AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Silver Price on 24 July: ಏರಿಗೆ ಹಾದಿಯಲ್ಲಿ ಮುಂದುವರಿದ ಚಿನ್ನ; ವಿವಿಧ ನಗರ, ದೇಶಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ?

Bullion Market 2023, July 24th: ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 55,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 60,160 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 78 ರು ಆಗಿದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 24 July: ಏರಿಗೆ ಹಾದಿಯಲ್ಲಿ ಮುಂದುವರಿದ ಚಿನ್ನ; ವಿವಿಧ ನಗರ, ದೇಶಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ?
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 24, 2023 | 5:16 AM

Share

ಬೆಂಗಳೂರು, ಜುಲೈ 24: ಕಳೆದ ವಾರ ಬಹುತೇಕ ನಿರಂತರವಾಗಿ ಏರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold Rates) ವೀಕೆಂಡ್​ನ ಎರಡು ದಿನ ಇಳಿಕೆ ಕಂಡಿವೆ. ಕಳೆದ ಮೂರು ವಾರಗಳಿಂದ ಚಿನ್ನದ ಬೆಲೆ ಬಹುತೇಕ ನಿರಂತರವಾಗಿ ಏರಿತ್ತು. ಜೂನ್ 29ರಂದು 10 ಗ್ರಾಮ್​ಗೆ 53,850 ರೂ ಇದ್ದ ಚಿನ್ನದ ಬೆಲೆ ಜುಲೈ 20ರಂದು 55,700 ರೂ ಗಡಿ ದಾಟಿತ್ತು. 20 ದಿನದಲ್ಲಿ 850 ರೂನಷ್ಟು ಬೆಲೆ ಏರಿಕೆಯಾಗಿತ್ತು. ನಂತರ ಬೆಲೆ ತುಸು ತಗ್ಗಿ ಚಿನ್ನಪ್ರಿಯರಿಗೆ ಖುಷಿ ತರಿಸಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 55,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 60,160 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 55,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,650 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 24ಕ್ಕೆ):

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,150 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,160 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 780 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,150 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,160 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 765 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 55,150 ರೂ
  • ಚೆನ್ನೈ: 56,550 ರೂ
  • ಮುಂಬೈ: 55,150 ರೂ
  • ದೆಹಲಿ: 55,300 ರೂ
  • ಕೋಲ್ಕತಾ: 55,150 ರೂ
  • ಕೇರಳ: 55,150 ರೂ
  • ಅಹ್ಮದಾಬಾದ್: 55,200 ರೂ
  • ಜೈಪುರ್: 55,300 ರೂ
  • ಲಕ್ನೋ: 55,300 ರೂ
  • ಭುವನೇಶ್ವರ್: 55,150 ರೂ

ಇದನ್ನೂ ಓದಿSuguna Chicken: ಸುಗುಣ ಚಿಕನ್ ಸ್ಥಾಪನೆ ಹಾಗೂ ಅದರ ಮಾಲೀಕರ ಇಂಟರೆಸ್ಟಿಂಗ್ ಕಥೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

  • ಮಲೇಷ್ಯಾ: 2,860 ರಿಂಗಿಟ್ (51,484 ರುಪಾಯಿ)
  • ದುಬೈ: 2200 ಡಿರಾಮ್ (49,110 ರುಪಾಯಿ)
  • ಅಮೆರಿಕ: 600 ಡಾಲರ್ (49,194 ರುಪಾಯಿ)
  • ಸಿಂಗಾಪುರ: 812 ಸಿಂಗಾಪುರ್ ಡಾಲರ್ (50,031 ರುಪಾಯಿ)
  • ಕತಾರ್: 2,270 ಕತಾರಿ ರಿಯಾಲ್ (51,117 ರೂ)
  • ಓಮನ್: 239.50 ಒಮಾನಿ ರಿಯಾಲ್ (51,038 ರುಪಾಯಿ)
  • ಕುವೇತ್: 187.50 ಕುವೇತಿ ದಿನಾರ್ (50,096 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 7,650 ರೂ
  • ಚೆನ್ನೈ: 8,050 ರೂ
  • ಮುಂಬೈ: 7,800 ರೂ
  • ದೆಹಲಿ: 7,800 ರೂ
  • ಕೋಲ್ಕತಾ: 7,800 ರೂ
  • ಕೇರಳ: 8,050 ರೂ
  • ಅಹ್ಮದಾಬಾದ್: 7,800 ರೂ
  • ಜೈಪುರ್: 7,800 ರೂ
  • ಲಕ್ನೋ: 7,800 ರೂ
  • ಭುವನೇಶ್ವರ್: 8,050 ರೂ

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More