AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ಅಪಘಾತ: ಸಾವು ಬದುಕಿನೊಂದಿಗೆ ಹೋರಾಡುತ್ತಿರುವ ಮಾಲ್ತೇಶ್​ನ ಅಮ್ಮ ಕಮೇಡಿಯನ್ ಚಂದ್ರಪ್ರಭಾನನ್ನು ಶಪಿಸಿದರು!

ರಸ್ತೆ ಅಪಘಾತ: ಸಾವು ಬದುಕಿನೊಂದಿಗೆ ಹೋರಾಡುತ್ತಿರುವ ಮಾಲ್ತೇಶ್​ನ ಅಮ್ಮ ಕಮೇಡಿಯನ್ ಚಂದ್ರಪ್ರಭಾನನ್ನು ಶಪಿಸಿದರು!

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Sep 06, 2023 | 2:18 PM

Share

ಚಂದ್ರಪ್ರಭಾ ಚಿಕ್ಕಮಗಳೂರಿನ ಬಟ್ಟೆಯಂಗಡಿಯೊಂದರಲ್ಲಿ ಕೆಲಸ ಮಾಡುವ ಮಾಲ್ತೇಶ್ ಹೆಸರಿನ ಯುವಕ ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದಾಗ ಹಿಂದಿನಿಂದ ಗುದ್ದಿದ್ದಾರೆ. ಮಾಲ್ತೇಶ್ ಗಂಭೀಬೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದರೂ, ಕಾಮಿಡಿ ನಟ ಅದನ್ನು ಕಾಮಿಡಿ ಅಂದುಕೊಂಡು ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದಾರೆ.

ಚಿಕ್ಕಮಗಳೂರು: ರಸ್ತೆ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು-ಬದುಕಿನೊಂದಿಎಗ ಹೋರಾಡುತ್ತಿರುವ ಯುವಕನೊಬ್ಬನ ತಾಯಿ ಇವರು. ಅವರನ್ನು ದುಃಖದ ಕೂಪಕ್ಕೆ ದೂಡಿರೋದು ಕನ್ನಡದ ಕಾಮಿಡಿ ನಟ ಜಿ ಚಂದ್ರಪ್ರಭಾ  (G Chandraprabha). ಈ ಮನುಷ್ಯ ಬದುಕನ್ನೂ ಕಾಮಿಡಿ (comedy) ಅಂದುಕೊಂಡಂತಿದೆ. ಬದುಕು ಕಾಮಡಿ ಅಲ್ಲ ಮಾರಾಯ. ಸೋಮವಾರ ರಾತ್ರಿ ಸಕಲೇಶಪುರದಿಂದ (Sakleshpur) ಶೂಟಿಂಗ್ ಮುಗಿಸಿಕೊಂಡು ಕಾರಲ್ಲಿ ಹೋಗುತ್ತಿದ್ದ ಚಂದ್ರಪ್ರಭಾ ಚಿಕ್ಕಮಗಳೂರಿನ ಬಟ್ಟೆಯಂಗಡಿಯೊಂದರಲ್ಲಿ ಕೆಲಸ ಮಾಡುವ ಮಾಲ್ತೇಶ್ ಹೆಸರಿನ ಯುವಕ ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದಾಗ ಹಿಂದಿನಿಂದ ಗುದ್ದಿದ್ದಾರೆ. ಮಾಲ್ತೇಶ್ ಗಂಭೀಬೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದರೂ, ಕಾಮಿಡಿ ನಟ ಅದನ್ನು ಕಾಮಿಡಿ ಅಂದುಕೊಂಡು ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದಾರೆ. ದುಡಿಯುವ ಮಗ ಆಸ್ಪತ್ರೆ ಸೇರಿದ್ದರಿಂದ ಮಾಲ್ತೇಶ್ ಕಂಗಾಲಾಗಿದ್ದಾರೆ ಮತ್ತು ಕಮೇಡಿಯನ್ ಗೆ ಹಿಡಿಶಾಪ ಹಾಕುತ್ತಿದ್ದಾರೆ. ಚಂದ್ರಪ್ರಭಾನಿಗೆ ಕಿಂಚಿತ್ತಾದರೂ ಮಾಮವೀಯತೆ ಇದ್ದರೆ ಕೂಡಲೇ ಆಸ್ಪತ್ರೆಗೆ ತೆರಳಿ ಮಾಲ್ತೇಶ್ ಕುಟುಂಬಕ್ಕೆ ಸಹಾಯ ಮಾಡಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.