ಇದು ಜಗತ್ತಿನಲ್ಲೇ ಅತಿ ದೊಡ್ಡ ಕುಟುಂಬ! ಒಂದೇ ಮನೆಯಲ್ಲಿ 39 ಪತ್ನಿಯರು, 94 ಮಕ್ಕಳು, 36 ಮರಿಮಕ್ಕಳು!
ಪ್ರಪಂಚದ ಅತಿದೊಡ್ಡ ಕುಟುಂಬವು ಪೂರ್ವ ಭಾರತದ ಮಿಜೋರಾಂನ ಬಕ್ಟಾಂಗ್ ತಲಂಗ್ನಮ್ ಗ್ರಾಮದಲ್ಲಿ ವಾಸಿಸುತ್ತಿದೆ. ಈ ಕುಟುಂಬದ ಮುಖ್ಯಸ್ಥ ಜಿಯೋನಾ ಚಾನಾ 2021 ರಲ್ಲಿ ನಿಧನರಾದರು. ಮಿಜೋರಾಂ ಮುಖ್ಯಮಂತ್ರಿ ಜೋರಾಮಂಗಾ ಅವರು ಸಾವಿನ ಸುದ್ದಿಯನ್ನು ಟ್ವೀಟ್ ಮಾಡಿದ್ದರು. ಜಿಯೋನಾ ಅವರ ಕುಟುಂಬ ಬಹಳ ವಿಶೇಷವಾಗಿದೆ. ಭಾರತೀಯ ಮಾಧ್ಯಮಗಳು ಮಾತ್ರವಲ್ಲದೆ ವಿಶ್ವ ಮಾಧ್ಯಮಗಳೂ ಈ ಕುಟುಂಬದ ಬಗ್ಗೆ ಚರ್ಚಿಸಿವೆ.
ಖ್ಯಾತ ವಕೀಲ ಮತ್ತು ಭಾರತದ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ತಮ್ಮ 68 ನೇ ವಯಸ್ಸಿನಲ್ಲಿ ಮೂರನೇ ಬಾರಿಗೆ ವಿವಾಹವಾದರು. ಅದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೆ, ನಮ್ಮ ದೇಶದಲ್ಲಿ ಬಹುಪತ್ನಿತ್ವ ನಡೆಯುತ್ತಿರುವುದು ಇದೇ ಮೊದಲಲ್ಲ. ಇಂತಹ ಹಲವಾರು ಮದುವೆಗಳ ಸುದ್ದಿಗಳನ್ನು ಆಗಾಗ ಕೇಳುತ್ತಿರುತ್ತೇವೆ. ಆದರೆ, ಮಿಜೋರಾಂನಲ್ಲಿ (Mizoram, India) ಅತಿ ಹೆಚ್ಚು ಮದುವೆಯಾಗುವ ಮೂಲಕ ಪುರುಷನೊಬ್ಬ ಹಾಟ್ ಟಾಪಿಕ್ ಆಗಿದ್ದಾರೆ. ಒಂದಲ್ಲ ಎರಡಲ್ಲ.. ಒಂದೇ ಬಾರಿಗೆ 39 ಮದುವೆ (Wives) ಮಾಡಿಕೊಂಡಿದ್ದ ಫಟಿಂಗ ಆತ. ಆಶ್ಚರ್ಯದ ಸಂಗತಿಯೆಂದರೆ ಆ ಎಲ್ಲಾ ಹೆಂಡತಿಯರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಈ ವ್ಯಕ್ತಿ ವಿಶ್ವದ ಅತಿ ದೊಡ್ಡ ಕುಟುಂಬ (biggest family) ಹೊಂದಿರುವುದಕ್ಕಾಗಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಪ್ರಪಂಚದ ಅತಿದೊಡ್ಡ ಕುಟುಂಬವು ಪೂರ್ವ ಭಾರತದ ಮಿಜೋರಾಂನ ಬಕ್ಟಾಂಗ್ ತಲಂಗ್ನಮ್ ಗ್ರಾಮದಲ್ಲಿ ವಾಸಿಸುತ್ತಿದೆ. ಈ ಕುಟುಂಬದ ಮುಖ್ಯಸ್ಥ ಜಿಯೋನಾ ಚಾನಾ 2021 ರಲ್ಲಿ ನಿಧನರಾದರು. ಮಿಜೋರಾಂ ಮುಖ್ಯಮಂತ್ರಿ ಜೋರಾಮಂಗಾ ಅವರು ಸಾವಿನ ಸುದ್ದಿಯನ್ನು ಟ್ವೀಟ್ ಮಾಡಿದ್ದರು. ಜಿಯೋನಾ ಅವರ ಕುಟುಂಬ ಬಹಳ ವಿಶೇಷವಾಗಿದೆ. ಭಾರತೀಯ ಮಾಧ್ಯಮಗಳು ಮಾತ್ರವಲ್ಲದೆ ವಿಶ್ವ ಮಾಧ್ಯಮಗಳೂ ಈ ಕುಟುಂಬದ ಬಗ್ಗೆ ಚರ್ಚಿಸಿದವು.
ಅವರು 39 ಮಹಿಳೆಯರನ್ನು ವಿವಾಹ ವಾಗಿದ್ದರು. ಆತ ತನ್ನ ಈ ಎಲ್ಲಾ ಹೆಂಡತಿಯರೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದ. ಅವರ 39 ಪತ್ನಿಯರಿಂದ 89 ಮಕ್ಕಳಿದ್ದಾರೆ. ಅವರಿಗೆ 36 ಮೊಮ್ಮಕ್ಕಳೂ ಇದ್ದಾರೆ. ಅವರೂ ಎಲ್ಲಾ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರಿಗಾಗಿ ಆ ಮನೆಯಲ್ಲಿ ಸುಮಾರು 100 ಕೊಠಡಿಗಳಿವೆ. ಆತನ ಮನೆತನದ ಹೆಸರು ಚುನಾರ್ ಥಾನ್ ರಾನ್ ಅಂದರೆ ಹೊಸ ಯುಗದ ಮನೆ ಎಂದರ್ಥ. ಈ ಮನೆ ರಾಜ್ಯದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.
ಜಿಯೋನಾ 1945 ರಲ್ಲಿ ಜನಿಸಿದವರು. ಆತ ತನ್ನ ಮೊದಲ ಹೆಂಡತಿಯನ್ನು 17ನೇ ವಯಸ್ಸಿನಲ್ಲಿ ಮದುವೆಯಾದ. ಅವನಿಗಿಂತ 3 ವರ್ಷ ದೊಡ್ಡವಳು ಆಕೆ. ಈ ಕುಟುಂಬವು ಕ್ರಿಶ್ಚಿಯನ್ ಧರ್ಮದ ಚನಾ ಪಾಲ್ ಪಂಗಡಕ್ಕೆ ಸೇರಿದ್ದು, 2 ಸಾವಿರ ಅನುಯಾಯಿಗಳನ್ನು ಹೊಂದಿದೆ. ಈ ವ್ಯಕ್ತಿಯ ಅಜ್ಜ 1942 ರಲ್ಲಿ ಆ ಸಮಾಜವನ್ನು ಸ್ಥಾಪಿಸಿದರು. ಈ ಸಮುದಾಯವು ಬಹುಪತ್ನಿತ್ವವನ್ನು ಅನುಮತಿಸಿದೆ.
Also Read: ಚಂದ್ರನ ಮೇಲೆ ಜಾಗ ಖರೀದಿಸಿದ ಜಮ್ಮು ಉದ್ಯಮಿ; ಈಗ ನೀವು ಕೂಡ ಚಂದ್ರನಲ್ಲಿ ಸೈಟ್ ಖರೀದಿಸಬಹುದು!
ಈ ಕುಟುಂಬದ ಪ್ರತಿಯೊಬ್ಬರಿಗೂ ಕೆಲವು ನಿರ್ದಿಷ್ಟ ಕೆಲಸಗಳನ್ನು ನಿಗದಿಪಡಿಸಲಾಗಿದೆ. ಇವರ ಮನೆಯಲ್ಲಿ ತುಂಬಾ ದೊಡ್ಡ ಅಡುಗೆ ಕೋಣೆಯಿದೆ. ಸುಮಾರು 180 ಜನರ ಕುಟುಂಬಕ್ಕೆ ಇಲ್ಲಿ ಅಡುಗೆಯನ್ನು ಮಾಡಲಾಗುತ್ತದೆ. ದಿನಕ್ಕೆ 45 ಕೆಜಿ ಅಕ್ಕಿ, 30-40 ಕೋಳಿ, 25 ಕೆಜಿ ಬೇಳೆಕಾಳುಗಳು ಮತ್ತು ಹತ್ತಾರು ಮೊಟ್ಟೆಗಳನ್ನು ಹಾಕಿ, ಅಡುಗೆ ಮಾಡಲಾಗುತ್ತದೆ.