AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಜಪಾನ್​; ಅಂಡರ್​​ಗ್ರೌಂಡ್​ ಸೈಕಲ್ ಪಾರ್ಕಿಂಗ್​​ ವಿಡಿಯೋ ವೈರಲ್

Parking: ದೊಡ್ಡದೊಡ್ಡ ಪಟ್ಟಣಗಳಲ್ಲಿ ಪಾರ್ಕಿಂಗ್​​ನ ಸಮಸ್ಯೆ ಹೇಳತೀರದು. ಸ್ಥಳದ ಅಭಾವದಿಂದ ವಾಹನಗಳ ಪಾರ್ಕಿಂಗ್​​ಗಾಗಿ ಹರಸಾಹಸ ಮಾಡಬೇಕಾಗುತ್ತದೆ. ಜಪಾನಿಗರು ಇಂಥ ಯಾವುದೇ ಸಮಸ್ಯೆಗಳಿಗೂ ತಕ್ಷಣವೇ ಉತ್ತರ ಕಂಡುಕೊಳ್ಳುವಲ್ಲಿ ಸಿದ್ಧಹಸ್ತರು. ಇದೀಗ ಸೈಕಲ್ ಪಾರ್ಕಿಂಗ್​​ಗೆ ಅವರು ರೂಪಿಸಿರುವ ಈ ಹೊಸ ವ್ಯವಸ್ಥೆಯನ್ನು ಗಮನಿಸಿ. ನೆಟ್ಟಿಗರು ಪರವಿರೋಧ ಚರ್ಚೆಯಲ್ಲಿ ಮುಳುಗಿದ್ದಾರೆ.

Viral Video: ಜಪಾನ್​; ಅಂಡರ್​​ಗ್ರೌಂಡ್​ ಸೈಕಲ್ ಪಾರ್ಕಿಂಗ್​​ ವಿಡಿಯೋ ವೈರಲ್
ಜಪಾನಿನಲ್ಲಿರುವ ಅಂಡರ್​​ಗ್ರೌಂಡ್​ ಸೈಕಲ್​ ಪಾರ್ಕಿಂಗ್​ ವ್ಯವಸ್ಥೆ
ಶ್ರೀದೇವಿ ಕಳಸದ
|

Updated on: Sep 07, 2023 | 4:52 PM

Share

Japan: ಜಪಾನಿಗರು ಆಧುನಿಕ ಕಾಲದಲ್ಲಿ ಒಂದಿಲ್ಲಾ ಒಂದು ಆವಿಷ್ಕಾರ ಮಾಡುತ್ತಲೇ ಇರುತ್ತಾರೆ. ನಿತ್ಯಸಂಗತಿಗಳಿರಬಹುದು, ಜೀವನಶೈಲಿ ಇರಬಹುದು ಹೀಗೆ ಯಾವ ವಿಷಯಗಳಿಗೂ ಪರ್ಯಾಯವಾಗಿ  ಉಪಾಯಗಳನ್ನು ಕಂಡುಹಿಡಿಯುತ್ತಲೇ ಇರುತ್ತಾರೆ. ಇದೀಗ ಜಪಾನಿಗರು ರೂಪಿಸಿರುವ ಅಂಡರ್​​ಗ್ರೌಂಡ್​ ಸೈಕಲ್​ ಪಾರ್ಕಿಂಗ್ ವಿಡಿಯೋ ವೈರಲ್ (Viral) ಆಗುತ್ತಿದೆ. ರೆಡ್ಡಿಟ್​ನಲ್ಲಿ ಹಂಚಿಕೊಂಡ ಈ ವಿಡಿಯೋದಡಿ ಸಾಕಷ್ಟು ಜನರು ಚರ್ಚಿಸುತ್ತಿದ್ದಾರೆ. 5 ಗಂಟೆಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ಈತನಕ ಸುಮಾರು 2,600 ಜನರು ಲೈಕ್ ಮಾಡಿದ್ದು, ಸುಮಾರು 100 ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ಲೋಕಲ್ ಟ್ರೇನ್​ನಲ್ಲಿ ಪಾನೀಪೂರಿ ಮಾರಾಟ; ಈ ಐಡಿಯಾ ಏನೋ ಚೆನ್ನಾಗಿದೆ ಆದರೆ…

ಪಾರ್ಕಿಂಗ್​ ಮತ್ತು ಬೈಕ್​, ಸೈಕಲ್​ ಕಳ್ಳರ ಸಮಸ್ಯೆ ಹೇಳತೀರದು. ನೆದರ್ಲ್ಯಾಂಡ್​ನ ಜನರು ತಮ್ಮ ಸೈಕಲ್​ ಮತ್ತು ಬೈಕುಗಳಿಗೆ ಸರಪಳಿ ಮತ್ತಿತರೇ ವಸ್ತುಗಳನ್ನು ಕಟ್ಟಿರುತ್ತಾರೆ. ಸವಾರಿ ಮಾಡುವಾಗ ಅಡೆತಡೆಯನ್ನು ಎದುರಿಸಿ ವಾಹನ ಅಥವಾ ಸೈಕಲ್​ಗಳನ್ನು ತಳ್ಳಿಕೊಂಡೇ ಮನೆ ಸೇರುತ್ತಾರೆ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಜಪಾನ್​​ನ ಅಂಡರ್​ಗ್ರೌಂಡ್​ ಸೈಕಲ್ ಪಾರ್ಕಿಂಗ್​

Underground bicycle parking in Japan. by u/Difficult_Squirrel65 in Damnthatsinteresting

ಈ ಸ್ಥಳದಲ್ಲಿ ಒಂದು ಸೈಕಲ್​ ಪಾರ್ಕಿಂಗ್​​ಗೆ ಒಂದು ಗಂಟೆಗೆ ಎಷ್ಟು ಹಣ ತೆಗೆದುಕೊಳ್ಳುತ್ತಾರೆ ಎಂದು ಕೇಳಿದ್ದಾರೆ ಒಬ್ಬರು. ಇದರ ಬದಲಿಗೆ ಸುಮಾರು 80 ನಿರಾಶ್ರಿತರಿಗೆ ವಾಸಿಸಲು ಅನುಕೂಲ ಮಾಡಿಕೊಡಬಹುದಾಗಿತ್ತು ಎಂದು ಮತ್ತೊಬ್ಬರು ಹೇಳಿದ್ದಾರೆ. ಏನು ಮಾಡುವುದು ಅವರು ಏನೇ ಮಾಡಿದರೂ ಭವಿಷ್ಯದಲ್ಲಿ ಜೀವಿಸುತ್ತಾರೆ, ವಾಸ್ತವದ ಬಗ್ಗೆ ಯೋಚಿಸುವುದೇ ಇಲ್ಲ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ವೇಟರ್​​ನಿಂದ ಇನ್​ಸ್ಟಾಗ್ರಾಂನ ಮುಖ್ಯಸ್ಥರಾಗುವ ತನಕ; ಆ್ಯಡಮ್ ಮೊಸ್ಸೇರಿಯ ವೃತ್ತಿ ಹಿನ್ನೋಟ

ಈ ಅಂಡರ್​ಗ್ರೌಂಡ್​ಒಳಗೆ ಯಾರಾದರೂ ಬಿದ್ದರೆ ಏನು ಗತಿಯಾಗಬಹುದು ಯೋಚಿಸಿ ಎಂದಿದ್ದಾರೆ ಮತ್ತೊಬ್ಬರು. ಬೇರೆ ಬೇರೆ ಆಕಾರದ ಬೈಕ್​​ಗಳಿಗೆ ಇದು ಹೇಗೆ ಸರಿಹೋಗುತ್ತದೆ? ಎಂದು ಕೇಳಿದ್ದಾರೆ ಇನ್ನೊಬ್ಬರು. ಆಮ್ಸ್ಟರ್​ಡ್ಯಾಮ್​ನಲ್ಲಿ ಇದನ್ನು ಮಾಡಿನೋಡಿ, ಒಬ್ಬೊಬ್ಬರು ತಮ್ಮ ಸೈಕಲ್ ಅಥವಾ ಬೈಕ್​ ತೆಗೆದುಕೊಳ್ಳಲು 5 ಗಂಟೆ ಕಾಯಬೇಕಾಗುತ್ತದೆ ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು