AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವು ತಿನ್ನಲು ಬಾತ್ ರೂಮಿಗೆ ನುಗ್ಗಿದ ಮತ್ತೊಂದು ಬೃಹತ್​​ ನಾಗ, ಎಷ್ಟು ದೊಡ್ಡದು ಅಂದರೆ... ವಿಡಿಯೋ ನೋಡಿ ಬಿಡಿ

ಹಾವು ತಿನ್ನಲು ಬಾತ್ ರೂಮಿಗೆ ನುಗ್ಗಿದ ಮತ್ತೊಂದು ಬೃಹತ್​​ ನಾಗ, ಎಷ್ಟು ದೊಡ್ಡದು ಅಂದರೆ… ವಿಡಿಯೋ ನೋಡಿ ಬಿಡಿ

ಸಾಧು ಶ್ರೀನಾಥ್​
|

Updated on: Sep 06, 2023 | 1:53 PM

ಹಾವು ತಿನ್ನಲು ಬಾತ್ ರೂಮಿಗೆ ನುಗ್ಗಿದ ಮತ್ತೊಂದು ಬೃಹತ್ ಕರಿ​​ ನಾಗ, ಎಷ್ಟು ದೊಡ್ಡದು ಅಂದರೆ... ವಿಡಿಯೋ ನೋಡಿ, ಸಾಮಾನ್ಯವಾಗಿ ಗಿರಿ ನಾಗ ಜಾತಿಯ ಇಂತಹ ಹಾವುಗಳು ಮನುಷ್ಯರು ವಾಸಿಸುವ ಕಡೆಗೆ ಬರುವುದಿಲ್ಲ. ಆದಾಗ್ಯೂ ಕಣ್ಣಿಗೆ ಬಿದ್ದರೆ ಅವುಗಳ ಜೀವಕ್ಕೆ ಅಪಾಯವನ್ನುಂಟು ಮಾಡಬೇಡಿ. ಅವುಗಳಿಗೆ ತೊಂದರೆ ಕೊಡದೆ, ಹಾವು ಹಿಡಿಯುವ ಪರಿಣಿತರಿಗೆ ಮಾಹಿತಿ ನೀಡಿ. ಅವುಗಳನ್ನು ಹಿಡಿದು ಅವರು ಸುರಕ್ಷಿತವಾಗಿ ಅರಣ್ಯಗಳಲ್ಲಿ ಬಿಡುತ್ತಾರೆ.

ವಿಶಾಖಪಟ್ಟಣ (ಆಂಧ್ರಪ್ರದೇಶ), ಸೆಪ್ಟೆಂಬರ್ 6: ಅದೇ ಒಂದು ದೊಡ್ಡ ಹಾವು. ಅದರ ಉದ್ದ ಹತ್ತು ಅಡಿಗೂ ಹೆಚ್ಚು! ಅದಕ್ಕೆ ಸಿಕ್ಕಾಪಟ್ಟೆ ಹಸಿವಾಗಿಬಿಟ್ಟಿದೆ.. ಆಹಾರಕ್ಕಾಗಿ ಅಲ್ಲಿ ಇಲ್ಲಿ ಹುಡುಕಾಟ ನಡೆಸಿದೆ. ಅಷ್ಟರಲ್ಲಿ ಇನ್ನೊಂದು ಹಾವು ಅದರ ಕಣ್ಣಿಗೆ ಬಿದ್ದಿದೆ. ಅದನ್ನೇ ತಿನ್ನಲು ಮುಂದಾಗಿ, ಬೇಟೆಗೆ ಇಳಿದಿದೆ. ಈ ಮಧ್ಯೆ ಮನೆಯಾಕೆ ವಾಶ್ ರೂಮ್ ಗೆ ಹೋಗಿದ್ದಾಳೆ. ಅಲ್ಲಿ ಭಾರೀ ಸದ್ದುಗಳು ಕೇಳಿಬಂದಿವೆ… ಅನಕಪಲ್ಲಿ ಜಿಲ್ಲೆಯಲ್ಲಿ ಈ ಭಾರೀ ಗಿರಿ ನಾಗನ ಅಬ್ಬರ ಕೇಳಿಬಂದಿದೆ. ಶಬ್ದ ಕೇಳಿ ಆತಂಕಕ್ಕೊಳಗಾದ ಮನೆಯವರು ಭಯದಿಂದ ತತ್ತರಿಸಿದ್ದಾರೆ.

ಅನಕಪಲ್ಲಿ ಜಿಲ್ಲೆಯ ಮಡುಗುಳ ಮಂಡಲದ ಎಂ. ಕೋಡೂರು ಗ್ರಾಮದಲ್ಲಿ 13 ಅಡಿ ಎತ್ತರದ ಪ್ರವಾಹ ಅವಾಂತರ ಸೃಷ್ಟಿಸಿದೆ. ಎಲಮಂಚಿಲಿ ರಮೇಶ ಎಂಬ ರೈತನ ಮನೆಯ ಕಾಂಪೌಂಡ್‌ನಲ್ಲಿರುವ ಬಾತ್‌ ರೂಮ್‌ಗೆ ಪ್ರವಾಹದಿಂದ ಬಂದಿರುವ ಹಾವು ನುಸುಳಿದೆ. 13 ಅಡಿಯ ಈ ನಾಗರಹಾವು ಆಹಾರದ ಹುಡುಕಾಟದಲ್ಲಿತ್ತು. ಜೆರ್ರಿ ಗೊಡ್ಡು ಎಂಬ ಹಾವನ್ನು ನೊಡಿ ಬೇಟೆಯಾಡತೊಡಗಿದ. ಅದನ್ನು ತಿನ್ನಲು ಅಟ್ಟಿಸಿಕೊಂಡು ಹೋಗಿ ಬಾತ್ ರೂಮಿಗೆ ನುಗ್ಗಿದೆ. ಅಲ್ಲಿ ಒಂದು ಕೋಳಿ ಗೂಡು ಇತ್ತು. ಅದರೊಳಗೆ ಹೋಗಿ ಅವೆತುಕೊಂಡಿದೆ. ಅಲ್ಲಿಂದ ಬರುತ್ತಿದ್ದ ಶಬ್ದಗಳಿಂದ ಗಾಬರಿಗೊಂಡ ರಮೇಶ್ ಸ್ಥಳೀಯವಾಗಿ ಹಾವು ಹಿಡಿಯುವ ವೆಂಕಟೇಶ್ ಅವರಿಗೆ ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆಗೆ ಇಳಿದ ಹಾವು ಹಿಡಿಯುವ ವೆಂಕಟೇಶ್, 13 ಅಡಿ ಉದ್ದದ ಹಾವನ್ನು ಜಾಣ್ಮೆಯಿಂದ ಹಿಡಿದಿದ್ದಾರೆ. ಅಲ್ಲಿಂದ ಕರೆದೊಯ್ದು ಅರಣ್ಯ ವ್ಯಾಪ್ತಿ ಪ್ರದೇಶದಲ್ಲಿ ಬಿಡಲಾಗಿದೆ. ಆಗಷ್ಟೇ ಎಲ್ಲರೂ ನಿಟ್ಟುಸಿರುಬಿಟ್ಟಿದ್ದಾರೆ.

ಸಾಮಾನ್ಯವಾಗಿ ಗಿರಿ ನಾಗ ಜಾತಿಯ ಇಂತಹ ಹಾವುಗಳು ಮನುಷ್ಯರು ವಾಸಿಸುವ ಕಡೆಗೆ ಬರುವುದಿಲ್ಲ. ಆದಾಗ್ಯೂ ಕಣ್ಣಿಗೆ ಬಿದ್ದರೆ ಅವುಗಳ ಜೀವಕ್ಕೆ ಅಪಾಯವನ್ನುಂಟು ಮಾಡಬೇಡಿ. ಅವುಗಳಿಗೆ ತೊಂದರೆ ಕೊಡದೆ, ಹಾವು ಹಿಡಿಯುವ ಪರಿಣಿತರಿಗೆ ಮಾಹಿತಿ ನೀಡಿ. ಅವುಗಳನ್ನು ಹಿಡಿದು ಅವರು ಸುರಕ್ಷಿತವಾಗಿ ಅರಣ್ಯಗಳಲ್ಲಿ ಬಿಡುತ್ತಾರೆ.