ಬೆಳ್ಳಂ ಬೆಳಿಗ್ಗೆ ಬಳ್ಳಾರಿ ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯ ಅಪಹರಣ
ಬಳ್ಳಾರಿಯ ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯ ಡಾ. ಸುನೀಲ್ ಅವರನ್ನು ಅಪಹರಿಸಲಾಗಿದೆ. ಅಪಹರಣಕಾರರು 6 ಕೋಟಿ ರೂಪಾಯಿಗಳ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಘಟನೆ ಸೂರ್ಯನಾರಾಯಣಪೇಟೆಯ ಶನೇಶ್ವರ ಗುಡಿ ಬಳಿ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೈದ್ಯರ ಸಹೋದರರಿಗೆ ಬಂದ ಕರೆ ಮೂಲಕ ಈ ಮಾಹಿತಿ ಬಹಿರಂಗಗೊಂಡಿದೆ.
ಬಳ್ಳಾರಿ, ಜನವರಿ 25: ವಾಕಿಂಗ್ ಮಾಡುತ್ತಿದ್ದ ಬಳ್ಳಾರಿ ಜಿಲ್ಲಾಸ್ಪತ್ರೆಯ (Ballari District Hospital) ಮಕ್ಕಳ ವೈದ್ಯ ಡಾ.ಸುನೀಲ್ ಅಪಹರಿಸಲಾಗಿದೆ. ದುಷ್ಕರ್ಮಿಗಳು ವೈದ್ಯ ಡಾ.ಸುನೀಲ್ ಅವರನ್ನು ಅಪಹರಿಸಿ 6 ಕೋಟಿ ರೂ. ಹಣ ಬೇಡಿಕೆ ಇಟ್ಟಿದ್ದಾರೆ. ವೈದ್ಯ ಸುನೀಲ್ ಬೆಳಗ್ಗೆ ವಾಕಿಂಗ್ ಹೋಗಿದ್ದರು. ಸೂರ್ಯನಾರಾಯಣಪೇಟೆ ಶನೇಶ್ವರಗುಡಿ ಬಳಿ ವೈದ್ಯ ಸುನೀಲ್ ಬರುತ್ತಿದ್ದಂತೆ ಟಾಟಾ ಇಂಡಿಗೋ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳಿಂದ ಅವರ ವೈದ್ಯ ಸುನೀಲ್ ಬಾಯಿಮುಚ್ಚಿ ಕಾರಿನಲ್ಲಿ ಎಳೆದೊಯ್ದಿದ್ದಾರೆ.
ಬಳಿಕ, ಡಾ.ಸುನೀಲ್ ಮೊಬೈಲ್ನಿಂದ ಅವರ ಸಹೋದರ, ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ವೇಣು ಅವರಿಗೆ ಕರೆ ಮಾಡಿ 6 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೂಡಲೇ ವೇಣು ಬಳ್ಳಾರಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ದೂರು ಪಡೆದು, ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ.
Published on: Jan 25, 2025 12:52 PM
Latest Videos