Sign In

By signing in or creating an account, you agree with Associated Broadcasting Company's Terms & Conditions and Privacy Policy.

Suguna Chicken: ಸುಗುಣ ಚಿಕನ್ ಸ್ಥಾಪನೆ ಹಾಗೂ ಅದರ ಮಾಲೀಕರ ಇಂಟರೆಸ್ಟಿಂಗ್ ಕಥೆ

Saundararajan and Sundararajan Brothers: ತಮಿಳುನಾಡಿನಲ್ಲಿ ಕೇವಲ 3 ರೈತರೊಂದಿಗಿನ ಗುತ್ತಿಗೆ ಮೂಲಕ ಆರಂಭವಾದ ಸುಗುಣ ಫೂಡ್ಸ್ ಇವತ್ತು 18 ರಾಜ್ಯಗಳಲ್ಲಿ 40,000ಕ್ಕೂ ಹೆಚ್ಚು ಪೌಲ್ಟ್ರಿಗಳು ಜೋಡಿತವಾಗಿವೆ. ಸೌಂದರರಾಜನ್ ಮತ್ತು ಸುಂದರರಾಜನ್ ಈ ಕಂಪನಿ ಮಾಲೀಕರು.

Suguna Chicken: ಸುಗುಣ ಚಿಕನ್ ಸ್ಥಾಪನೆ ಹಾಗೂ ಅದರ ಮಾಲೀಕರ ಇಂಟರೆಸ್ಟಿಂಗ್ ಕಥೆ
ಸುಗುಣ ಫುಡ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 23, 2023 | 4:46 PM

ಸುಗುಣ ಫುಡ್ಸ್ (Suguna Foods) ಬಗ್ಗೆ ಕೇಳಿರಬಹುದು. ಹಲವು ಕೋಳಿ ಅಂಗಡಿಗಳಲ್ಲಿ ಸುಗುಣ ಬ್ರ್ಯಾಂಡ್ ಹೆಸರು ನೋಡಿರುತ್ತೀರಿ. ಸುಗುಣ ಎಂಬುದು ಭಾರತದ ಅತಿದೊಡ್ಡ ಚಿಕನ್ ಬ್ರ್ಯಾಂಡ್. ಪೌಲ್ಟ್ರಿ ಬ್ಯುಸಿನೆಸ್ ಅಥವಾ ಕುಕ್ಕುಟೋದ್ಯಮದಲ್ಲಿ ನಂಬರ್ ಒನ್ ಕಂಪನಿ. 1984ರಲ್ಲಿ ಆರಂಭವಾದ ಈ ಕಂಪನಿಯ ವ್ಯವಹಾರ ಇವತ್ತು 12,000 ಕೋಟಿ ರೂ ಉದ್ದಿಮೆಯಾಗಿ ಬೆಳೆದಿದೆ. ಬಿ ಸೌಂದರರಾಜನ್ ಮತ್ತು ಜಿಬಿ ಸುಂದರರಾಜನ್ ಅವರು ಸುಗುಣ ಫೂಡ್ಸ್ ಕಂಪನಿಯ ಮಾಲೀಕರು. ಬ್ರಾಯ್ಲರ್ ಬ್ರೀಡ್​ನ ಕೋಳಿ ಮತ್ತು ಮೊಟ್ಟೆಗಳ ಬ್ಯುಸಿನೆಸ್​ನಲ್ಲಿ ಸುಗುಣ ನಂಬರ್ ಒನ್.

ಸುಗುಣ ಫೂಡ್ಸ್ ಸಂಸ್ಥೆಯ ಛೇರ್ಮನ್ ಬಿ ಸೌಂದರರಾಜನ್ ಅವರು ಪೌಲ್ಟ್ರಿ ಬ್ಯುಸಿನೆಸ್ ಆರಂಭಿಸುವ ಸಾಹಸದ ಹಿಂದೆ ಕುತೂಹಲಕಾರಿ ಕಥೆ ಇದೆ. ಸೌಂದರರಾಜನ್ ಅವರು ಶಾಲಾ ಶಿಕ್ಷಣದ ಬಳಿಕ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ನಿರೀಕ್ಷಿತ ಲಾಭ ಬರದೇ ಹೋದಾಗ ಹೈದರಾಬಾದ್​ಗೆ ಹೋಗಿ ಅಗ್ರಿಕಲ್ಚರಲ್ ಪಂಪ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರುತ್ತಾರೆ. ಬಳಿಕ ಅವರ ಸಹೋದರ ಸುಂದರರಾಜನ್ ಅವರು ನಡೆಸುತ್ತಿದ್ದ ಬ್ಯುಸಿನೆಸ್ ಜೊತೆಗೂಡುತ್ತಾರೆ.

ಇದನ್ನೂ ಓದಿInspirational Story: ಆರಂಭಿಕ ಬಂಡವಾಳ ಕೇವಲ 810 ರೂ, ಇವತ್ತು ಗೋವಿಂದ್ ಧೋಲಾಕಿಯಾ ಉದ್ದಿಮೆ ಮೌಲ್ಯ 4,800 ಕೋಟಿ ರೂ

ರೈತರಿಗೆ ಚಿಕನ್ ಆಹಾರ ಮಾರುವುದು ರಾಜನ್ ಸಹೋದರರ ಬ್ಯುಸಿನೆಸ್ ಆಗಿತ್ತು. ಆಗ ರೈತರಿಗೆ ಕೋಳಿ ಸಾಕಾಣಿಕೆಯಲ್ಲಿ ಹಲವಾರು ಸಮಸ್ಯೆಗಳಿದ್ದವು. ಅದನ್ನು ಕಣ್ಣಾರೆ ಕಂಡ ಸೌಂದರರಾಜನ್ ಮತ್ತು ಸುಂದರರಾಜನ್ ಅವರಿಬ್ಬರು ಗುತ್ತಿಗೆ ಕೃಷಿ ಅಥವಾ ಕಾಂಟ್ರಾಕ್ಟ್ ಫಾರ್ಮಿಂಗ್ ಆರಂಭಿಸಿದರು. ಅದು ಆ ದಿನಗಳಲ್ಲಿ ಭಾರತಕ್ಕೆ ಹೊಸ ವಿಚಾರ.

1990ರಲ್ಲಿ 3 ಮಂದಿ ರೈತರು ಮಾತ್ರ ರಾಜನ್ ಸಹೋದರರ ಗುತ್ತಿಗೆ ಫಾರ್ಮಿಂಗ್​ಗೆ ಸೇರಿದ್ದರು. ಆಗ ಮೊದಲ ವರ್ಷದ ವಹಿವಾಟು ಕೇವಲ 5,000 ರೂ ಆಗಿತ್ತು. ಕೊಯಮತ್ತೂರು ಸಮೀಪದ ಉದಮಲೈಪೇಟೈಯಲ್ಲಿ ಮೊದಲ ಕೋಳಿಫಾರ್ಮ್ ಸ್ಥಾಪನೆಯಾಗಿತ್ತು. ಕೋಳಿಗಳನ್ನು ಬೆಳೆಯಲು ಬೇಕಾದ ಎಲ್ಲಾ ನೆರವನ್ನೂ ರಾಜನ್ ಬ್ರದರ್ಸ್ ನೀಡುತ್ತಿದ್ದರು. ಕೋಳಿಗಳು ಬೆಳೆದ ಬಳಿಕ ಅವನ್ನು ಖರೀದಿಸುತ್ತಿದ್ದರು. 7 ವರ್ಷಗಳ ಬಳಿಕ ಸುಗುಣ ಫೂಡ್ಸ್ ಸಂಸ್ಥೆಗೆ 40 ಕೋಳಿಸಾಕಾಣಿಕೆದಾರರು ಸೇರ್ಪಡೆಯಾದರು. ಕ್ರಮೇಣವಾಗಿ ಸುಗುಣ ಎಂಬುದು ತಮಿಳುನಾಡಿನಲ್ಲಿ ಚಿರಪರಿಚಿತವಾಯಿತು.

ಇದನ್ನೂ ಓದಿInspiring: ಕಾಲೇಜು ಶುಲ್ಕ ಕಟ್ಟಲು ಚಹಾ ಮಾರುತ್ತಿದ್ದ ವಿಜಯ್ ಇವತ್ತು ಸಾವಿರ ಕೋಟಿ ರೂ ರಾಯಲ್ ಓಕ್ ಒಡೆಯ

ನಂತರ ಸುಗುಣ ಫುಡ್ಸ್ ಸಂಸ್ಥೆ ರೈತರಿಗೆ ಆರೋಗ್ಯಯುತ ಕೋಳಿ ಸಾಕಾಣಿಕೆಗೆ ಮಾಡುವ ಹೈಟೆಕ್ ವಿಧಾನಗಳ ಸೌಲಭ್ಯ ಒದಗಿಸ ತೊಡಗಿತು. ಸುಗುಣ ಫೂಡ್ಸ್ ಇವತ್ತು ತಮಿಳುನಾಡು ಮಾತ್ರವಲ್ಲ 18 ರಾಜ್ಯಗಳಲ್ಲಿ 15,000 ಗ್ರಾಮಗಳಲ್ಲಿ 40,000 ಕೋಳಿಸಾಕಾಣಿಕೆದಾರರ ಗುತ್ತಿಗೆ ಪಡೆದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು