ಮಶ್ರೂಮ್ ಸೂಪ್‌ನಲ್ಲಿ ಜೀವಂತ ಇಲಿಯನ್ನು ನೋಡಿ ಕಂಗಾಲಾದ ಗ್ರಾಹಕ
ಸೂಪ್ ಆರ್ಡರ್ ಮಾಡಿದ್ದ ಗ್ರಾಹ ದೊಡ್ಡ ಅಣಬೆ ಇರಬೇಕೆಂದುಕೊಂಡು ಸೂಪ್ ಕುಡಿಯಲು ಆರಂಭಿಸಿದ್ದಾರೆ. ಆಗ ಅವರಿಗೆ ಆ ವಸ್ತು ಅಲುಗಾಡುತ್ತಿರುವುದು ಕಂಡಿದೆ. ಇದರಿಂದ ಅನುಮಾನಗೊಂಡು ಪರಿಶೀಲಿಸಿದಾಗ ಇಲಿಮರಿ ಎಂಬುದು ಗೊತ್ತಾಗಿದೆ.
ರೆಸ್ಟೋರೆಂಟ್ನಲ್ಲಿ ಊಟ ಮಾಡುವಾಗ ಜಿರಲೆ ಸಿಗುವುದು, ನೊಣ, ಕೀಟಗಳು ಸಿಗುವುದು ಇಂತಹ ಕೆಲವು ಘಟನೆಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಆದರೆ, ಸ್ಯಾಮ್ ಹೇವರ್ಡ್ ಎಂಬ ಇಂಗ್ಲೆಂಡ್ ನಿವಾಸಿಯೊಬ್ಬರು ತಾವು ಆರ್ಡರ್ ಮಾಡಿದ್ದ ಚೈನೀಸ್ ಸೂಪ್‌ನಲ್ಲಿ ಜೀವಂತವಾಗಿದ್ದ ಇಲಿಮರಿಯೊಂದನ್ನು ಕಂಡು ಶಾಕ್ ಆಗಿದ್ದಾರೆ. ಮಶ್ರೂಮ್ ನೂಡಲ್ ಸೂಪ್ ಹೋಂ ಡೆಲಿವರಿಗೆ ಆರ್ಡರ್ ಮಾಡಿದ್ದ ಅವರು ಮನೆಗೆ ಬಂದ ಸೂಪ್‌ನಲ್ಲಿ ಇಲಿ ಬಿದ್ದಿರುವುದನ್ನು ಕಂಡು ಕಂಗಾಲಾಗಿದ್ದಾರೆ.
ಆರಂಭದಲ್ಲಿ ಅವರಿಗೆ ಸೂಪ್‌ನಲ್ಲಿ ಇಲಿ ಇರುವುದು ತಿಳಿದಿಲ್ಲ. ದೊಡ್ಡ ಅಣಬೆ ಇರಬೇಕೆಂದುಕೊಂಡು ಸೂಪ್ ಕುಡಿಯಲು ಆರಂಭಿಸಿದ ಅವರಿಗೆ ಆ ವಸ್ತು ಅಲುಗಾಡುತ್ತಿರುವುದು ಕಂಡಿದೆ. ಇದರಿಂದ ಅನುಮಾನಗೊಂಡು ಪರಿಶೀಲಿಸಿದ್ದಾರೆ. ಆಗ ಸೂಪ್‌ನಲ್ಲಿ ಬಾಲ ಕಾಣಿಸಿದೆ. ಅದನ್ನು ಹಿಡಿದು ಮೇಲೆತ್ತಿದಾಗ ಇಲಿಮರಿ ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: Viral Video: ಮೊದಲ ಬಾರಿಗೆ ಭಾರತೀಯ ಶೈಲಿಯ ಆಹಾರ ತಿಂದು ಬಾಯಿ ಚಪ್ಪರಿಸಿದ ವಿದೇಶಿ ಮಹಿಳೆ
ಇದರಿಂದ ದಿಗ್ಭ್ರಮೆಗೊಂಡ ಹೇವರ್ಡ್ ಸೂಪ್ನಲ್ಲಿದ್ದ ಆ ಇಲಿಯ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಬಳಿಕ ಆ ರೆಸ್ಟೋರೆಂಟ್ ಅನ್ನು ಸಂಪರ್ಕಿಸಿದ್ದಾರೆ. ಸೂಪ್‌ನಲ್ಲಿ ಇಲಿ ಸಿಕ್ಕ ವಿಷಯವನ್ನು ಅವರಿಗೆ ತಿಳಿಸಿದ್ದಾರೆ. ಆದರೆ, ಆ ರೆಸ್ಟೋರೆಂಟ್ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಹೇಳಿತು. ಅಲ್ಲದೆ, ಹಣವನ್ನು ಮರುಪಾವತಿ ಮಾಡಲು ನಿರಾಕರಿಸಿತು.
ಇದನ್ನೂ ಓದಿ: Winter Soups: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಟ್ಟು, ರೋಗಗಳಿಂದ ನಿಮ್ಮನ್ನು ರಕ್ಷಿಸುವ ಈ ಸೂಪ್ಗಳನ್ನು ಒಮ್ಮೆ ಟ್ರೈ ಮಾಡಿ
ಅವರು ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡಿಕೊಂಡಿದ್ದರಿಂದ ಆನ್ಲೈನ್ನಲ್ಲಿ ಹಣ ಪಾವತಿಸಿದ ದಾಖಲೆ ಇರಲಿಲ್ಲ. ಅವರ ಬಳಿ ರಶೀದಿ ಕೂಡ ಇರಲಿಲ್ಲ. ಇದರಿಂದಾಗಿ ಅವರಿಗೆ ಅವರು ಪಾವತಿ ಮಾಡಿದ ಹಣ ವಾಪಾಸ್ ಸಿಗಲಿಲ್ಲ.