AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Optical Illusion: ಸರ್ಕಸ್ ಮಾಸ್ಟರ್​​ನೊಳಗೆ ಅಡಗಿರುವ ಆನೆಯನ್ನು ಹುಡುಕಿದರೆ ನೀವು ಮೇಧಾವಿ!

IQ : ಇಲ್ಲೊಬ್ಬ ಸರ್ಕಸ್​ ಮಾಸ್ಟರ್​ ಹೊರಟಿದ್ದಾನೆ. ಅವನ ಬಳಿ ಆನೆ ಇದೆ. 9 ಸೆಕೆಂಡುಗಳಲ್ಲಿ ನೀವು ಆ ಆನೆ ಎಲ್ಲಿದೆ ಎಂದು ಕಂಡುಹಿಡಿಯಬೇಕು. ಈ ಚಿತ್ರವನ್ನು ಅತ್ಯಂತ ಕೌಶಲಯುತವಾಗಿ ಚಿತ್ರಿಸಿದ್ದಾರೆ. ಆನೆಯನ್ನು ಹುಡುಕಲು ಪ್ರಯತ್ನಿಸಿ. 9 ಸೆಕೆಂಡುಗಳಲ್ಲಿ ಅದು ಸಿಕ್ಕರೆ ನಿಮ್ಮ ಬುದ್ಧಿಮಟ್ಟ ಚುರುಕಾಗಿದೆ ಎಂದರ್ಥ. ಹಾಗಿದ್ದರೆ ತಡವೇಕೆ? ಚಿತ್ರವನ್ನು ಚಿತ್ತೈಸಿ.

Viral Optical Illusion: ಸರ್ಕಸ್ ಮಾಸ್ಟರ್​​ನೊಳಗೆ ಅಡಗಿರುವ ಆನೆಯನ್ನು ಹುಡುಕಿದರೆ ನೀವು ಮೇಧಾವಿ!
ಸರ್ಕಸ್​ ಮನುಷ್ಯನಲ್ಲಿ ಅಡಗಿರುವ ಆನೆಯನ್ನು ಕಂಡುಹಿಡಿಯಿರಿ
ಶ್ರೀದೇವಿ ಕಳಸದ
|

Updated on: Sep 06, 2023 | 12:28 PM

Share

Optical Illusion: ನೀವು ಮೇಧಾವಿಯೇ? ಹಾಗಿದ್ದರೆ, ನಿಮ್ಮ ಬೌದ್ಧಿಕ ಮಟ್ಟವು ಇತರರಿಗಿಂತ ಹೆಚ್ಚಿನ ಸ್ತರದಲ್ಲಿರುತ್ತದೆ. ಹಾಗಿದ್ದರೆ ಪರೀಕ್ಷಿಸಿಕೊಳ್ಳಲು ಇಲ್ಲೊಂದು ಸಣ್ಣ ಚಟುವಟಿಕೆ ಇದೆ. ಇಲ್ಲಿರುವ ಭ್ರಮಾತ್ಮಕ ಚಿತ್ರವನ್ನು ಗಮನಿಸಿ. ಈ ಸರ್ಕಸ್​ ಮನುಷ್ಯ ಆನೆಯೊಂದಿಗೆ ಹೊರಟಿದ್ದಾನೆ. ಅರೆ! ಆನೆಯೆ? ಎಂದು ಹುಡುಕುತ್ತಿದ್ದೀರೆ? ಹೌದು, ಆನೆಯನ್ನು ಹುಡುಕುವುದೇ ನಿಮಗಿರುವ ಸವಾಲು. ಈ ಮೂಲಕವೇ ನಿಮ್ಮ ಬೌದ್ಧಿಕ ಮಟ್ಟವನ್ನು (IQ) ಈ ಮೂಲಕವೇ ನೀವು ಅರಿತುಕೊಳ್ಳಬಹುದು. ಈಗಾಗಲೇ ನಿಮಗೆ ಗೊತ್ತಿರುವ ಹಾಗೆ ಈ ಭ್ರಮಾತ್ಮಕ ಚಿತ್ರಗಳು ನಿಮ್ಮ ಕಣ್ಣುಗಳನ್ನು ನೀವೇ ನಂಬದಂತೆ ಮಾಡುತ್ತವೆ. ಅಲ್ಲಿರದೇ ಇರುವ ವಸ್ತುಗಳನ್ನು ಕಾಣಿಸುವಂತೆ ಮಾಡುತ್ತವೆ.

ಇದನ್ನೂ ಓದಿ : Viral Video: ಭಾಗ್ ಮಿಲ್ಕ್ ಭಾಗ್; ದಕ್ಷಿಣ ಕೊರಿಯಾದ ಯುವತಿ ನೃತ್ಯ; ಭಾರತೀಯ ಸಂಗೀತದ ಮಹಿಮೆ ಎಂದ ನೆಟ್ಟಿಗರು

ನಿಮ್ಮ ಮೆದುಳಿನ ಶಕ್ತಿಯನ್ನು ಚುರುಕುಗೊಳಿಸಲು ಇಂಥ ಚಿತ್ರಗಳನ್ನು ಆಗಾಗ ನೋಡುತ್ತಿರಬೇಕು. ನಿಮ್ಮ ಯೋಚನಾ ಪರಿಧಿಯನ್ನು ಹಿಗ್ಗಿಸಿಕೊಳ್ಳಲು ಇಂಥ ಕೌಶಲಗಳು ಸಹಾಯ ಮಾಡುತ್ತವೆ. ಇವು ಕೇವಲ ನಿಮ್ಮ ಬೌದ್ಧಿಕಮಟ್ಟವನ್ನು ಅಳೆಯುವ ಚಿತ್ರಗಳಲ್ಲ, ನಿಮ್ಮ ವ್ಯಕ್ತಿತ್ವದ ಗುಣಲಕ್ಷಣಗಳನ್ನೂ ಇವು ಬಹಿರಂಪಡಿಸುತ್ತವೆ. ವ್ಯಕ್ತಿತ್ವ ಪರೀಕ್ಷೆಗಾಗಿಯೂ ಈ ಚಿತ್ರಗಳನ್ನು ಬಳಸುತ್ತಾರೆ. ಹಾಗಿದ್ದರೆ 9 ಸೆಕೆಂಡಿನಲ್ಲಿ ಆನೆಯನ್ನು ಕಂಡುಹಿಡಿಯಿರಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸರ್ಕಸ್ ಮಾಸ್ಟರ್​ನೊಳಗೆ ಅಡಗಿರುವ ಆನೆಯನ್ನು ಪತ್ತೆಹಚ್ಚಿರಿ

ನಿಮ್ಮನ್ನು ನೀವು ಸ್ವತಃ ತಿಳಿದುಕೊಳ್ಳಲು ಇಂಥ ಚಟುವಟಿಕೆಗಳು ಸಹಾಯ ಮಾಡುತ್ತವೆ. ನಿಮ್ಮಲ್ಲಿ ಆತ್ಮವಿಶ್ವಾಸ ಮೂಡಲು ಇವು ಸಹಕರಿಸುತ್ತವೆ. ಹಾಗಿದ್ದರೆ ಮೇಲಿನ ಚಿತ್ರದಲ್ಲಿ ಆನೆ ಕಂಡಿತೇ? 9 ಸೆಕೆಂಡುಗಳಲ್ಲಿ ನಿಮಗೆ ಕಂಡರೆ ನಿಮ್ಮ ಬುದ್ಧಿಮಟ್ಟ ಚುರುಕಾಗಿದೆ ಎಂದರ್ಥ. ಅಥವಾ ನಿಮಗೆ ಆನೆಯನ್ನು ಕಂಡುಹಿಡಿಯಲು ಸಾಧ್ಯವಾಗದಿದ್ದರೆ ಬೇಸರಿಸಿಕೊಳ್ಳಬೇಡಿ. ಆನೆಯನ್ನು ಗುರುತಿಸಲು ಒಂದು ಸುಳಿವನ್ನು ಕೊಡಲಾಗುವುದು. ಸರ್ಕಸ್ ಮಾಸ್ಟರ್​ನ ಮೈಮೇಲೆ ಆನೆಯ ತಲೆ ಇದೆ!

ಇಲ್ಲಿದೆ ಆ ಆನೆ!

ಈ ಭ್ರಮಾತ್ಮಕ ಚಿತ್ರ ಕ್ಲಿಷ್ಟಕರವೆನ್ನಿಸಿತಾ? ಇರಲಿ, ಆದರೆ ಈ ಚಿತ್ರವನ್ನು ಚಿತ್ರಿಸಿದವರ ಕೌಶಲ ಗಮನಿಸಿ, ಎಷ್ಟು ಅದ್ಭುತವಾಗಿದೆಯಲ್ಲ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ