ಜಗದೀಶ್ ಮೇಲೆ ಹಲ್ಲೆ, ನಿಜಕ್ಕೂ ನಡೆದಿದ್ದೇನು? ಪ್ರತ್ಯಕ್ಷಿ ಹೇಳಿಕೆ
Lawyer Jagadish: ಮಾಜಿ ಬಿಗ್ಬಾಸ್ ಸ್ಪರ್ಧಿ, ಸಾಮಾಜಿಕ ಹೋರಾಟಗಾರನಾಗಿ ಗುರುತಿಸಿಕೊಂಡಿರುವ ಲಾಯರ್ ಜಗದೀಶ್ ಮೇಲೆ ನಿನ್ನೆ ರಾತ್ರಿ ಕೊಡಿಗೇಹಳ್ಳಿಯಲ್ಲಿ ಹಲ್ಲೆ ನಡೆದಿದೆ. ಲಾಯರ್ ಜಗದೀಶ್ ಹಾಗೂ ಅವರ ಗನ್ಮ್ಯಾನ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಸ್ಥಳದಲ್ಲಿ ನಿಜಕ್ಕೂ ನಡೆದಿದ್ದು ಏನು ಎಂಬುದನ್ನು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.
ಲಾಯರ್ ಜಗದೀಶ್ ಮೇಲೆ ನಿನ್ನೆ ರಾತ್ರಿ (ಜನವರಿ 24) ಕೊಡಿಗೇಹಳ್ಳಿಯಲ್ಲಿ ಹಲ್ಲೆ ಆಗಿದೆ. ಜಗದೀಶ್ ಮೂಗು, ತುಟಿ ಹರಿದು ಹೋಗುವಂತೆ ಹೊಡೆಯಲಾಗಿದ್ದು, ಕಾರನ್ನು ಜಖಂಗೊಳಿಸಲಾಗಿದೆ. ಹಲ್ಲೆಯ ಬಳಿಕ ಫೇಸ್ಬುಕ್ ಲೈವ್ ಬಂದ ಜಗದೀಶ್ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವೆಂದು ದೂರಿದ್ದರು. ಆದರೆ ಗಲಾಟೆಗೆ ಕಾರಣ ಏನು ಎಂಬುದನ್ನು ಹೇಳಿರಲಿಲ್ಲ. ಇದೀಗ ಘಟನೆ ನಡೆದಾಗ ಸ್ಥಳದಲ್ಲಿ ಹಾಜರಿದ್ದವರು ಗಲಾಟೆ ಬಗ್ಗೆ ಮಾಧ್ಯಮಗಳ ಬಳಿ ಮಾತನಾಡಿದ್ದಾರೆ. ಗಲಾಟೆ ನಡೆಯಲು ಕಾರಣ ಏನು? ಜಗದೀಶ್ ಮೇಲೆ ಹಲ್ಲೆಯಾಗಲು ಏನು ಕಾರಣ ಎಂಬುದನ್ನು ವಿವರಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos