Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಬರ್​ ಕ್ರೈಂಗೆ ಕಡಿವಾಣ ಹಾಕಲು ಬಳ್ಳಾರಿಯಲ್ಲಿ “ಪೊಲೀಸ್​​ ಇ – ಶಾಲೆ” ಆರಂಭ

ಬಳ್ಳಾರಿ ಜಿಲ್ಲೆಯಲ್ಲಿ ಇತ್ತಿಚೆಗೆ ಅತೀ ಹೆಚ್ಚು ಸೈಬರ್ ಪ್ರಕರಣಗಳು ವರದಿಯಾಗುತ್ತಿವೆ. ಸೈಬರ್ ಕ್ರೈಂ ಬಗ್ಗೆ ಅದೆಷ್ಟು ಅರಿವು ಮೂಡಿಸಿದರೂ, ಜನ ಮಾತ್ರ ಸೈಬರ್ ಕಳ್ಳರ ಮೊಸಕ್ಕೆ ಬಲಿಯಾಗುತ್ತಿದ್ದಾರೆ. ಹೀಗಾಗಿ, ಹೇಗಾದರೂ ಮಾಡಿ ಸೈಬರ್ ಪ್ರಕರಣಗಳನ್ನು ಹತೋಟಿಗೆ ತರಬೇಕು ಅಂತ ಬಳ್ಳಾರಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ನೂತನ ಪ್ಲ್ಯಾನ್​​ ಮಾಡಿದ್ದಾರೆ. ಇಲ್ಲಿದೆ ಓದಿ.

ಸೈಬರ್​ ಕ್ರೈಂಗೆ ಕಡಿವಾಣ ಹಾಕಲು ಬಳ್ಳಾರಿಯಲ್ಲಿ ಪೊಲೀಸ್​​ ಇ - ಶಾಲೆ ಆರಂಭ
ಬಳ್ಳಾರಿ ಪೊಲೀಸ್​ ಇ-ಶಾಲೆ
Follow us
ವೀರೇಶ್ ದಾನಿ, ಬಳ್ಳಾರಿ-ವಿಜಯನಗರ
| Updated By: ವಿವೇಕ ಬಿರಾದಾರ

Updated on: Jun 15, 2024 | 8:04 AM

ಬಳ್ಳಾರಿ, ಜೂನ್​ 15: ಗಣಿನಾಡು ಬಳ್ಳಾರಿಯಲ್ಲಿ (Ballari) ಮನೆಗಳ್ಳತನದ ಪ್ರಕರಣಗಳಿಗಿಂತ ಅತೀ ಹೆಚ್ಚು ಸೈಬರ್ ಕಳ್ಳತನದ ಪ್ರಕರಣಗಳು ದಾಖಾಲಗುತ್ತಿವೆ. ಸಾಮಾಜಿಕ ಜಾಲತಾಣದ ಮೂಲಕ ಲಿಂಕ್‌ಗಳನ್ನ ಕಳುಹಿಸಿ ನಿಮ್ಮ ಹಣ ಡಬಲ್​​ ಮಾಡುತ್ತೆವೆ ಅಂತ ಆಮಿಷ ತೋರಿಸಿ, ಖಾತೆಯಲ್ಲಿರುವ ಎಲ್ಲ ಹಣವನ್ನು ದೋಚಿ ಸೈಬರ್ ಖದೀಮರು ಪರಾರಿಯಾಗುತ್ತಿದ್ದಾರೆ. ಕಷ್ಟ ಪಟ್ಟು ಸಂಪಾದಿಸಿದ ಹಣವನ್ನ ಕಳೆದುಕೊಂಡು ಜನ ಕಂಗಾಲಾಗುತ್ತಿದ್ದಾರೆ. ಹಣವೂ ಸಿಗದೆ, ನ್ಯಾಯ ಸಿಗದೆ ಸಂತ್ರಸ್ತರು ಪರದಾಡುವಂತಾಗಿದೆ. ಹೀಗಾಗಿ, ಈ ಸೈಬರ್​ ಕ್ರೈಂ (Cyber Crime) ಅನ್ನು ತಡೆಗಟ್ಟಲು ಪೊಲೀಸ್ ಅಧಿಕಾರಿಗಳು ಹೊಸದಾಗಿ “ಪೊಲೀಸ್​ ಇ – ಶಾಲೆಯನ್ನು” ತರೆದಿದ್ದಾರೆ. ಈ ಶಾಲೆಯನ್ನು ಐಜಿಪಿ ಬಿಎಸ್ ಲೋಕೇಶ್ ಅವರು ಉದ್ಘಾಟಸಿದರು.

ಪೊಲೀಸ್ ಇ – ಶಾಲೆ ಕಾರ್ಯವಿಧಾನ

ಬಳ್ಳಾರಿ ನಗರದ ಪೊಲೀಸ್​ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಪೊಲೀಸ್ ಇ – ಶಾಲೆಯನ್ನು ತೆರೆಯಲಾಗಿದೆ. ಜಿಲ್ಲೆಯ ಎಲ್ಲ ಶಾಲೆ-ಕಾಲೇಜುಗಳಲ್ಲಿ ವರ್ಚುವಲ್​ ಮುಖಾಂತರ ವಿದ್ಯಾರ್ಥಿಗಳಿಗೆ ವಾರಕ್ಕೆ ಒಂದು ದಿನ ಅಥವಾ ಸಮಯ ನಿಗದಿ ಮಾಡಿಕೊಂಡು ಸೈಬರ್ ಕ್ರೈಂ ಬಗ್ಗೆ ತಜ್ಞರಿಂದ ಮಾಹಿತಿ ನೀಡಲಾಗುತ್ತದೆ. ಜೊತೆಗೆ ಸೈಬರ್ ಕಳ್ಳರು ಯಾವ ರೀತಿ ಜನರಿಗೆ ಮರಳು ಮಾಡುತ್ತಾರೆ, ಯಾವ ರೀತಿ ಹಣ ದೋಚುತ್ತಾರೆ ಎಂಬುದರ ಬಗ್ಗೆ ಅರಿವು ಮೂಡಿಸಲಾಗುತ್ತೆ.

E-ಶಾಲೆ

ಇದನ್ನೂ ಓದಿ: ಬಿಬಿಎಂಪಿ ಮುಖ್ಯ ಆಯುಕ್ತರ ಹೆಸರಲ್ಲಿ ಫೇಕ್ ವಾಟ್ಸಾಪ್​​​​: ಸೈಬರ್​ ಕ್ರೈಂಗೆ ತುಷಾರ್ ಗಿರಿನಾಥ್ ದೂರು

ಸೈಬರ್ ಪ್ರಕರಣಕ್ಕೆ ಒಳಗಾದರೆ ಮುಂದೆ ಏನು ಮಾಡ ಬೇಕು. ಪ್ರಕರಣ ಯಾವ ರೀತಿ ದಾಖಲು ಮಾಡಬೇಕು ಎನ್ನುವುದರ ಬಗ್ಗೆ ತಿಳಿಸಿ ಕೊಡಲಾಗುತ್ತದೆ. ಪೊಲೀಸ್ ಸಹಾಯವಾಣಿ ಬಗ್ಗೆ ಇತರೆ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ.

ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಅತೀ ಹೆಚ್ಚು ಸೈಬರ್ ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಆದಷ್ಟು ಶೀಘ್ರದಲ್ಲೆ ಸೈಬರ್ ಕ್ರೈಂ ಹತೋಟಿಗೆ ತರಲು ಬಳ್ಳಾರಿ ಪೊಲೀಸ್​ ಇಲಾಖೆ ಟೊಂಕ ಕಟ್ಟಿ ನಿಂತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ