ಬೀದರ್: ಕಾರಂಜಾ ಜಲಾಶಯದಿಂದ ನೀರು ಬಿಡುಗಡೆ, ಇತಿಹಾಸ ಪ್ರಸಿದ್ಧ ಶಿವನ ದೇವಸ್ಥಾನ ಮುಳುಗಡೆ

ಬೀದರ್: ಕಾರಂಜಾ ಜಲಾಶಯದಿಂದ ನೀರು ಬಿಡುಗಡೆ, ಇತಿಹಾಸ ಪ್ರಸಿದ್ಧ ಶಿವನ ದೇವಸ್ಥಾನ ಮುಳುಗಡೆ

ಸುರೇಶ ನಾಯಕ
| Updated By: ಆಯೇಷಾ ಬಾನು

Updated on: Sep 06, 2023 | 1:15 PM

ಕಾರಂಜಾ ಜಲಾಶಯದಿಂದ ಮಾಂಜ್ರಾ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಈ ಪರಿಣಾಮ ಐತಿಹಾಸಿಕ ದೇವಾಲಯ ಮುಳುಗಡೆಯಾಗಿದೆ. ಕಟ್ಟಿತುಗಾಂವ ಬಳಿಯ ಇತಿಹಾಸ ಪ್ರಸಿದ್ಧ ಶಿವನ ದೇವಸ್ಥಾನ ಸಂಪೂರ್ಣ ಮುಳುಗಿದೆ. ಹೀಗಾಗಿ ನದಿ ದಡದಲ್ಲೇ ನಿಂತು ಭಕ್ತರು ದೇವರ ದರ್ಶನ ಮಾಡುತ್ತಿದ್ದಾರೆ.

ಬೀದರ್, ಸೆ.06: ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಹಾಲಹಳ್ಳಿ ಬಳಿಯ ಕಾರಂಜಾ ಜಲಾಶಯದಿಂದ ಮಾಂಜ್ರಾ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯದಿಂದ ನದಿಗೆ 7594 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು ಈ ಪರಿಣಾಮ ಐತಿಹಾಸಿಕ ದೇವಾಲಯ ಮುಳುಗಡೆಯಾಗಿದೆ. ಕಟ್ಟಿತುಗಾಂವ ಬಳಿಯ ಇತಿಹಾಸ ಪ್ರಸಿದ್ಧ ಶಿವನ ದೇವಸ್ಥಾನ ಸಂಪೂರ್ಣ ಮುಳುಗಿದೆ. ಹೀಗಾಗಿ ನದಿ ದಡದಲ್ಲೇ ನಿಂತು ಭಕ್ತರು ದೇವರ ದರ್ಶನ ಮಾಡುತ್ತಿದ್ದಾರೆ. ಇನ್ನು ಶ್ರಾವಣ ಮಾಸ ಹಿನ್ನೆಲೆ ಶಿವ ಭಕ್ತರು ನಿತ್ಯ ಬೆಳಗ್ಗೆ, ಸಂಜೆ ಭಜನೆ ಮಾಡುತ್ತಿದ್ದರು. ನದಿ ನೀರಿನಿಂದಾಗಿ ದೇವಸ್ಥಾನ ಮುಳುಗಿದ್ದು ಭಕ್ತರ ಭಜನೆಗೆ ಬ್ರೇಕ್ ಬಿದ್ದಿದೆ.

ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ