AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಂದ್ರಾದ ಪ್ರಸಿದ್ಧ ರೆಸ್ಟೋರೆಂಟ್​ನ ಖಾದ್ಯದಲ್ಲಿ ಸತ್ತ ಇಲಿ ಪತ್ತೆ, ಮ್ಯಾನೇಜರ್ ಸಹಿತ ಇಬ್ಬರ ಬಂಧನ

ಚಿಕನ್, ಮಟನ್, ಮೊಟ್ಟೆ, ಮೀನು ಹೀಗೆ ವಿವಿಧ ಖಾದ್ಯಗಳನ್ನು ಸವಿಯಲು ಮಾಂಸಾಹಾರ ಪ್ರಿಯರು ಕಾತುರದಿಂದ ಕಾಯುತ್ತಿರುತ್ತಾರೆ. ಆದರೆ ರೆಸ್ಟೋರೆಂಟ್​ಗಳಲ್ಲಿ ಇಂಥದ್ದೊಂದು ಘಟನೆ ನಡೆದಾಗ ಇನ್ನುಮುಂದೆ  ಯಾವ ಹೋಟೆಲ್​ನಲ್ಲಿಯೂ ಊಟವನ್ನೇ ಮಾಡಬಾರದು ಎಂದೆನಿಸುವುದಂತೂ ಸತ್ಯ.

ಬಾಂದ್ರಾದ ಪ್ರಸಿದ್ಧ ರೆಸ್ಟೋರೆಂಟ್​ನ ಖಾದ್ಯದಲ್ಲಿ ಸತ್ತ ಇಲಿ ಪತ್ತೆ, ಮ್ಯಾನೇಜರ್ ಸಹಿತ ಇಬ್ಬರ ಬಂಧನ
ಇಲಿ
ನಯನಾ ರಾಜೀವ್
|

Updated on: Aug 16, 2023 | 2:30 PM

Share

ಚಿಕನ್, ಮಟನ್, ಮೊಟ್ಟೆ, ಮೀನು ಹೀಗೆ ವಿವಿಧ ಖಾದ್ಯಗಳನ್ನು ಸವಿಯಲು ಮಾಂಸಾಹಾರ ಪ್ರಿಯರು ಕಾತುರದಿಂದ ಕಾಯುತ್ತಿರುತ್ತಾರೆ. ಆದರೆ ರೆಸ್ಟೋರೆಂಟ್​ಗಳಲ್ಲಿ ಇಂಥದ್ದೊಂದು ಘಟನೆ ನಡೆದಾಗ ಇನ್ನುಮುಂದೆ  ಯಾವ ಹೋಟೆಲ್​ನಲ್ಲಿಯೂ ಊಟವನ್ನೇ ಮಾಡಬಾರದು ಎಂದೆನಿಸುವುದಂತೂ ಸತ್ಯ. ರೆಸ್ಟೊರೆಂಟ್, ಹೋಟೆಲ್, ಢಾಬಾಗಳಲ್ಲಿ ಚಿಕನ್, ಮಟನ್, ಮೊಟ್ಟೆ, ಮೀನು ಹೀಗೆ ಅನೇಕ ಮಾಂಸದಿಂದ ತಯಾರಿಸುವ ಖಾದ್ಯತೆಗಳಿಗೆ ತುಂಬಾ ಬೇಡಿಕೆ ಇದೆ.

ನೀವು ಚಿಕನ್ ಮತ್ತು ಮಟನ್ ಅನ್ನು ಆರ್ಡರ್ ಮಾಡಿದ್ದೀರಿ ಮತ್ತು ನಿಮ್ಮ ಆಹಾರದಿಂದ ಸತ್ತ ಇಲಿ ಅಥವಾ ಇನ್ನಾವುದೇ ಪ್ರಾಣಿ ಕಂಡರೆ ಏನಾಗುತ್ತದೆ. ಅಂಥದ್ದೇ ಘಟನೆಯೊಂದು ಬಾಂದ್ರಾದ PapaPanchodadhaba ದಲ್ಲಿ ನಡೆದಿದೆ ಆ ವ್ಯಕ್ತಿ ಚಿಕನ್ ಖಾದ್ಯವನ್ನು ಆರ್ಡರ್ ಮಾಡಿದ್ದರು ಆದರೆ ಅವರ ತಟ್ಟೆಗೆ ಬಡಿಸುವಾಗ ಸಿಬ್ಬಂದಿ ಚಿಕನ್ ಜತೆಗೆ ಸತತ್ ಇಲಿಯನ್ನೂ ಹಾಕಿದ್ದರು.

ಬಾಂದ್ರಾ ಪೊಲೀಸ್ ಠಾಣೆಯಲ್ಲಿ ರೆಸ್ಟೋರೆಂಟ್ ವಿರುದ್ಧ ದೂರು ದಾಖಲಿಸಲಾಗಿದೆ, ಅವರು ರಾತ್ರಿ ಪಾಲಿ ನಾಕಾ ಬಳಿಯ ಢಾಬಾದಲ್ಲಿ ಚಿಕನ್ ಡಿಶ್ ಆರ್ಡರ್ ಮಾಡಿದ್ದಾರೆ. ಊಟ ಬಡಿಸಿದಾಗ ಚಿಕನ್ ಬದಲಿಗೆ ಸತ್ತ ಇಲಿಯೊಂದು ಹೊರಬಿದ್ದಿತ್ತು. ಪೊಲೀಸರು ಮ್ಯಾನೇಜರ್ ಸೇರಿದಂತೆ ಅಡುಗೆಯವರನ್ನು ಬಂಧಿಸಿದ್ದಾರೆ.

ಮತ್ತಷ್ಟು ಓದಿ: ಆಹಾರ ನಷ್ಟ, ಆಹಾರ ತ್ಯಾಜ್ಯ, ಆಹಾರದ ಹೆಚ್ಚುವರಿ ನಡುವಿನ ವ್ಯತ್ಯಾಸವೇನು?

ಅಡುಗೆಯವರಾದ ನಾರಾಯಣ ದಾಸ್ ಮತ್ತು ಸಂಜೀವ್ ಕರ್, ರೆಸ್ಟೋರೆಂಟ್ ಮ್ಯಾನೇಜರ್ ವಿವಿಯನ್ ಸಿಕ್ವೇರಾ ಅವರನ್ನು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಆಹಾರ ಮತ್ತು ಪಾನೀಯಗಳ ಕಲಬೆರಕೆ ಮಾರಾಟ ಮಾಡಿದ್ದಕ್ಕಾಗಿ ದೂರು ದಾಖಲಾಗಿದೆ.

ಇಲ್ಲಿಯವರೆಗೂ ರೆಸ್ಟೋರೆಂಟ್ ಇತಿಹಾಸದಲ್ಲಿ ಇಂತಹ ಘಟನೆ ನಡೆದಿಲ್ಲ ಎನ್ನುತ್ತಾರೆ ಮ್ಯಾನೇಜರ್. ಗ್ರಾಹಕರಿಗೆ ಊಟ ಬಡಿಸುವಾಗ ನಾನು ಇರಲಿಲ್ಲ ಎಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ