ಭೀಕರ ರಸ್ತೆ ಅಪಘಾತ ಪ್ರಕರಣ: ಮೃತ 9 ಕುಟುಂಬಗಳಿಗೆ ತಲಾ 2 ಲಕ್ಷ ರೂ. ಚೆಕ್ ಹಸ್ತಾಂತರಿಸಿದ ಸಚಿವ ನಾಗೇಂದ್ರ
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ಬಳಿಯ ಭೀಕರ ರಸ್ತೆ ದುರಂತದಲ್ಲಿ ಮೃತಪಟ್ಟ 9 ಕುಟುಂಬಗಳಿಗೆ ತಲಾ 2 ಲಕ್ಷ ರೂ. ಚೆಕ್ನ್ನು ಬಳ್ಳಾರಿ ಉಸ್ತುವಾರಿ ಸಚಿವ ನಾಗೇಂದ್ರ ಇಂದು ಹಸ್ತಾಂತರ ಮಾಡಿದ್ದಾರೆ.
ಬಳ್ಳಾರಿ: ಲಾರಿ ಮತ್ತು 2 ಆಟೋಗಳ ಅಪಘಾತ (Accident) ದಲ್ಲಿ ಮೃತಪಟ್ಟ 9 ಕುಟುಂಬಗಳಿಗೆ ತಲಾ 2 ಲಕ್ಷ ರೂ. ಚೆಕ್ನ್ನು ಬಳ್ಳಾರಿ ಉಸ್ತುವಾರಿ ಸಚಿವ ನಾಗೇಂದ್ರ ಇಂದು ಹಸ್ತಾಂತರ ಮಾಡಿದರು. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ಬಳಿ ಭೀಕರ ದುರಂತ ನಡೆದಿತ್ತು. ಯಾಸ್ಮಿನ್(45), ಶಾಮ್(40), ಉಮೇಶ್(27), ಜಹೀರಾ(16), ಸಪ್ರಾಭೀ(55), ಇಬ್ರಾಹಿಂ(33), ಕೌಸರ್(35) ಮತ್ತು ಸಾಹಿರಾ(5) ಮೃತರು. ಬಕ್ರೀದ್ ಹಬ್ಬದ ಪ್ರಯಕ್ತ ಕುಟುಂಬದವರೆಲ್ಲಾ ಸೇರಿ ಪ್ರವಾಸಕ್ಕೆ ತೆರಳಿದ್ದಾಗ ದುರಂತ ಸಂಭವಿಸಿದೆ.
ಬಕ್ರೀದ ಹಬ್ಬದ ಸಂಭ್ರಮದಲ್ಲಿದ್ದ ಇವರೆಲ್ಲಾ ಬಳ್ಳಾರಿಯ ಹೊಸಪೇಟೆಯ ಟಿಬಿ ಡ್ಯಾಂಗೆ ತೆರಳುತ್ತಿದ್ದರು. ಬಳ್ಳಾರಿಯ ಕೌಲಬಜಾರ ಪ್ರದೇಶದ 25 ನೇ ವಾರ್ಡ 19 ಜನರು 2 ಆ್ಯಪೆ ಆಟೋಗಳಲ್ಲಿ ಹೊಸಪೇಟೆಗೆ ತೆರಳುತ್ತಿದ್ದ ವೇಳೆ ಯಮಸ್ವರೂಪಿಯಾಗಿ ಬಂದ ಬೃಹತ್ತಾದ ಲಾರಿ ಆಟೋಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದ 7 ಜನರು ಸಾವನಪ್ಪಿದ್ದರು. 12 ಜನರು ಗಾಯಗೊಂಡಿದ್ದರು.
ಇದನ್ನೂ ಓದಿ: ವಿಜಯನಗರದಲ್ಲಿ ಎರಡು ಆಟೋ-ಲಾರಿ ನಡುವೆ ಅಪಘಾತ ಪ್ರಕರಣ: ಮೃತರ ಸಂಖ್ಯೆ ಎಂಟಕ್ಕೆ ಏರಿಕೆ
ಮೃತರೆಲ್ಲಾ ಆಟೋದಲ್ಲಿದ್ದ ಪ್ರಯಾಣಿಕರಾಗಿದ್ದು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ನಾಲ್ವರನ್ನ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಆಟೋಗಳಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮಕ್ಕೆ ಬ್ರೀಡ್ಜ್ ಮೇಲಿದ್ದ ಎಲ್ಲರೂ ಕಂದಕಕ್ಕೆ ಕುಸಿದು ಬಿದ್ದಿದ್ದರು. ಘಟನೆಯನ್ನ ನೋಡಿದ ಸ್ಥಳೀಯರು ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿ ಕೆಲವರನ್ನ ರಕ್ಷಣೆ ಮಾಡಿದ್ದರು. ಘಟನೆಯಲ್ಲಿ ಐವರು ಮಹಿಳೆಯರು, ಇಬ್ಬರು ಪುರುಷರು ಸಾವನ್ನಪ್ಪಿದ್ದರು.
ಇದನ್ನೂ ಓದಿ: ನೇಣಿಗೆ ಶರಣಾದ ಗೃಹಿಣಿ; ಕೊಲೆ ಶಂಕೆ ವ್ಯಕ್ತಪಡಿಸಿ ಪತಿ ಮನೆ ಮುಂದೆ ಗ್ರಾಮಸ್ಥರಿಂದ ವಿನೂತನ ಪ್ರತಿಭಟನೆ!
ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ವಿಜಯನಗರ ಎಸ್ ಪಿ ಶ್ರೀಹರಿಬಾಬು, ಐಜಿಪಿ ಲೋಕೇಶ, ಹೊಸಪೇಟೆ ಶಾಸಕ ಎಚ್ಆರ್ ಗವಿಯಪ್ಪ ಭೇಟಿ ನೀಡಿ ಗಾಯಾಳುಗಳ ಪರಿಸ್ಥಿತಿ ಅವಲೋಕಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರ ನಿರ್ದೇಶನದ ಮೇರೆಗೆ ಬಳ್ಳಾರಿ ಉಸ್ತುವಾರಿ ಸಚಿವ ಬಿ ನಾಗೇಂದ್ರ ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂಪಾಯಿ ಚಿಕಿತ್ಸಾ ವೆಚ್ಚ ಘೋಷಣೆ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:02 pm, Thu, 13 July 23