Viral Video: 23 ಶಸ್ತ್ರಚಿಕಿತ್ಸೆಗಳ ನಂತರ ನನ್ನನ್ನು ನಾನೇ ಅಪ್ಪಿಕೊಂಡೆ, ಒಪ್ಪಿಕೊಂಡೆ

Neurofibromatosis: 'ಇದೊಂದು ವಾಸಿಯಾಗದ ರೋಗವೆಂದು ತಿಳಿದ ಮೇಲೆಯೂ ನನ್ನನ್ನು ನಾನು ಒಪ್ಪಿಕೊಳ್ಳಲು ಬಹಳ ಕಾಲವೇ ತೆಗೆದುಕೊಂಡಿತು. 23 ಶಸ್ತ್ರ ಚಿಕಿತ್ಸೆಗಳ ನಂತರ ನಕಲಿ ಕಣ್ಣು ಧರಿಸಿದೆ. ಕ್ರಮೇಣ ನನ್ನೇ ನಾ ನನ್ನ ಅಪ್ಪಿಕೊಂಡೆ. ಬಾಲ್ಯದಿಂದ ನನ್ನ ಅಮ್ಮ ನನ್ನನ್ನು ಪೊರೆದಳು. ಈಗ ನನ್ನ ಹೆಂಡತಿ ನನ್ನೊಂದಿಗಿದ್ದಾಳೆ. ಹಿಂದಿರುಗಿ ನೋಡಲಾರದಂಥ ಹೊಸ ಚೈತನ್ಯ ನಮ್ಮ ಬದುಕಲ್ಲಿ ಉಕ್ಕುತ್ತಿದೆ.'

Viral Video: 23 ಶಸ್ತ್ರಚಿಕಿತ್ಸೆಗಳ ನಂತರ ನನ್ನನ್ನು ನಾನೇ ಅಪ್ಪಿಕೊಂಡೆ, ಒಪ್ಪಿಕೊಂಡೆ
ಅಮಿತ್​ ಘೋಷ್​ ಪತ್ನಿ ಪಿಯಾಲಿಯೊಂದಿಗೆ
Follow us
ಶ್ರೀದೇವಿ ಕಳಸದ
|

Updated on: Sep 06, 2023 | 3:04 PM

Life Journey: ‘ಎರಡು ವರ್ಷದವನಿದ್ದಾಗ ನನಗೆ ಟ್ಯೂಮರ್ ಆಯಿತು. ವೈದ್ಯರು ಅದನ್ನು ನ್ಯೂರೋಫೈಬ್ರೋಮೆಟಾಸಿಸ್ (Neurofibromatosis) ಎಂದು ಗುರುತಿಸಿದರು. ಇದು ಎಂದಿಗೂ ವಾಸಿಯಾಗುವುದೂ ಇಲ್ಲವೆಂದರು. ಸದಾ ನೋವು, ಹಾಗಾಗಿ ಸರಿಯಾಗಿ ಉಣ್ಣಲು ತಿನ್ನಲು ಆಗುತ್ತಿರಲಿಲ್ಲ. ನನಗೆ ತಬಲಾ ನುಡಿಸುವುದು ಮತ್ತು ಕ್ರಿಕೆಟ್ ಆಡುವುದು ಎಂದರೆ ಬಹಳ ಇಷ್ಟ. ಆದರೆ ಕುರೂಪಿಯಾದ ನನ್ನನ್ನು  ಶಾಲೆಯಲ್ಲಿ ಯಾರೂ ಹತ್ತಿರ ಸೇರಿಸಿಕೊಳ್ಳುತ್ತಿರಲಿಲ್ಲ. ಹಾಗಾಗಿ ಒಬ್ಬಂಟಿಯಾಗಿಯೇ ಇರುತ್ತಿದ್ದೆ. ಆದರೆ ನನ್ನ ಕುಟುಂಬ ಸದಾ ನನ್ನೊಂದಿಗಿತ್ತು.’

ಇದನ್ನೂ ಓದಿ : Viral Video: ಕಾಡಿನ ರಾಜ ಕಾರುಗಳ ಮಧ್ಯೆ ಕಾರುಬಾರು ಮಾಡದೇ ಹೋದ ವಿಡಿಯೋ ವೈರಲ್ 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಪಿಯಾಲಿ ನನ್ನ ಕೈಹಿಡಿಯಲು ನಿರ್ಧರಿಸಿದಳು. ಮದುವೆಗೆ ಸಂಬಂಧಿಕರ್ಯಾರೂ ಬರಲಿಲ್ಲ, ಆದರೂ ಎಲ್ಲವೂ ಚೆನ್ನಾಗಿಯೇ ನೆರವೇರಿತು. ಆರಂಭದಲ್ಲಿ ನಾನು ಅವಳೆದುರು ಮುಖ ಮುಚ್ಚಿಕೊಳ್ಳುತ್ತಿದ್ದೆ. ಆಕೆ ಸಹಜವಾಗಿ ಇರಲು ಸಹಕರಿಸಿದಳು. ಒಟ್ಟು 23 ಸರ್ಜರಿಗಳ ನಂತರ ನಾನು ನಕಲಿ ಕಣ್ಣು (Fake Eye) ಹಾಕಿಕೊಂಡೆ. ಇನ್ನೆಂದೂ ನನ್ನ ಬಗ್ಗೆ ನಾನು ಅಸಹ್ಯ ಪಟ್ಟುಕೊಳ್ಳಬಾರದು ಎಂದು ನನ್ನಷ್ಟಕ್ಕೆ ನಾನು ಪ್ರಮಾಣ ಮಾಡಿಕೊಂಡೆ’ ಅಮಿತ್ ಘೋಷ್​.

ಅಮಿತ್​ ಘೋಷ್ ಪ್ರಯಾಣ ಇಲ್ಲಿದೆ

ಒಂದು ಗಂಟೆಯ ಹಿಂದೆ ಇನ್​ಸ್ಟಾಗ್ರಾಂನ @Officialpeopleofindia ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈತನಕ ಸುಮಾರು 1 ಲಕ್ಷ ಜನರು ನೋಡಿದ್ದಾರೆ. 38,000ಕ್ಕಿಂತಲೂ ಹೆಚ್ಚು ಲೈಕ್ ಮಾಡಿದ್ದಾರೆ. ಈ ಪೇಜ್​ ಅನ್ನು ಫಾಲೋ ಮಾಡಲು ಶುರುಮಾಡಿದಾಗಿನಿಂದ ನನ್ನ ನೋವು ಇಲ್ಲಿರುವ ಜನರಿಗಿಂತ ದೊಡ್ಡದಲ್ಲ ಎಂದು ನಾನು ಅರಿತುಕೊಂಡಿದ್ದೇನೆ. ನಿಜಕ್ಕೂ ಈ ಕಥೆಗಳು ಸ್ಫೂರ್ತಿದಾಯಕ ಎಂದಿದ್ದಾರೆ ಒಬ್ಬರು. ನೂರಾರು ಜನರು ಅಮಿತ್​ ಘೋಷ್​ ವಿಡಿಯೋಗೆ ಪ್ರತಿಕ್ರಿಯಿಸಿ ಅವರ​ ಪತ್ನಿ ಪಿಯಾಲಿಗೆ ದೊಡ್ಡ ಗೌರವ ಸಲ್ಲಬೇಕು ಎಂದಿದ್ದಾರೆ.

ಅಮಿತ್​ ಧರಿಸುವ ನಕಲಿ ಕಣ್ಣನ್ನು ತಯಾರಿಸಿದ್ದು ಹೀಗೆ

View this post on Instagram

A post shared by Amit Ghose (@amitghosenf1)

ಪಿಯಾಲಿ ನಿಮ್ಮ ಬಾಹ್ಯಸೌಂದರ್ಯ ನೋಡದೆ ನಿಮ್ಮ ಹೃದಯವನ್ನು ಮೆಚ್ಚಿ ಮದುವೆಯಾಗಿದ್ದಾಳೆ, ಇಬ್ಬರಿಗೂ ಒಳ್ಳೆಯದಾಗಲಿ ಎಂದು ಅನೇಕರು ಹಾರೈಸಿದ್ದಾರೆ. ನಿಜವಾದ ಪ್ರೀತಿ ಯಾವುದು ಎಂದು ಯಾರಾದರೂ ಕೇಳಿದರೆ, ನಾನು ಇಂಥ ಜನರನ್ನು ತೋರಿಸುತ್ತೇನೆ ಎಂದಿದ್ದಾರೆ ಒಂದಿಷ್ಟು ಜನ.

ಈ ವಿಡಿಯೋಗಳನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್