Viral Video: ಕಾಡಿನ ರಾಜ ಕಾರುಗಳ ಮಧ್ಯೆ ಕಾರುಬಾರು ಮಾಡದೇ ಹೋದ ವಿಡಿಯೋ ವೈರಲ್

Wildlife : ದನಕರು ಬಂದರೆ ದಾರಿ ಮಾಡಿಕೊಡುತ್ತೀರಿ. ಬೆಕ್ಕು ನಾಯಿ ಬಂದರೆ ಎವೆಯಿಕ್ಕದೆ ನೋಡುತ್ತೀರಿ, ಹತ್ತಿರ ಬಂದರೆ ಮಾತನಾಡಿಸುತ್ತೀರಿ. ಆದರೆ ಸಿಂಹ ಬಂದರೆ!? ಈ ವಿಡಿಯೋ ನೋಡಿ, ಬೆಳಗಿನ ತಿಂಡಿ ಮುಗಿಸಿಕೊಂಡು ಬಂದ ಕಾಡಿನರಾಜ ಮಧ್ಯಾಹ್ನದ ಊಟಕ್ಕಾಗಿ ಕಾಡು ತೊರೆದು ನಾಡಿಗೆ ಬಂದಿದ್ದಾನೆ. ಕಾರುಗಳಲ್ಲಿರುವವರ ಎದೆಯಲ್ಲಿ ಎಂಥ ನಡುಕ ಹುಟ್ಟಿರಬಹುದೋ?

Viral Video: ಕಾಡಿನ ರಾಜ ಕಾರುಗಳ ಮಧ್ಯೆ ಕಾರುಬಾರು ಮಾಡದೇ ಹೋದ ವಿಡಿಯೋ ವೈರಲ್
ಕಾಡಿನ ರಾಜ ನಾಡಿಗೆ ಬರುತ್ತಿರುವುದು
Follow us
ಶ್ರೀದೇವಿ ಕಳಸದ
|

Updated on:Sep 06, 2023 | 1:29 PM

Lion: ದೂರದಿಂದ ಸಿಂಹದ ಗರ್ಜನೆ ಕೇಳಿದ ಕೆಲವರಿಗೆ ಕಾಲು ಥರಥರ ಎನ್ನುತ್ತವೆ. ಇನ್ನೂ ಕೆಲವರಿಗೆ ಬೋನಿನೊಳಗಿರುವ ಸಿಂಹ ನೋಡಲು ಗುಂಡಿಗೆ ಗಟ್ಟಿ ಇರಬೇಕು. ಆದರೆ ಸಿಂಹವೊಂದು ನಿಮ್ಮ ಪಕ್ಕದಲ್ಲಿ ಅಚಾನಕ್ ಆಗಿ ನಡೆದುಕೊಂಡು ಬಂದರೆ? ಹೇಗಿರುತ್ತದೆ ನೋಡಿ ಈ ವಿಡಿಯೋದಲ್ಲಿ. ಸದ್ಯ ಇವರೆಲ್ಲ ಕಾರಿನಲ್ಲಿದ್ದಾರೆ. ದನಕರುವೋ ನಾಯಿಯೋ ಬೆಕ್ಕೋ (Animals) ರಸ್ತೆಯಲ್ಲಿ ನಡೆದು ಬಂದಷ್ಟು ಸಹಜವಾಗಿ ಈ ದೈತ್ಯ ಸಿಂಹ ಹೀಗೆ ರಸ್ತೆಗಿಳಿದಿದೆ. ಅಲ್ಲಿ ನಿಂತಿರುವ ಕಾರುಗಳ ಮಧ್ಯೆ ತನ್ನಪಾಡಿಗೆ ತಾ ಗಂಭೀರವಾಗಿ ನಡೆದುಕೊಂಡು ಹೋಗಿದೆ. ಆಕ್ರಮಣಕಾರೀ, ನಿಗೂಢ ಮತ್ತು ಸಂಚಿನಿಂದ ಕೂಡಿದ ಈ ಪ್ರಾಣಿಯನ್ನು ನೋಡಿದರೆ ಯಾರಿಗೆ ತಾನೆ ಭಯವಾಗದು?

ಇದನ್ನೂ ಓದಿ : Viral Optical Illusion: ಸರ್ಕಸ್ ಮಾಸ್ಟರ್​​ನೊಳಗೆ ಅಡಗಿರುವ ಆನೆಯನ್ನು ಹುಡುಕಿದರೆ ನೀವು ಮೇಧಾವಿ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು X ನಲ್ಲಿ Figen @TheFigen ದಿ ಕಿಂಗ್​ ಎಂಬ ಶೀರ್ಷಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ತಾಜ ಹೀಗೆ ನಡೆದುಹೋಗಬೇಕಾದರೆ ಆತನ ಠೀವಿಯನ್ನು ಹತ್ತಿರದಿಂದ ನೋಡುವುದು ಎಂಥ ಸೌಭಾಗ್ಯ ಎಂದಿದ್ದಾರೆ ಒಬ್ಬರು. ಅಕಸ್ಮಾತ್​ ಕಾರಿನ ಗಾಜನ್ನು ಒಡೆದು ಒಳಗಿರುವವರನ್ನು ತಿಂದಿದ್ದರೆ? ಎಂದಿದ್ದಾರೆ ಇನ್ನೊಬ್ಬರು.

ವಾಕಿಂಗ್ ಬಂದ ಕಾಡಿನ ರಾಜ!

ಓಹೋ ಇವರು ಕಾಡಿಗೆ ರಜೆ ಹಾಕಿ ಬಂದಿದ್ದಾರೆ ಎಂದು ಒಬ್ಬರು. ಇವರು ಹೀಗೆ ನಡೆದುಕೊಂಡು ಬರಬೇಕಾದರೆ ನಾನು ಇಲ್ಲೇ ಇದ್ದೆ, ಈಗ ಮನೆ ತಲುಪಿದ್ದೇನೆ ಎಂದಿದ್ದಾರೆ ಮತ್ತೊಬ್ಬರು. ಅವರು ಇಡೀ ರಾತ್ರಿ ಹೊರಗೇ ಮಲಗಿದ್ದರು ಎನ್ನಿಸುತ್ತದೆ ಎಂದಿದ್ದಾರೆ ಇನ್ನೊಬ್ಬರು. ಇದು ನಿಜವೇ ಅಥವಾ ಎಐ? ಎಂದು ಕೇಳಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಆಕ್ಲೆಂಡ್​ ವಿಮಾನ ನಿಲ್ದಾಣದಲ್ಲಿ ಪ್ರೇಮನಿವೇದನೆ ಮಾಡಿಕೊಂಡ ಆ ಕ್ಷಣಗಳು

ಬ್ರೇಕ್​ಫಾಸ್ಟ್ ಮುಗಿಸಿ ಲಂಚ್​​ಗಾಗಿ ಅವರು ಹುಡುಕುತ್ತಿದ್ದಾರೆ ಎಂದಿದ್ದಾರೆ ಒಬ್ಬರು. ರಾಜರು ಬಂದರು ದಾರಿ ಮಾಡಿಕೊಡಿ ಎಂದಿದ್ದಾರೆ ಮತ್ತೊಬ್ಬರು. ಅವರು ಕಾರಿನಬಾಗಿಲ ಬಳಿ ಬಂದು ನಿಂತರೆ ಏನು ಮಾಡುವಿರಿ? ಎಂದು ಕೇಳಿದ್ದಾರೆ ಅನೇಕರು. ಏನೂ ಬೇಡ ನಿಂತಲ್ಲಿಯೇ ನಿಂತು ಒಮ್ಮೆ ಗರ್ಜಿಸಿದರೆ!? ಎಂದು ಕೇಳಿದ್ದಾರೆ ಒಂದಿಷ್ಟು ಜನ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 1:28 pm, Wed, 6 September 23

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?