Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಷೀರ ಭಾಗ್ಯ ದಶಮಾನೋತ್ಸವ: ಮಧುಗಿರಿಯಲ್ಲಿ ಸಿದ್ದರಾಮಯ್ಯ ಸ್ವಾಗತಕ್ಕೆ ಚೆಂಡೆ ಮದ್ದಳೆ ವಾದ್ಯ ಮೇಳ!

ಕ್ಷೀರ ಭಾಗ್ಯ ದಶಮಾನೋತ್ಸವ: ಮಧುಗಿರಿಯಲ್ಲಿ ಸಿದ್ದರಾಮಯ್ಯ ಸ್ವಾಗತಕ್ಕೆ ಚೆಂಡೆ ಮದ್ದಳೆ ವಾದ್ಯ ಮೇಳ!

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 06, 2023 | 1:04 PM

ಚೆಂಡೆ ಮತ್ತು ಮದ್ದಳೆ ಎರಡು ಭಿನ್ನ ವಾದ್ಯಗಳು, ಎರಡರ ಸಂಯೋಜಮೆ ಚೆಂಡೆ ಮದ್ದಳೆ ಅನಿಸಿಕೊಳ್ಳುತ್ತದೆ. ಚೆಂಡೆ ಮದ್ದಳೆ ಕೇವಲ ಯಕ್ಷಗಾನಕ್ಕೆ ಮಾತ್ರ ಸೀಮಿತವಾಗಿರುವ ವಾದ್ಯಮೇಳ ಅಲ್ಲ. ಬೇರೆ ಬೇರೆ ಮಂಗಳ ಕಾರ್ಯಗಳಲ್ಲೂ ಇದನ್ನು ಬಳಸಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವೀರಗಾಸೆ ಕುಣಿತ ಗೊತ್ತಿರುವುದರಿಂದ ಮಧುಗಿರಿಗೆ ಆಗಮಿಸಿದಾಗ ಚೆಂಡೆ ಮದ್ದಳೆ ಸದ್ದಿಗೆ ಹೆಜ್ಜೆ ಹಾಕಿದ್ದರೆ ಆಶ್ಚರ್ಯವಿಲ್ಲ.

ತುಮಕೂರು: ಜಿಲ್ಲೆಯ ಮಧುಗಿರಿಯಲ್ಲಿ ಇಂದು ಕ್ಷೀರ ಭಾಗ್ಯ ಯೋಜನೆಯ (Ksheera Bhagya Scheme) ದಶಮಾನೋತ್ಸವ ಸಮಾರಂಭ ನಡೆಯುತ್ತಿದೆ. ಸಿದ್ದರಾಮಯ್ಯ (Siddaramaiah) 2013 ರಲ್ಲಿ ಮೊದಲ ಅವಧಿಗೆ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಾಗ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದರು. ಇಂದು ಅವರು ಬೆಂಗಳೂರಿಂದ ಹೆಲಿಕಾಪ್ಟರ್ ನಲ್ಲಿ ಮಧುಗಿರಿಗೆ (Madhugiri) ತಲುಪಿದಾಗ ಸ್ವಾಗತಕ್ಕೆ ಚಂಡೆ ಮದ್ದಳೆ ವಾದ್ಯವೃಂದ ತಯಾರಾಗಿತ್ತು. ಅವರು ರಿಹರ್ಸಲ್ ಮಾಡುತ್ತಿರುವುದನ್ನು ಇಲ್ಲಿ ನೊಡಬಹುದು. ಚೆಂಡೆ ಮದ್ದಳೆಯನ್ನು ಸಾಮಾನ್ಯವಾಗಿ ಯಕ್ಷಗಾನಗಳಲ್ಲಿ ಬಳಸಲಾಗುತ್ತದೆ. ರಾತ್ರಿಯೆಲ್ಲ ಕೂತು ಯಕ್ಷಗಾನ ನೋಡುವವರ ನಿದ್ದೆಯನ್ನು ಹೊಡೆದೋಡಿಸುವ ಮತ್ತು ಕುಣಿತ ಗೊತ್ತಿಲ್ಲದವನಿಗೂ ಎದ್ದು ನಿಂತು ಕುಣಿಯುವಂತೆ ಮಾಡುವ ಪ್ರಚೋದಿಸುವ ಶಕ್ತಿ ಚೆಂಡೆ ಮದ್ದಳೆ ಸಂಗೀತಕ್ಕಿದೆ. ಒಂದು ಅಂಶವನ್ನು ನಾವಿಲ್ಲಿ ಗಮನಿಸಬೇಕು. ಚೆಂಡೆ ಮತ್ತು ಮದ್ದಳೆ ಎರಡು ಭಿನ್ನ ವಾದ್ಯಗಳು, ಎರಡರ ಸಂಯೋಜಮೆ ಚೆಂಡೆ ಮದ್ದಳೆ ಅನಿಸಿಕೊಳ್ಳುತ್ತದೆ. ಚೆಂಡೆ ಮದ್ದಳೆ ಕೇವಲ ಯಕ್ಷಗಾನಕ್ಕೆ ಮಾತ್ರ ಸೀಮಿತವಾಗಿರುವ ವಾದ್ಯಮೇಳ ಅಲ್ಲ. ಬೇರೆ ಬೇರೆ ಮಂಗಳ ಕಾರ್ಯಗಳಲ್ಲೂ ಇದನ್ನು ಬಳಸಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವೀರಗಾಸೆ ಕುಣಿತ ಗೊತ್ತಿರುವುದರಿಂದ ಮಧುಗಿರಿಗೆ ಆಗಮಿಸಿದಾಗ ಚೆಂಡೆ ಮದ್ದಳೆ ಸದ್ದಿಗೆ ಹೆಜ್ಜೆ ಹಾಕಿದ್ದರೆ ಆಶ್ಚರ್ಯವಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ