Viral Optical Illusion: ಈ ವಿಡಿಯೋದಲ್ಲಿ ಏನು ನಡೆಯುತ್ತಿದೆ ಎನ್ನುವುದು ನಿಮಗೆ ಅರ್ಥವಾಗಬಹುದೆ?

Brain Teaser: ಕೆಲಸ ಮಾಡಿ ಸುಸ್ತಾಗಿದೆ. ಎಂದಿಗಿಂತ ತುಸು ತಂಪಾದ ವಾತಾವರಣ. ಬೇಗನೆ ಮನೆ ಸೇರಿ ಕಾಫಿಯೋ ಚಹಾವನ್ನೋ ಹೀರಬೇಕು. ಕಾಲು ಚಾಚಿಕೊಂಡು ಮಲಗಬೇಕು. ಮನೆಗೆ ತಲುಪುವುದರೊಳಗೆ ಇದೊಂದು ಸಮಸ್ಯೆಯನ್ನು ನೀವು ಬಿಡಿಸಬಹುದೆ? ಇಲ್ಲಿರುವ ಈ ಆಪ್ಟಿಕಲ್​ ವಿಡಿಯೋದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ನೀವು ಗ್ರಹಿಸಬಹುದೆ? ಪ್ರಯತ್ನಿಸಿ.

Viral Optical Illusion: ಈ ವಿಡಿಯೋದಲ್ಲಿ ಏನು ನಡೆಯುತ್ತಿದೆ ಎನ್ನುವುದು ನಿಮಗೆ ಅರ್ಥವಾಗಬಹುದೆ?
ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೆ?
Follow us
ಶ್ರೀದೇವಿ ಕಳಸದ
|

Updated on: Sep 05, 2023 | 5:50 PM

Optical Illusion: ಪ್ರತೀ ಸಲ ಭ್ರಮಾತ್ಮಕ ಚಿತ್ರವನ್ನು ನೋಡುತ್ತಿದ್ದಿರಿ. ಇದೀಗ ಭ್ರಮಾತ್ಮಕ ವಿಡಿಯೋ ನೋಡಬಹುದಾಗಿದೆ. ಈ ವಿಡಿಯೋದಲ್ಲಿ ಏನು ನಡೆಯುತ್ತಿದೆ ಎನ್ನುವುದುನ್ನು ಅರ್ಥೈಸಿಕೊಳ್ಳುವ ಸವಾಲನ್ನು ನಿಮಗೆ ಒಡ್ಡಲಾಗಿದೆ. X ನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೆಟ್ಟಿಗರಿಗೆ ಸಾಕಷ್ಟು ಗೊಂದಲವನ್ನುಂಟು ಮಾಡಿದೆ. ಕೆಲವರು ಮಾತ್ರ ಉತ್ತರಿಸಲು ಪ್ರಯತ್ನಿಸಿದ್ದಾರೆ. ಉಳಿದವರು ಖಂಡಿತ ಸಾಧ್ಯವೇ ಇಲ್ಲ, ಸೋತಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಈತನಕ ಈ ವಿಡಿಯೋ ಅನ್ನು 9 ಮಿಲಿಯನ್ ಜನರು ನೋಡಿದ್ದಾರೆ. ನೋಡಿ ನೀವೂ ಈ ಭ್ರಮಾತ್ಮಕ ವಿಡಿಯೋದಲ್ಲಿ (Video) ಏನಿದೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಿ.

ಇದನ್ನೂ ಓದಿ : Viral Video: ಪ್ರಯಾಣಿಕರೊಬ್ಬರಿಗೆ ಅತಿಸಾರ; ಇದು ಜೈವಿಕ ಅಪಾಯ ಎಂದು ವಿಮಾನವನ್ನೇ ಯೂಟರ್ನ್ ಮಾಡಿದ ಪೈಲಟ್

@fasc1nate ಎಂಬ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ಕಟ್ಟಡದ ಬಾಲ್ಕನಿಗಳ ಮೇಲೆ ಕೆಲವರು ಕುಳಿತಿರುವ ದೃಶ್ಯ ಈ ವಿಡಿಯೋದಲ್ಲಿ ಕಾಣಸಿಗುತ್ತದೆ. ಇನ್ನೂ ಕೆಲವರು ಈ ಕಟ್ಟಡದ ಗೋಡೆಯ ಮೇಲೆ ನಡೆದಾಡುತ್ತಿದ್ದಾರೆ. ಕಟ್ಟಡದ ಆಚೆ ನಿಂತಿರುವ ವೀಕ್ಷಕರು ನಿಂತಿರುವ ಕೋನವನ್ನು ನೋಡಿದರೆ ಯಾರಿಗೂ ಖಂಡಿತ ಗೊಂದಲ ಉಂಟಾಗುತ್ತದೆ.

ಈ ಭ್ರಮಾತ್ಮಕ ವಿಡಿಯೋ ಗಮನಿಸಿ

ಸೆ. 1ರಂದು ಪೋಸ್ಟ್ ಮಾಡಲಾದ ಈ ವಿಡಿಯೋಗೆ ಅನೇಕರು ವಿಧವಿಧವಾಗಿ ಪ್ರತಿಕ್ರಿಯಿಸಿದ್ದಾರೆ. ನನಗಿದು ಅರ್ಥವೇ ಆಗುತ್ತಿಲ್ಲ ಎಂದಿದ್ದಾರೆ ಒಬ್ಬರು. ಇಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ನನಗೆ ಕೆಲವಾರು ನಿಮಿಷಗಳೇ ಬೇಕಾಯಿತು ಎಂದಿದ್ದಾರೆ ಮತ್ತೊಬ್ಬರು. ನನ್ನಿಂದ ಈ ಸವಾಲು ಬಿಡಿಸುವುದು ಸಾಧ್ಯವೇ ಇಲ್ಲ, ನನ್ನನ್ನು ಬಿಟ್ಟುಬಿಡಿ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಎಂಜಿನ್​ ಇಲ್ಲ ಚಾಲಕನಿಲ್ಲ ನಿಗೂಢವಾಗಿ ಚಲಿಸಿದ ರೈಲು; ಆತ್ಮನಿರ್ಭರ್ ರೈಲು ಎಂದ ನೆಟ್ಟಿಗರು

ಎರಡು ಸಲ ಈ ವಿಡಿಯೋ ನೋಡಿದ ಮೇಲೆ ಇದರಲ್ಲಿ ಏನಿದೆ ಎಂದು ನನಗೆ ತಿಳಿಯಿತು ಎಂದಿದ್ದಾರೆ ಕೆಲಜನರು. ಹಾಗಿದ್ದರೆ ಏನು ನೋಡಿದಿರಿ ಹೇಳಿ ಎಂದು ಇನ್ನೂ ಕೆಲವರು ಅವರನ್ನು ಕೇಳಿದರೆ ಉತ್ತರವೇ ಇಲ್ಲ! ಈ ಆಪ್ಟಿಕಲ್​ ಇಲ್ಲ್ಯೂಷನ್​ ವಿಡಿಯೋದಲ್ಲಿ ನಿಮಗೇನು ಕಂಡಿತು? ಇದೊಂದು ತ್ರೀಡಿ ಆರ್ಟ್​ನಂತೆ ಕಾಣುತ್ತಿಲ್ಲವೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್