ಬಳ್ಳಾರಿ: ನೋಬಲ್ ಬುಕ್ ಆಫ್ ರೆಕಾರ್ಡ್ಸ್ಗೆ ಸೇರಿದ 4 ತಿಂಗಳ ಮಗು ಸಾಯಿರಾ
ಬಳ್ಳಾರಿ ತಾಲೂಕಿನ ಹಗರಿಗ್ರಾಮದ ನಿವಾಸಿಗಳಾದ ಸುಧಾಕರ ಮತ್ತು ಸಿಂಧು ದಂಪತಿಯ ನಾಲ್ಕು ತಿಂಗಳ ಮಗು ಸಾಯಿರಾ ನೋಬಲ್ ಬುಕ್ ಆಫ್ ರೆಕಾರ್ಡ್ಸ್ಗೆ ಸೇರ್ಪಡೆಯಾಗಿದ್ದಾಳೆ. 149 ಫ್ಲಾಶ್ ಕಾರ್ಡ್ಸ್ ಗುರುತಿಸುವ ಮೂಲಕ ಮಗು ಸಾಯಿರಾ ಈ ಸಾಧನೆ ಮಾಡಿದ್ದಾಳೆ.
ಬಳ್ಳಾರಿ, ಜೂನ್ 16: ಬಳ್ಳಾರಿ (Ballari) ತಾಲೂಕಿನ ಹಗರಿಗ್ರಾಮದ ನಿವಾಸಿಗಳಾದ ಸುಧಾಕರ ಮತ್ತು ಸಿಂಧು ದಂಪತಿಯ ನಾಲ್ಕು ತಿಂಗಳ ಮಗು ಸಾಯಿರಾ ನೋಬಲ್ ಬುಕ್ ಆಫ್ ರೆಕಾರ್ಡ್ಸ್ಗೆ (Noble Book of Records) ಸೇರ್ಪಡೆಯಾಗಿದ್ದಾಳೆ. ರಾಷ್ಟ್ರ ದ್ವಜಗಳು, ಹಣ್ಣಿನ ಚಿತ್ರ, ಪ್ರಾಣಿಗಳ ಚಿತ್ರ, ಪಕ್ಷಿಗಳು ಇತರೆ ವಸ್ತುಗಳ ಚಿತ್ರವಿರುವ 149 ಫ್ಲಾಶ್ ಕಾರ್ಡ್ಸ್ ಗುರುತಿಸುವ ಮೂಲಕ ಮಗು ಸಾಯಿರಾ ಈ ಸಾಧನೆ ಮಾಡಿದ್ದಾಳೆ. ಮಗುವಿನ ಸಾಧನೆಗೆ ಪೋಷಕರು ಪುಲ್ ಖುಷ್ ಆಗಿದ್ದಾರೆ. ಸಾಯಿರಾ ತಂದೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಾರೆ. ಆಂಧ್ರಪ್ರದೇಶ ಅನಂತಪೂರ ಜಿಲ್ಲೆಯ ಜಿಲ್ಲಾಧಿಕಾರಿ ವಿನೋದ ಕುಮಾರ್ ಅವರು ಮಗು ಸಾಯಿರಾ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ನೋಬಲ್ ಬುಕ್ ಆಫ್ ರೆಕಾರ್ಡ್ಸ್ ಸರ್ಟಿಫಿಕೇಟ್ ನೀಡಿ ಸನ್ಮಾನಿಸಿದರು. ಸಾಯಿರಾ ತಾಯಿ ಸಿಂಧು ಅವರ ತಾಳ್ಮೆಗೆ ಜಿಲ್ಲಾಧಿಕಾರಿ ವಿನೋದ ಕುಮಾರ್ ಹುಬ್ಬೇರಿಸಿದರು. ಮಗು ಸಾಯಿರಾ ಸಾಧನೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ನೋಡಿ: ನರವ್ಯೂಹವನ್ನು ಬಲಪಡಿಸುವ ಪಾದಹಸ್ತಾಸನ ಮಾಡುವುದು ಹೇಗೆ? ಮೋದಿ ವಿಡಿಯೋ ಇಲ್ಲಿದೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Jun 16, 2024 03:00 PM
ಉತ್ತರ ಪ್ರದೇಶದಲ್ಲಿ ತರಬೇತಿ ವಿಮಾನ ಪತನ; ಮಹಿಳಾ ಪೈಲಟ್ಗೆ ಗಂಭೀರ ಗಾಯ
ಬೆಂಗಳೂರಿಗರ ಬಗ್ಗೆ ಸಚಿವ ಕೃಷ್ಣಭೈರೇಗೌಡರ ಅಂತರಾಳದ ನುಡಿಗಳು
ವಿಜಯೇಂದ್ರನನ್ನು ಕಿತ್ತಾಕಿ: ಆಡಿಯೋ ವೈರಲ್ ಬಗ್ಗೆ ಸದಾನಂದಗೌಡ ಹೇಳಿದ್ದಿಷ್ಟು
"ವಿಜಯೇಂದ್ರನನ್ನು ಕಿತ್ತು ಬಿಸಾಕಿ": ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ
