ಪವಿತ್ರಾ ಗೌಡ ಮನೆಯಲ್ಲಿ ಮಹಜರು; ಹೇಗಿದೆ ಕೊಲೆ ಆರೋಪಿಯ ಬಂಗಲೆ?

ಸುಮಾರು ಹತ್ತು ವರ್ಷಗಳಿಂದ ಇದೇ ಮನೆಯಲ್ಲಿ ಪವಿತ್ರಾ ಗೌಡ ವಾಸವಾಗಿದ್ದಾಳೆ. 2 ಫ್ಲೋರ್​ ಇರುವ ಈ ಡುಪ್ಲೆಕ್ಸ್ ಮನೆಯ ಕೆಳಗಡೆ ಪಾರ್ಕಿಂಗ್​ಗೆ ಜಾಗ ಇದೆ ಮತ್ತುಇನ್ನೋರ್ವ ಆರೋಪಿ ಪವನ್ ವಾಸವಾಗಿದ್ದ ಮನೆ ಇದೆ. ನೊರೆಹೊರೆಯವರ ಜತೆಗೆ ಪವಿತ್ರಾ ಗೌಡಗೆ ಸಂಪರ್ಕವೇ ಇರಲಿಲ್ಲ. ಈಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದಾಳೆ.

ಪವಿತ್ರಾ ಗೌಡ ಮನೆಯಲ್ಲಿ ಮಹಜರು; ಹೇಗಿದೆ ಕೊಲೆ ಆರೋಪಿಯ ಬಂಗಲೆ?
|

Updated on: Jun 16, 2024 | 2:47 PM

ನಟಿ ಪವಿತ್ರಾ ಗೌಡ, ನಟ ದರ್ಶನ್​ ಸೇರಿದಂತೆ ಅನೇಕರು ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಎಲ್ಲರ ಪೊಲೀಸ್​ ಕಸ್ಟಡಿ ಮುಂದುವರಿದಿದೆ. ಇಂದು (ಜೂನ್​ 16) ಬೆಂಗಳೂರಿನ ಪವಿತ್ರಾ ಗೌಡ ಮನೆಯಲ್ಲಿ ಪೊಲೀಸರು ಮಹಜರು ಮಾಡಿದ್ದಾರೆ. ಸುಮಾರು 10 ವರ್ಷದಿಂದ ಇದೇ ಮನೆಯಲ್ಲಿ ಪವಿತ್ರಾ ಗೌಡ (Pavithra Gowda) ವಾಸವಾಗಿದ್ದಾಳೆ. ಇದು ಮೂರು ಫ್ಲೋರ್​ನ ಡುಪ್ಲೆಕ್ಸ್ ಮನೆ. ಕೆಳಗಡೆ ಪಾರ್ಕಿಂಗ್​ಗೆ ಜಾಗ ಹಾಗೂ ಇನ್ನೋರ್ವ ಆರೋಪಿ ಪವನ್ ಇರುತ್ತಿದ್ದ ಮನೆ ಇದೆ. ಈತ ಪವಿತ್ರಾ ಗೌಡಗೆ ಮನೆ‌ ಕೆಲಸಗಾರ ಹಾಗೂ ನಾಯಿಯನ್ನ ನೋಡಿಕೊಳ್ಳುತ್ತಿದ್ದ. ಅಕ್ಕಪಕ್ಕ ಮನೆಯವರ ಜೊತೆಗೆ ಪವಿತ್ರಾಗೆ ಸಂಪರ್ಕವೇ ಇರಲಿಲ್ಲ. ಪವಿತ್ರಾ ಫೋಕ್ಸ್​ ವ್ಯಾಗನ್ ಹಾಗೂ ರೇಂಜ್ ರೋವರ್​ನಲ್ಲಿ ಓಡಾಡುತ್ತಿದ್ದಳು. ಪವಿತ್ರಾ ಗೌಡ ಮಗಳು ಹಾಸ್ಟೆಲ್​ನಲ್ಲಿ ಇದ್ದಳು. ಆಗಾಗ ಇಲ್ಲಿಗೆ ಬರುತ್ತಿದ್ದಳು. ಮೊದಮೊದಲು ದರ್ಶನ್ (Darshan) ಈ ಮನೆಗೆ ಬರೋದನ್ನ ನೋಡಿ ಇಲ್ಲಿ ವಿಜಯಲಕ್ಷಿ ಇದ್ದಾರೆ ಅಂತ ಅಕ್ಕಪಕ್ಕದ ಮನೆಯವರು ಅಂದುಕೊಂಡಿದ್ದರು. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹೊಸ ಹೊಸ ವಿಚಾರಗಳು ಒಂದೊಂದಾಗಿಯೇ ಹೊರಬರುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us
ಅಂತೂ ಇಂತೂ ಬಂದ ಗೆಳೆಯ; ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ವಿನೋದ್​ ಪ್ರಭಾಕರ್
ಅಂತೂ ಇಂತೂ ಬಂದ ಗೆಳೆಯ; ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ವಿನೋದ್​ ಪ್ರಭಾಕರ್
ಹೆಚ್ಚುವರಿ ಡಿಸಿಎಂಗಳು ಬೇಕೆನ್ನುವವರು ಹೈಕಮಾಂಡ್ ಬಳಿ ಹೋಗಿ ಕೇಳಲಿ: ಖರ್ಗೆ
ಹೆಚ್ಚುವರಿ ಡಿಸಿಎಂಗಳು ಬೇಕೆನ್ನುವವರು ಹೈಕಮಾಂಡ್ ಬಳಿ ಹೋಗಿ ಕೇಳಲಿ: ಖರ್ಗೆ
ಪ್ರಮಾಣ ವಚನ ಸ್ವೀಕರಿಸಿದ ಸಿಟಿ ರವಿ, ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿದರು
ಪ್ರಮಾಣ ವಚನ ಸ್ವೀಕರಿಸಿದ ಸಿಟಿ ರವಿ, ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿದರು
ದರ್ಶನ್ ನೋಡಲು ಜೈಲಿಗೆ ಬಂದು, ಕ್ಯಾಮೆರಾ ಕಂಡು ವಾಪಸ್​ ಹೋದ ವಿಜಯಲಕ್ಷ್ಮಿ
ದರ್ಶನ್ ನೋಡಲು ಜೈಲಿಗೆ ಬಂದು, ಕ್ಯಾಮೆರಾ ಕಂಡು ವಾಪಸ್​ ಹೋದ ವಿಜಯಲಕ್ಷ್ಮಿ
ಲೋಕಸಭಾ ಸದಸ್ಯನಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕುಮಾರಸ್ವಾಮಿ
ಲೋಕಸಭಾ ಸದಸ್ಯನಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕುಮಾರಸ್ವಾಮಿ
ಶಾಲಾಮಕ್ಕಳು ಪ್ರತಿಭಟನೆ ಮಾಡುವುದು ಯಾಕೆಂದ ಸಾರಿಗೆ ಸಚಿವಗೆ ಅರ್ಥವಾಗಬೇಕು!
ಶಾಲಾಮಕ್ಕಳು ಪ್ರತಿಭಟನೆ ಮಾಡುವುದು ಯಾಕೆಂದ ಸಾರಿಗೆ ಸಚಿವಗೆ ಅರ್ಥವಾಗಬೇಕು!
ಲೋಕಸಭಾ ಚುನಾವಣೆಯಲ್ಲಿ ಗೆಲುವು ಕಂಡಿರುವ ಯಡಿಯೂರಪ್ಪರಿಂದ ಧರ್ಮಸ್ಥಳ ಭೇಟಿ
ಲೋಕಸಭಾ ಚುನಾವಣೆಯಲ್ಲಿ ಗೆಲುವು ಕಂಡಿರುವ ಯಡಿಯೂರಪ್ಪರಿಂದ ಧರ್ಮಸ್ಥಳ ಭೇಟಿ
ಬಳ್ಳಾರಿ: ರಾಮಗಡ ಅರಣ್ಯ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅನುಮತಿ ಕೋರಿ ಪತ್ರ
ಬಳ್ಳಾರಿ: ರಾಮಗಡ ಅರಣ್ಯ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅನುಮತಿ ಕೋರಿ ಪತ್ರ
ಭಕ್ತಿ ಎಂದರೇನು, ನಿಜವಾದ ಭಕ್ತಿ ಹೇಗಿರುತ್ತೆ? ಈ ವಿಡಿಯೋ ನೋಡಿ
ಭಕ್ತಿ ಎಂದರೇನು, ನಿಜವಾದ ಭಕ್ತಿ ಹೇಗಿರುತ್ತೆ? ಈ ವಿಡಿಯೋ ನೋಡಿ
ಲೈಂಗಿಕ ದೌರ್ಜನ್ಯ ಪ್ರಕರಣ; ಜೆಡಿಎಸ್ ಎಂಎಲ್​ಸಿ ಡಾ.ಸೂರಜ್ ರೇವಣ್ಣ ಜೈಲುಪಾಲು
ಲೈಂಗಿಕ ದೌರ್ಜನ್ಯ ಪ್ರಕರಣ; ಜೆಡಿಎಸ್ ಎಂಎಲ್​ಸಿ ಡಾ.ಸೂರಜ್ ರೇವಣ್ಣ ಜೈಲುಪಾಲು