Viral Video: ವೇಟರ್​​ನಿಂದ ಇನ್​ಸ್ಟಾಗ್ರಾಂನ ಮುಖ್ಯಸ್ಥರಾಗುವ ತನಕ; ಆ್ಯಡಮ್ ಮೊಸ್ಸೇರಿಯ ವೃತ್ತಿ ಹಿನ್ನೋಟ

Adam Mosseri: ಇನ್​ಸ್ಟಾಗ್ರಾಂ ಮುಖ್ಯಸ್ಥ ಆ್ಯಡಮ್ ಮೊಸ್ಸೇರಿ ಥ್ರೆಡ್ಸ್​ನಲ್ಲಿ ತಮ್ಮ ವೃತ್ತಿಜೀವನದ ಇತಿಹಾಸದ ಬಗ್ಗೆ ಹಂಚಿಕೊಂಡಿದ್ದಾರೆ. ನೂರಾರು ಜನರು ಪ್ರಭಾವಿತರಾಗಿ ತಮ್ಮ ವೃತ್ತಿಜೀವನದ ಮೈಲಿಗಲ್ಲುಗಳ ಕುರಿತು ಹಂಚಿಕೊಂಡಿದ್ದಾರೆ. ಅನೇಕರಿಗೆ ಈ ಪೋಸ್ಟ್​ ಸ್ಫೂರ್ತಿದಾಯಕವಾಗಿದೆ. ಜಗತ್ತಿನಲ್ಲಿ ಎಂಜಿನಿಯರ್​, ಡಾಕ್ಟರ್​ ಕೆಲಸ ಬಿಟ್ಟು ಬೇರೆ ಜಗತ್ತೂ ಇದೆ ಎನ್ನುವುದನ್ನು ಇದು ನೆನಪಿಸಿದೆ.

Viral Video: ವೇಟರ್​​ನಿಂದ ಇನ್​ಸ್ಟಾಗ್ರಾಂನ ಮುಖ್ಯಸ್ಥರಾಗುವ ತನಕ; ಆ್ಯಡಮ್ ಮೊಸ್ಸೇರಿಯ ವೃತ್ತಿ ಹಿನ್ನೋಟ
ಇನ್​ಸ್ಟಾಗ್ರಾಂ ಮುಖ್ಯಸ್ಥ ಆ್ಯಡಮ್ ಮೊಸ್ಸೇರಿ
Follow us
ಶ್ರೀದೇವಿ ಕಳಸದ
|

Updated on: Sep 07, 2023 | 1:24 PM

Instagram: ಪ್ರತೀ ಮನುಷ್ಯನೂ ತನ್ನ ಅನ್ನವನ್ನು ತಾನೇ ಗಳಿಸಿಕೊಳ್ಳಬೇಕು. ಆರಂಭದಲ್ಲಿ ಸೇರಿದ ಕೆಲಸ ಯಾವತ್ತೂ ಕನಸಿನ ಕೆಲಸ ಆಗಲು ಸಾಧ್ಯವೇ? ಅವಶ್ಯಕತೆ ಪೂರೈಸಿಕೊಳ್ಳಲು ದುಡಿಯಬೇಕು. ಇಂದು ಜಗತ್ಪ್ರಸಿದ್ಧರಾದ ಅನೇಕರು ಕೂಡ ಈ ಹಾದಿಯಲ್ಲಿಯೇ ಸಾಗಿದವರು ಇನ್ನು ಸಾಮಾನ್ಯರ ಪಾಡು? ಇದೀಗ  ಇನ್​ಸ್ಟಾಗ್ರಾಂನ ಮುಖ್ಯಸ್ಥ ಆ್ಯಡಮ್ ಮೊಸ್ಸೇರಿ (Adam Mosseri) ತಮ್ಮ ವೃತ್ತಿಜೀವನದ ಹಿನ್ನೋಟವನ್ನು ಥ್ರೆಡ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್​ಗೆ ಸುಮಾರು 2,000 ಜನರು ಲೈಕ್ ಮಾಡಿದ್ದಾರೆ. ಸುಮಾರು 260 ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ಈ ಕೊಕ್ಕರೆಯಮ್ಮ ಯಾಕೆ ತನ್ನ ಮಗುವನ್ನು ಕುಕ್ಕಿ ಕುಕ್ಕಿ ಕೆಳಗೆಸೆದಳೋ?

ಆ್ಯಡಮ್ ಮೊಸ್ಸೇರಿ ತಮ್ಮ ವೃತ್ತಿಯ ಇತಿಹಾಸವನ್ನು ಥ್ರೆಡ್​ (Thread) ನಲ್ಲಿ ಪೋಸ್ಟ್ ಮಾಡಿದ್ದರ ಸಾರಾಂಶ ಇಲ್ಲಿದೆ. ಒಂದು ದಿನದ ಹಿಂದೆ ಹಂಚಿಕೊಂಡ ಈ ಪೋಸ್ಟ್ ಇದೀಗ ವೈರಲ್ ಆಗಿದೆ. ಆ್ಯಡಮ್​ ತಮ್ಮ ವೃತ್ತಿಜೀವನ ಆರಂಭಿಸಿದ್ದು​ ಹೋಟೆಲ್​ ಒಂದರಲ್ಲಿ ವೇಟರ್​ ಆಗಿ. ಆನಂತರ ಬಾರ್​ಟೆಂಡರ್ ಆದರು. ಆಮೇಲೆ ಡಿಸೈನರ್ ತದನಂತರ ಪ್ರಾಡಕ್ಟ್ ಮ್ಯಾನೇಜರ್ ಸದ್ಯ ಇನ್​ಸ್ಟಾಗ್ರಾಂನ ಮುಖ್ಯಸ್ಥರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅನೇಕರು ಈ ಪೋಸ್ಟ್​ನಿಂದ ಪ್ರಭಾವಿತರಾಗಿ ತಮ್ಮ ವೃತ್ತಿ ಇತಿಹಾಸವನ್ನು ಆ್ಯಡಮ್ ಮಾದರಿಯಲ್ಲಿ ಹಂಚಿಕೊಂಡಿದ್ದಾರೆ. ನಿಜಕ್ಕೂ ಇದು ಅತ್ಯಂತ ಆಕರ್ಷಕವಾಗಿದೆ. ನೀವು ಒಂದೊಂದೇ ಹಂತಗಳನ್ನು ಏರಿರುವ ರೀತಿ ನಿಜಕ್ಕೂ ಮೆಚ್ಚುವಂಥದ್ದು ಎಂದು ಒಬ್ಬರು ಹೇಳಿದ್ದಾರೆ. ವೇಟರ್ ಆಗಿ ವೃತ್ತಿಜೀವನ ಆರಂಭಿಸಿದವರಿಗಂತೂ ಈ ಪೋಸ್ಟ್​ ಸಾಕಷ್ಟು ಸ್ಫೂರ್ತಿ ತುಂಬಿದೆ. ತಮ್ಮ ಮುಂದಿನ ಪ್ರಯಾಣದ ಮೈಲುಗಲ್ಲುಗಳನ್ನು ಅವರು ಬರೆದುಕೊಂಡಿದ್ದಾರೆ. ಇಷ್ಟೆಲ್ಲಾ ಆದರೂ ಆ್ಯಡಮ್​ ಟ್ರೆಂಡಿಂಗ್​ನಲ್ಲಿ ಇಲ್ಲ ನೋಡಿ ಎಂದು ಒಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Viral Video: ತ್ರೀಡಿ ಟ್ಯುಟೋರಿಯಲ್; ಈ ಕಲಾಕೃತಿ ರಚಿಸುವುದನ್ನು ತೋರಿಸಿಕೊಟ್ಟ ಮೋಹಿತ ಕಶ್ಯಪ

ಕ್ಲರ್ಕ್, ಕ್ಯಾಷಿಯರ್​, ಸಹಾಯಕ, ಸಹಾಯಕ ಸ್ಟೋರ್ ಮ್ಯಾನೇಜರ್, ಹೌಸ್ ಕ್ಲೀನರ್​, ಆಫೀಸ್​ ಮ್ಯಾನೇಜರ್, ಸದ್ಯ ಅವಳಿ ಮಕ್ಕಳ ತಾಯಿ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಲೈಬ್ರರಿ ಬುಕ್​ ಸ್ಟ್ಯಾಕರ್​, ಕ್ಯಾಷಿಯರ್​, ವೇಟರ್, ಬಾರ್​​ಟೆಂಡರ್​, ಫೋಟೋಗ್ರಾಫರ್​, ವಿಪಿ ಡಿಜಿಟಲ್ ಸ್ಟ್ರ್ಯಾಟಜಿ, ಡಿಜಿಟಲ್​ ಏಜನ್ಸಿ ಹೆಡ್​, ಪ್ರೊಡಕ್ಟ್​ ಮ್ಯಾನೇಜ್​ಮೆಂಟ್​ ಪ್ರೊಫೆಸರ್​, ಇನ್ನೋವೇಷನ್ ಕನ್ಸಲ್ಟಂಟ್​, ಸಿಎಕ್​ ಸ್ಟ್ರಾಟಜಿ ಡೈರೆಕ್ಟರ್​. ಹೀಗೆ ಒಂದು ಹಂತಕ್ಕೆ ಬರುವ ಮುನ್ನ ತಾವು ನಿರ್ವಹಿಸಿದ ಕೆಲಸ, ಕ್ಷೇತ್ರಗಳನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ