ಬಳ್ಳಾರಿಗೂ ವಕ್ಕರಿಸಿದ ಹಕ್ಕಿ ಜ್ವರ: ಒಂದೇ ವಾರದಲ್ಲಿ 2 ಸಾವಿರ ಕೋಳಿಗಳ ಸಾವು
ಬಳ್ಳಾರಿಯ ಸಂಡೂರು ತಾಲ್ಲೂಕಿನಲ್ಲಿ ಹಕ್ಕಿ ಜ್ವರದಿಂದ 2400 ಕೋಳಿಗಳು ಸಾವನ್ನಪ್ಪಿವೆ. ಪ್ರಯೋಗಾಲಯ ವರದಿ ಇದನ್ನು ದೃಢಪಡಿಸಿದೆ. ಸರ್ಕಾರ ಕುರೇಕುಪ್ಪ ಗ್ರಾಮದ ಸುತ್ತ ಒಂದು ಕಿಮೀ ಅಪಾಯಕಾರಿ ವಲಯ ಮತ್ತು 10 ಕಿಮೀ ಕಣ್ಣಗಾವಲು ವಲಯವನ್ನಾಗಿ ಗುರುತಿಸಿದೆ. ಚಿಕ್ಕಬಳ್ಳಾಪುರದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಕೋಳಿಗಳನ್ನು ನಾಶಪಡಿಸುವ ಮೂಲಕ ಸೋಂಕು ಹರಡುವುದನ್ನು ತಡೆಯಲು ಪ್ರಯತ್ನಿಸಲಾಗುತ್ತಿದೆ.
- Veeresh Dani
- Updated on: Mar 1, 2025
- 8:35 am
ಬೆಳ್ಳಂ ಬೆಳಿಗ್ಗೆ ಬಳ್ಳಾರಿ ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯ ಅಪಹರಣ
ಬಳ್ಳಾರಿಯ ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯ ಡಾ. ಸುನೀಲ್ ಅವರನ್ನು ಅಪಹರಿಸಲಾಗಿದೆ. ಅಪಹರಣಕಾರರು 6 ಕೋಟಿ ರೂಪಾಯಿಗಳ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಘಟನೆ ಸೂರ್ಯನಾರಾಯಣಪೇಟೆಯ ಶನೇಶ್ವರ ಗುಡಿ ಬಳಿ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೈದ್ಯರ ಸಹೋದರರಿಗೆ ಬಂದ ಕರೆ ಮೂಲಕ ಈ ಮಾಹಿತಿ ಬಹಿರಂಗಗೊಂಡಿದೆ.
- Veeresh Dani
- Updated on: Jan 25, 2025
- 12:57 pm
ಬಳ್ಳಾರಿ ಜಿಲ್ಲೆಯಲ್ಲಿ 8 ತಿಂಗಳಲ್ಲಿ 23 ಬಾಣಂತಿಯರ ಸಾವು: ಹೆಚ್ಚಿದ ಆತಂಕ
ಕರ್ನಾಟಕದಲ್ಲಿ ಸಂಭವಿಸಿರುವ ಬಾಣಂತಿಯರ ಸಾವು ಕರ್ನಾಟಕ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ಸಂಬಂಧ ಸರ್ಕಾರ ಕಳೆದ ಮೂರು ತಿಂಗಳಲ್ಲಿ ರಾಜ್ಯದಲ್ಲಿ ಮೃತಪಟ್ಟ ಬಾಣಂತಿಯರ ಸಾವಿನ ವರದಿಯನ್ನು ಜಿಲ್ಲಾಡಳಿತದಿಂದ ಪಡೆಯುತ್ತಿದೆ. ಬಳ್ಳಾರಿ ಜಿಲ್ಲಾಧಿಕಾರಿಗಳು ಬಾಣಂತಿಯರ ಸಾವಿನ ವರದಿ ಸರ್ಕಾರಕ್ಕೆ ನೀಡಿದ್ದು, ಆಘಾತಕಾರಿ ಅಂಶ ಬಯಲಾಗಿದೆ.
- Veeresh Dani
- Updated on: Dec 24, 2024
- 11:09 am
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ಬಳ್ಳಾರಿ ಜಿಲ್ಲೆಯ ಸಾಕಮ್ಮ ಎಂಬ ಮಹಿಳೆ 25 ವರ್ಷಗಳ ಬಳಿಕ ಹಿಮಾಚಲ ಪ್ರದೇಶದ ಅನಾಥಾಶ್ರಮದಲ್ಲಿ ಪತ್ತೆಯಾಗಿದ್ದಾರೆ.ಅವರು 25 ವರ್ಷಗಳ ಹಿಂದೆ ಹೊಸಪೇಟೆಯಿಂದ ರೈಲು ಹತ್ತಿ ಹಿಮಾಚಲಕ್ಕೆ ಹೋಗಿದ್ದರು. ಸಮಾಜ ಕಲ್ಯಾಣ ಇಲಾಖೆಯ ಪ್ರಯತ್ನದಿಂದ ಅವರ ಕುಟುಂಬಸ್ಥರು ಪತ್ತೆಯಾಗಿದ್ದು, ವಿಡಿಯೋ ಕಾಲ್ ಮೂಲಕ ಮಕ್ಕಳು ತಮ್ಮ ತಾಯಿಯೊಂದಿಗೆ ಮಾತನಾಡಿದ್ದಾರೆ. ಈ ಘಟನೆ ಸಾಕಷ್ಟು ಭಾವುಕತೆಯನ್ನು ತಂದೊಡ್ಡಿದೆ.
- Veeresh Dani
- Updated on: Dec 23, 2024
- 1:34 pm
ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿಗೆ ಕಾರಣ ಬಹಿರಂಗ!
ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ 15 ದಿನಗಳಲ್ಲಿ ಐದು ಬಾಣಂತಿಯರು ಮೃತಪಟ್ಟಿದ್ದಾರೆ. ತನಿಖಾ ತಂಡದ ವರದಿಯ ಪ್ರಕಾರ, ಸಿಸೇರಿಯನ್ ಸಮಯದಲ್ಲಿ ನೀಡಲಾದ ಕಳಪೆ ಗುಣಮಟ್ಟದ IV ಗ್ಲುಕೋಸ್ ಕಾರಣ ಎಂದು ಉಲ್ಲೇಖವಾಗಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.
- Veeresh Dani
- Updated on: Nov 29, 2024
- 1:35 pm
2 ಗ್ಯಾರಂಟಿಗಳನ್ನು ಕೈ ಬಿಡಬೇಕೆಂದು ಸಿದ್ದರಾಮಯ್ಯಗೆ ಮನವಿ ಮಾಡ್ತೇವೆ: ಕಾಂಗ್ರೆಸ್ ಶಾಸಕ
ನಮ್ಮ ಕ್ಷೇತ್ರಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ ಎಂದು ಹೇಳಿದ್ದ ಕಾಂಗ್ರೆಸ್ ಶಾಸಕ ಗವಿಯಪ್ಪ ಸರ್ಕಾರ ಮುಜುಗರ ಪಡುವಂತೆ ಮಾಡಿದ್ದರು. ಇದೀಗ, ಐದು ಗ್ಯಾರಂಟಿ ಯೋಜನೆಗಳಲ್ಲಿ ಎರಡನ್ನು ಕೈಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.
- Veeresh Dani
- Updated on: Nov 26, 2024
- 11:53 am
ಹಂಪಿಯ ವಿರೂಪಾಕ್ಷ ದೇವಸ್ಥಾನ ಹೊರತುಪಡಿಸಿ ಹಲವು ದೇವಾಲಯಗಳು ಮುಳುಗಡೆ
ಮಲೆನಾಡು ಭಾಗದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮಳೆಯಾಗುತ್ತಿರುವ ಪರಿಣಾಮ, ವಿಜಯನಗರ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಡ್ಯಾಂನಿಂದ ಈಗ ನದಿಗೆ ಲಕ್ಷ ಕ್ಯೂಸೆಕ್ನಷ್ಟು ನೀರು ಬಿಡಲಾಗುತ್ತಿದೆ. ಇದರಿಂದ ಹಂಪಿಯ ಐತಿಹಾಸಿಕ ಸ್ಮಾರಕಗಳು ನೀರಲ್ಲಿ ಮುಳುಗಡೆ.
- Veeresh Dani
- Updated on: Jul 27, 2024
- 2:52 pm
ವಿಜಯನಗರ: ಡಿವೈಡರ್ಗೆ ಕಾರು ಡಿಕ್ಕಿಯಾಗಿ ಇಬ್ಬರು ಸಾವು, ನಾಲ್ವರಿಗೆ ಗಾಯ
ಇಳಕಲ್‍ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಎರಿಟಿಗಾ ಕಾರು ನಿಯಂತ್ರಣ ತಪ್ಪಿ ಡಿವೈಡರ್ಗೆ ಕಾರು ಡಿಕ್ಕಿಯಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ. ಓರ್ವರ ಸ್ಥಿತಿ ಚಿಂತಾಜನಕವಾಗಿದೆ. ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Veeresh Dani
- Updated on: Jun 30, 2024
- 8:59 am
ಬಳ್ಳಾರಿಯ ರಾಮಗಡ ಅರಣ್ಯ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅನುಮತಿ ಕೋರಿ ಪ್ರಸ್ತಾವನೆ
ಬಳ್ಳಾರಿ ಜಿಲ್ಲೆಯ ಸಂಡೂರಿನ ರಾಮಗಡ ಅರಣ್ಯ ವ್ಯಾಪ್ತಿಯ 150 ಎಕರೆಯಲ್ಲಿ ಮತ್ತೆ ಗಣಿಗಾರಿಕೆ ನಡೆಸಲು ಅನುಮತಿ ನೀಡುವಂತೆ ಭಾರತೀಯ ಉಕ್ಕು ಪ್ರಾಧಿಕಾರ ಅಡಿಯ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಕಂಪನಿ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.
- Veeresh Dani
- Updated on: Jun 24, 2024
- 9:26 am
ಬಳ್ಳಾರಿ: ನೋಬಲ್ ಬುಕ್ ಆಫ್ ರೆಕಾರ್ಡ್ಸ್ಗೆ ಸೇರಿದ 4 ತಿಂಗಳ ಮಗು ಸಾಯಿರಾ
ಬಳ್ಳಾರಿ ತಾಲೂಕಿನ ಹಗರಿಗ್ರಾಮದ ನಿವಾಸಿಗಳಾದ ಸುಧಾಕರ ಮತ್ತು ಸಿಂಧು ದಂಪತಿಯ ನಾಲ್ಕು ತಿಂಗಳ ಮಗು ಸಾಯಿರಾ ನೋಬಲ್ ಬುಕ್ ಆಫ್ ರೆಕಾರ್ಡ್ಸ್ಗೆ ಸೇರ್ಪಡೆಯಾಗಿದ್ದಾಳೆ. 149 ಫ್ಲಾಶ್ ಕಾರ್ಡ್ಸ್ ಗುರುತಿಸುವ ಮೂಲಕ ಮಗು ಸಾಯಿರಾ ಈ ಸಾಧನೆ ಮಾಡಿದ್ದಾಳೆ.
- Veeresh Dani
- Updated on: Jun 16, 2024
- 3:02 pm
ಸೈಬರ್ ಕ್ರೈಂಗೆ ಕಡಿವಾಣ ಹಾಕಲು ಬಳ್ಳಾರಿಯಲ್ಲಿ “ಪೊಲೀಸ್ ಇ – ಶಾಲೆ” ಆರಂಭ
ಬಳ್ಳಾರಿ ಜಿಲ್ಲೆಯಲ್ಲಿ ಇತ್ತಿಚೆಗೆ ಅತೀ ಹೆಚ್ಚು ಸೈಬರ್ ಪ್ರಕರಣಗಳು ವರದಿಯಾಗುತ್ತಿವೆ. ಸೈಬರ್ ಕ್ರೈಂ ಬಗ್ಗೆ ಅದೆಷ್ಟು ಅರಿವು ಮೂಡಿಸಿದರೂ, ಜನ ಮಾತ್ರ ಸೈಬರ್ ಕಳ್ಳರ ಮೊಸಕ್ಕೆ ಬಲಿಯಾಗುತ್ತಿದ್ದಾರೆ. ಹೀಗಾಗಿ, ಹೇಗಾದರೂ ಮಾಡಿ ಸೈಬರ್ ಪ್ರಕರಣಗಳನ್ನು ಹತೋಟಿಗೆ ತರಬೇಕು ಅಂತ ಬಳ್ಳಾರಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ನೂತನ ಪ್ಲ್ಯಾನ್ ಮಾಡಿದ್ದಾರೆ. ಇಲ್ಲಿದೆ ಓದಿ.
- Veeresh Dani
- Updated on: Jun 15, 2024
- 8:04 am
ವಿಜಯನಗರ: ಹಳ್ಳದಲ್ಲಿ ಕೈ ತೊಳೆಯಲು ಹೋದ ಯುವಕ ಏನಾದ ನೋಡಿ, ವಿಡಿಯೋ ಇಲ್ಲಿದೆ
ಕೈ ತೊಳೆಯಲು ಹೋಗಿ ಯುವಕ ಮಂಜುನಾಥ ಕೂಡ್ಲಿಗಿ ತಾಲೂಕಿನ ಚಂದ್ರಶೇಖರಪುರ ಗ್ರಾಮದ ಹಳ್ಳದಲ್ಲಿ ಆಯ ತಪ್ಪಿ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಯಾಮದಿಂದ ಪಾರಾಗಿದ್ದಾನೆ. ಘಟನೆ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗುಡೇಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
- Veeresh Dani
- Updated on: Jun 12, 2024
- 11:44 am