Viral Video: ಭಾಗ್ ಮಿಲ್ಕ್ ಭಾಗ್; ದಕ್ಷಿಣ ಕೊರಿಯಾದ ಯುವತಿ ನೃತ್ಯ; ಭಾರತೀಯ ಸಂಗೀತದ ಮಹಿಮೆ ಎಂದ ನೆಟ್ಟಿಗರು
O Rangrez : ಹೃದಯ ಭಾರವಾಗಿತ್ತು. ಸಂಗೀತ ಕೇಳಿದೊಡನೆ ತಕ್ಷಣವೇ ನನ್ನ ಮನಸ್ಸು ಸರಿ ಹೋಗುತ್ತದೆ ಎಂದು ಗೊತ್ತು. ಹಾಗಾಗಿ ನಾನು ಈ ಭಾರತೀಯ ಸಿನೆಮಾ ಗೀತೆಗೆ ನೃತ್ಯ ಸಂಯೋಜನೆ ಮಾಡಲು ತೊಡಗಿದೆ. ನಿಜಕ್ಕೂ ಸಂಗೀತ ಮತ್ತು ನೃತ್ಯ ನನ್ನ ಮನಸ್ಸನ್ನು ಶಾಂತಗೊಳಿಸುತ್ತದೆ. ಈ ಅನುಭವಕ್ಕಾಗಿ ನಾನು ನೃತ್ಯ ಮಾಡುತ್ತೇನೆ ಎಂದು ದಕ್ಷಿಣ ಕೊರಿಯಾದ ಯುವತಿ ಹೇಳಿದ್ದಾಳೆ.
South Korea: ವಿದೇಶಿಗರು ಭಾರತೀಯ ಸಿನೆಮಾ, ಕಲೆ, ಸಂಗೀತದ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಒಲವು ತೋರಿಸುತ್ತಲೇ ಇರುತ್ತಾರೆ. ಯಾವುದೇ ಬಾಲಿವುಡ್ ಸಿನೆಮಾ ಬಂದರೂ ಟ್ರೆಂಡಿಂಗ್ ಸಾಂಗ್ಗೆ ಹೆಜ್ಜೆ ಹಾಕುವ ಪ್ರಯತ್ನ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಕೊರಿಯಾದ ಯುವತಿಯೊಬ್ಬಳು ಭಾಗ್ ಮಿಲ್ಕಾ ಭಾಗ್ (Bhaag Milkha Bhaag) ಸಿನೆಮಾದ ಓ ರಂಗ್ರೇಝ್ ಹಾಡಿಗೆ ನೃತ್ಯ ಮಾಡಿದ್ದಾಳೆ. ಇದು ಭಾರತೀಯ ಸಂಗೀತದ ಶಕ್ತಿ, ಮತ್ತು ಪ್ರಭಾವವನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. @luna_yogini_official ಎಂಬ ಇನ್ಸ್ಟಾ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ‘ನನ್ನ ಹೃದಯ ಭಾರವಾಗಿತ್ತು ಹಾಗಾಗಿ ಈ ಹಾಡಿಗೆ ಈ ನೃತ್ಯ ಸಂಯೋಜನೆ ಮಾಡಲು ನಿರ್ಧರಿಸಿದೆ. ಸಂಗೀತ ಕೇಳಿದಾಗ ಮಾತ್ರ ನಾನು ಶಾಂತವಾಗುತ್ತೇನೆ. ಈ ನೃತ್ಯ ಮಾಡುತ್ತ ನಾನು ಆ ಉತ್ಕೃಷ್ಟ ಭಾವವನ್ನು ಅನುಭವಿಸಿದೆ. ಭಾರತೀಯ ಸಂಗೀತದ ಶಕ್ತಿ ಮತ್ತು ಪರಿಣಾಮ ಇದು.’ ಎಂಬ ಒಕ್ಕಣೆ ಈ ಪೋಸ್ಟ್ಗೆ ಇದೆ.
ಇದನ್ನೂ ಓದಿ : Viral Optical Illusion: ಈ ವಿಡಿಯೋದಲ್ಲಿ ಏನು ನಡೆಯುತ್ತಿದೆ ಎನ್ನುವುದು ನಿಮಗೆ ಅರ್ಥವಾಗಬಹುದೆ?
ಜು. 23ರಂದು ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. 1 ಲಕ್ಷಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದು 6 ಮಿಲಿಯನ್ ಜನರು ಇದನ್ನು ನೋಡಿದ್ದಾರೆ. ಈಕೆಯ ಆಸಕ್ತಿ ಮತ್ತು ನೃತ್ಯವನ್ನು ನೋಡಿ ಬೆರಗಾಗಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿ ಹುರಿದುಂಬಿಸಿದ್ದಾರೆ.
ನೋಡಿ ರಂಗ್ರೇಝ್ಗೆ ಕೊರಿಯನ್ ಯುವತಿಯ ನೃತ್ಯ
View this post on Instagram
ನಿಜಕ್ಕೂ ನೀವು ಅತ್ಯಂತ ಚೆನ್ನಾಗಿ ನರ್ತಿಸಿದ್ದೀರಿ ಎಂದಿದ್ದಾರೆ ಒಬ್ಬರು. ನಿಮ್ಮ ನೃತ್ಯದ ಪ್ರೀತಿಯನ್ನು ಇದು ತೋರಿಸುತ್ತಿದೆ ಎಂದು ಇನ್ನೊಬ್ಬರು. ಈ ಹಾಡು ಮತ್ತು ನಿಮ್ಮ ನೃತ್ಯ ಆತ್ಮಕ್ಕೆ ತಲುಪುತ್ತದೆ. ಮತ್ತಷ್ಟು ನೃತ್ಯದಲ್ಲಿ ತೊಡಗಿಕೊಳ್ಳಿ ಎಂದಿದ್ದಾರೆ ಮತ್ತೊಬ್ಬರು. ನೀವು ನೃತ್ಯವನ್ನು ಅನುಭವಿಸುವಿರಾದರೆ ಕೊರಿಯನ್ ಆದರೇನು ಭಾರತೀಯ ನೃತ್ಯವಾದರೇನು? ಆನಂದ ಮುಖ್ಯ. ಅದನ್ನು ಅನುಭವಿಸುವುದು ನಿಮಗೆ ಗೊತ್ತಿದೆ, ಒಳಿತಾಗಲಿ ಎಂದಿದ್ದಾರೆ ಮಗದೊಬ್ಬರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ