Viral Video: ಈ ಕೊಕ್ಕರೆಯಮ್ಮ ಯಾಕೆ ತನ್ನ ಮಗುವನ್ನು ಕುಕ್ಕಿ ಕುಕ್ಕಿ ಕೆಳಗೆಸೆದಳೋ?

Stork: ಏನಾಗಿದೆ ಈ ತಾಯಿಕೊಕ್ಕರೆಗೆ? ಯಾಕೆ ಹೀಗೆ ತನ್ನದೇ ಮರಿಯನ್ನು ಕುಕ್ಕಿಕುಕ್ಕಿ ಗೂಡಿನಿಂದ ಹೊರಗೆಸೆಯುತ್ತಿದೆ? ಈ ವಿಡಿಯೋ ನೊಡಿದ ನೆಟ್ಟಿಗರು ಗಾಬರಿಗೆ ಒಳಗಾಗಿದ್ದಾರೆ. ಡಾರ್ವಿನ್​ನ ವಿಕಾಸವಾದದಿಂದ ಈ ಪ್ರಕರಣವನ್ನು ನೋಡಬೇಕೇ ಹೇಗೆ? ಅಂತೂ ನೆಟ್ಟಿಗರಲ್ಲಿ ತಾಯಿಕೊಕ್ಕರೆಯ ಬಗ್ಗೆ ಭಾರೀ ಚರ್ಚೆ ನಡೆದಿದೆ. ನೋಡಿ ನೀವೂ.

Viral Video: ಈ ಕೊಕ್ಕರೆಯಮ್ಮ ಯಾಕೆ ತನ್ನ ಮಗುವನ್ನು ಕುಕ್ಕಿ ಕುಕ್ಕಿ ಕೆಳಗೆಸೆದಳೋ?
ತಾಯಿಕೊಕ್ಕರೆ ಕೊಕ್ಕಿನಿಂದ ಕುಕ್ಕಿ ತನ್ನ ಮರಿಯನ್ನು ಗೂಡಿನಿಂದ ಹೊರಹಾಕುತ್ತಿರುವುದು
Follow us
ಶ್ರೀದೇವಿ ಕಳಸದ
|

Updated on:Sep 07, 2023 | 12:03 PM

Birds: ಅನ್ಯವರ್ಗದ ಪ್ರಾಣಿ ಪಕ್ಷಿಗಳನ್ನು ತಮ್ಮವೇ ಮರಿಗಳಂತೆ ಪೋಷಿಸುವ ಪ್ರಾಣಿ ಪಕ್ಷಿಗಳ ಅದೆಷ್ಟೋ ವಿಡಿಯೋಗಳನ್ನು ನೋಡಿದ್ದೀರಿ. ನಾಯಿ ಬೆಕ್ಕಿನಮರಿಯನ್ನು, ಗೋರಿಲ್ಲಾ ಹುಲಿಮರಿಯನ್ನು, ಬೆಕ್ಕು (Cat) ಕೋಳಿಮರಿಯನ್ನು… ಹೇಳುತ್ತ ಹೋದರೆ ಒಂದೇ ಎರಡೇ. ಆದರೆ ಇದೆಲ್ಲದಕ್ಕೆ ತದ್ವಿರುದ್ಧವೆಂಬಂಥ ಘಟನೆ ನಡೆದಿದೆ. ಕೊಕ್ಕರೆಯೊಂದು ತನ್ನ ಮಗುವನ್ನೇ ಕುಕ್ಕಿ ಕುಕ್ಕಿ ಮೇಲಿನಿಂದ ಕೆಳಕ್ಕೆ ಎಸೆದು ಸಾಯಿಸಿದೆ (?). ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು ತಾಯಿಕೊಕ್ಕೆರೆಯ ವರ್ತನೆಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಯಾಕೆ ಇದು ಹೀಗೆ ಮಾಡುತ್ತಿದೆ ಎಂದು ಯೋಚಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ತ್ರೀಡಿ ಟ್ಯುಟೋರಿಯಲ್; ಈ ಕಲಾಕೃತಿ ರಚಿಸುವುದನ್ನು ತೋರಿಸಿಕೊಟ್ಟ ಮೋಹಿತ ಕಶ್ಯಪ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ತಾಯಿಕೊಕ್ಕರೆ ತನ್ನ ಕೊಕ್ಕಿನಿಂದ ಸತತವಾಗಿ ಕುಡಿಯುತ್ತ ಗೂಡಿನಿಂದಲೇ ಮರಿಯನ್ನು ಕೆಳಕ್ಕೆ ಎಸೆದುಬಿಡುತ್ತದೆ. ಈ ಆಘಾತಕಾರಿ ವಿಡಿಯೋ ಅನ್ನು ಆ. 18ರಂದು X ನಲ್ಲಿ ಪೋಸ್ಟ್ ಮಾಡಲಾಗಿದೆ. ಈತನಕ 7.5 ಲಕ್ಷ ಜನರು ನೋಡಿದ್ದಾರೆ. ಸುಮಾರು 400 ಜನರು ರೀಪೋಸ್ಟ್ ಮಾಡಿದ್ದಾರೆ. ಸಾವಿರಾರು ಜನರು ಈ ಬಗ್ಗೆ ಚರ್ಚಸಿದ್ದಾರೆ.

ತಾಯಿಕೊಕ್ಕರೆ ಯಾಕೆ ನಿಷ್ಕರುಣಿಯಾಯಿತೊ?

ಈ ವಿಡಿಯೋದಲ್ಲಿ ತಾಯಿಕೊಕ್ಕರೆ ತನ್ನ ಐದು ಮರಿಗಳೊಂದಿಗೆ ಗೂಡಿನೊಳಗಿದೆ. ನಾಲ್ಕು ಮರಿಗಳು ಒಂದೆಡೆ ಕುಳಿತಿವೆ. ಇನ್ನೊಂದನ್ನು ಮಾತ್ರ ತನ್ನ ಚೂಪಾದ ಕೊಕ್ಕಿನಿಂದ ಕುಕ್ಕಿ ಅದನ್ನು ಗೂಡಿನಿಂದ ಓಡಲು ಪ್ರಯತ್ನಿಸುತ್ತಿದೆ ತಾಯಿಕೊಕ್ಕರೆ. ಮುಂದೆ ಅದನ್ನು ಗೂಡಿನಿಂದ ಹೊರಗೂ ಬೀಳಿಸುತ್ತದೆ. ಕೆಳಗೆ ಬಿದ್ದ ಅದು ಏನಾಯಿತೋ? ತಾಯಿ ತನ್ನ ಮಗುವಿಗೆ ಹೀಗೇಕೆ ಮಾಡಿದಳೋ? ಆರೋಗ್ಯವಂತ ಮಗುವನ್ನು ಮಾತ್ರ ಚೆನ್ನಾಗಿ ಬೆಳೆಸಬೇಕೆಂದು ಆಕೆ ಹೀಗೆ ತೀರ್ಮಾನಿಸಿದಳೋ? ಅಶಕ್ತವಾದ ಮರಿಯೆಡೆ ಲಕ್ಷ್ಯಕೊಟ್ಟರೆ ಉಳಿದ ಮರಿಗಳನ್ನು ಪೋಷಿಸಲು ಸಾಧ್ಯವಾಗದು ಎಂಬ ನಿರ್ಧಾರಕ್ಕೆ ಬಂದಳೇ?

ಇದನ್ನೂ ಓದಿ : Viral Video: ಅದು ವಿದ್ವಾನ್​ ಬಾತುಕೋಳಿಯವರ ಬೀಟ್​ಬಾಕ್ಸ್​​; ಎಡಿಟಿಂಗ್​ ವೇಳೆ ಗೊತ್ತಾದ ಸತ್ಯ

ಚಾರ್ಲ್ಸ್ ಡಾರ್ವಿನ್​ನ ‘ದಿ ಸರ್ವೈವಲ್ ಆಫ್ ದಿ ಫಿಟೆಸ್ಟ್ ಸಿದ್ಧಾಂತವನ್ನು ಗಮನದಲ್ಲಿಟ್ಟುಕೊಂಡು ಈ ವಿಡಿಯೋ ನೋಡಬಹುದೆ? ತಾನಿದ್ದ ಪರಿಸರಕ್ಕೆ ಹೊಂದಿಕೊಳ್ಳುವ ಜೀವಿಗಳು ಮಾತ್ರ ಜೀವಿಸಲು ಮತ್ತು ಸಂತಾನೋತ್ಪತ್ತಿಯಲ್ಲಿ ತೊಡಗಿಕೊಳ್ಳುವ ಸಶಕ್ತ ಎನ್ನುವುದು ಇವುಗಳಿಗೂ ಅನ್ವಯಿಸುತ್ತದೆಯೆ?

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:00 pm, Thu, 7 September 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ