳ ಹಿಂದೆ ರೆಡ್ಡಿಟ್​ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಮತ್ತು ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನು ಓದಿ.

Viral Video: ಲೋಕಲ್ ಟ್ರೇನ್​ನಲ್ಲಿ ಪಾನೀಪೂರಿ ಮಾರಾಟ; ಈ ಐಡಿಯಾ ಏನೋ ಚೆನ್ನಾಗಿದೆ ಆದರೆ...
ಲೋಕಲ್ ಟ್ರೇನಿನಲ್ಲಿ ಪಾನೀಪುರಿ ಮಾರುತ್ತಿರುವ ವ್ಯಕ್ತಿ
Follow us
ಶ್ರೀದೇವಿ ಕಳಸದ
|

Updated on: Sep 07, 2023 | 3:48 PM

Golgappa: ಗೋಲ್ಗಪ್ಪಾ, ಪಾನೀಪುರಿ, ಫುಚ್ಕಾ ಹೀಗೆ ಒಂದೊಂದು ಕಡೆ ಒಂದೊಂದು ಹೆಸರಿನಲ್ಲಿ ಕರೆಸಿಕೊಳ್ಳುವ ಈ ಸ್ಟ್ರೀಟ್ ಚಾಟ್​ ಕಂಡರೆ ಯಾರಿಗೆ ತಾನೆ ಬಾಯಲ್ಲಿ ನೀರೂರದೆ ಇರುತ್ತದೆ? ಸ್ಟ್ರೀಟ್​ ಚಾಟ್​ ತಿನ್ನಬೇಕೆಂದರೆ ಅದೇ ಸ್ಟ್ರೀಟ್​ಗೆ ಹೋಗಬೇಕು. ಹೋಗಬೇಕೆಂದರೆ ನಡೆದುಕೊಂಡೋ, ಬಸ್ಸು ಏರಿಯೋ, ಗಾಡಿ ಏರಿಯೋ ಒಟ್ಟಿನಲ್ಲಿ ಸಮಯವನ್ನಂತೂ ವ್ಯಯಿಸಿ ಹೋಗಬೇಕು. ಆದರೆ ನೀವಿದ್ದಲ್ಲಿಗೇ ಆ ಸ್ಟ್ರೀಟ್​ ಚಾಟ್​ ಬಂದರೆ? ನೋಡಿ ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಪಾನೀಪೂರಿವಾಲಾ ಬೆಂಗಾಲದ ಲೋಕಲ್​ ಟ್ರೇನಿನಲ್ಲಿ (Local Train) ತನ್ನ ವ್ಯಾಪಾರ ಶುರುಮಾಡಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ಪರವಿರೋಧ ಅಭಿಪ್ರಾಯವ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Viral Video: ವೇಟರ್​​ನಿಂದ ಇನ್​ಸ್ಟಾಗ್ರಾಂನ ಮುಖ್ಯಸ್ಥರಾಗುವ ತನಕ; ಆ್ಯಡಮ್ ಮೊಸ್ಸೇರಿಯ ವೃತ್ತಿ ಹಿನ್ನೋಟ

4 ಗಂಟೆಗಳ ಹಿಂದೆ ರೆಡ್ಡಿಟ್​ನಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೋ ಅನ್ನು ಈತನಕ ಸುಮಾರು 500 ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ. ಸುಮಾರು 40 ಜನರು ಪ್ರತಿಕ್ರಿಯಿಸಿದ್ದಾರೆ. ಇದು ಪಾನೀಪೂರಿ ಅಲ್ಲ ಇದು ಫುಚ್ಕಾ ಎಂದಿದ್ದಾರೆ ಒಬ್ಬರು. ಹಾಗಿದ್ದರೆ ಅದರ ರೆಸಿಪಿ ಬೇರೆ ಇರುತ್ತದೆಯಾ? ಎಂದು ಕೇಳಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಲೋಕಲ್​ ಟ್ರೇನಿನಲ್ಲಿ ಪಾನಿಪೂರಿ ಮಾರುತ್ತಿರುವ ಈ ದೃಶ್ಯ ನೋಡಿ

Guy selling pani puri in local train by u/Construction1ne in indiasocial

ಇದು ಬೆಂಗಾಲ್​ನ ಲೋಕಲ್​ ಟ್ರೇನುಗಳಲ್ಲಿ ಸಾಮಾನ್ಯವಾಗಿ ಕಂಡುಬರುವಂಥ ದೃಶ್ಯ. ಇದರಲ್ಲಿ ವಿಶೇಷ ಏನೂ ಇಲ್ಲ ಎಂದಿದ್ದಾರೆ ಒಬ್ಬರು. ಗ್ರಾಹಕರಿಗೂ ಮತ್ತು ಈ ಮಾರಾಟಗಾರನಿಗೂ ಲಾಭವೇ. ಆದರೆ ಹ್ಯಾಂಡ್​ಗ್ಲೌಸ್ ಇಲ್ಲದೇ ತಯಾರಿಸುವ ಈ ತಿಂಡಿಯನ್ನು ತಿಂದರೆ ಅದರ ಪರಿಣಾಮ ಯಾರ ಮೇಲೆ? ಎಂದು ಕೇಳಿದ್ದಾರೆ ಇನ್ನೊಬ್ಬರು. ಅನುಕೂಲವೂ ರುಚಿಯೂ ಎಲ್ಲವೂ ಸರಿ. ಹಾಗಿದ್ದರೆ ಇಲ್ಲಿರುವ ಈ ಪಾನೀಪೂರಿವಾಲಾನ ಫೋಟೋ ಒಮ್ಮೆ ನೋಡಿ ಎಂದಿದ್ದಾರೆ ಮಗದೊಬ್ಬರು.

ಈ ಫೋಟೋ ನೋಡಿದ ನೀವು ಏನು ಹೇಳುತ್ತೀರಿ?

Comment by u/Historical_Ad_1714 from discussion Guy selling pani puri in local train in indiasocial

ಇದು ಬೆಂಗಾಲದ್ದೇ ದೃಶ್ಯ ಎಂದು ಹೇಗೆ ಹೇಳುತ್ತೀರಿ? ಎಂದು ಒಬ್ಬರು ಕೇಳಿದ್ದಾರೆ. ಇದು ಪಶ್ಚಿಮ ಬಂಗಾಳವೇ ಮತ್ತೆ ಈ ಬಗ್ಗೆ ಚರ್ಚೆ ಬೇಡ ಎಂದು ಕೆಲವರು ಹೇಳಿದ್ದಾರೆ. ಒಟ್ಟಾರೆಯಾಗಿ ಇದು ಎಲ್ಲಿಯದು ಎನ್ನುವುದಕ್ಕಿಂತ ರುಚಿಯೊಂದಿಗೆ ಶುಚಿಯೂ ಮುಖ್ಯ ಅಲ್ಲವೆ?

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​​ಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ