AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಮಗಳ ಹೆಸರನ್ನು ಮಧ್ಯ ತರಬೇಡಿ’: ಪವಿತ್ರಾ ಗೌಡ ಮಾಜಿ ಪತಿಯ ಮನವಿ

‘ನನ್ನ ಮಗಳ ಹೆಸರನ್ನು ಮಧ್ಯ ತರಬೇಡಿ’: ಪವಿತ್ರಾ ಗೌಡ ಮಾಜಿ ಪತಿಯ ಮನವಿ

Malatesh Jaggin
| Edited By: |

Updated on: Jun 13, 2024 | 11:00 PM

Share

ಕಳೆದ ಕೆಲವು ವರ್ಷಗಳಿಂದ ದರ್ಶನ್​ ಜೊತೆ ನಟಿ ಪವಿತ್ರಾ ಗೌಡ ಆಪ್ತವಾಗಿದ್ದಾರೆ. ಮೊದಲ ಪತಿ ಸಂಜಯ್​ ಸಿಂಗ್ ಅವರಿಗೆ ಪವಿತ್ರಾ ಗೌಡ ಡಿವೋರ್ಸ್​ ನೀಡಿ ಹಲವು ವರ್ಷಗಳು ಕಳೆದಿವೆ. ಈ ದಂಪತಿಗೆ ಒಬ್ಬಳು ಪುತ್ರಿ ಇದ್ದಾಳೆ. ಈಗಲೂ ಕೂಡ ಸಂಜಯ್​ ಸಿಂಗ್​ ಅವರು ಮಗಳ ಬಗ್ಗೆ ಕಾಳಜಿ ಹೊಂದಿದ್ದಾರೆ. ಮಗಳಿಗಾಗಿ ಅವರು ಜನರಲ್ಲಿ ಒಂದು ಮನವಿ ಮಾಡಿಕೊಂಡಿದ್ದಾರೆ.

ನಟಿ ಪವಿತ್ರಾ ಗೌಡ (Pavithra Gowda) ಹಾಗೂ ನಟ ದರ್ಶನ್​ಗೆ ಕಾನೂನಿನ ಸಂಕಷ್ಟ ಎದುರಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಇಬ್ಬರೂ ಈಗ ಪೊಲೀಸ್​ ಕಸ್ಟಡಿಯಲ್ಲಿ ಇದ್ದಾರೆ. ಈ ಘಟನೆಯ ಬಗ್ಗೆ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್​ ಸಿಂಗ್​ (Sanjay Singh) ಪ್ರತಿಕ್ರಿಯೆ ನೀಡಿದ್ದಾರೆ. ಪವಿತ್ರಾ ಗೌಡ ಅವರಿಂದ ಸಂಜಯ್​ ಸಿಂಗ್ ಡಿವೋರ್ಸ್​ ಪಡೆದು ಹಲವು ವರ್ಷಗಳು ಕಳೆದಿವೆ. ಈಗಲೂ ಕೂಡ ಅವರು ಮಗಳ (Pavithra Gowda Daughter) ಬಗ್ಗೆ ಕಾಳಜಿ ಹೊಂದಿದ್ದಾರೆ. ‘ನಾನು ಎಲ್ಲ ಮಾಧ್ಯಮದವರಲ್ಲಿ, ಜನರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನನ್ನ ಹೆಸರು ಹಾಳುಮಾಡಿ ಪರವಾಗಿಲ್ಲ., ನನ್ನ ಮಾಜಿ ಹೆಂಡತಿ ಹೆಸರು ಹಾಳು ಮಾಡಿ ಪರವಾಗಿಲ್ಲ. ಆದರೆ ನನ್ನ ಮಗಳು ಇನ್ನೂ ಚಿಕ್ಕವಳು. ಅವಳ ಹೆಸರನ್ನು ಈ ವಿಚಾರದಲ್ಲಿ ಮಧ್ಯ ತರಬೇಡಿ. ಇಡೀ ಪ್ರಪಂಚಕ್ಕೆ ಒಂದು ಮಾತು ಹೇಳುತ್ತೇನೆ.. ದಯವಿಟ್ಟು ಹೆಣ್ಣು ಮಕ್ಕಳಿಗೆ ಟಾರ್ಚರ್​ ಮಾಡುವುದನ್ನು ನಿಲ್ಲಿಸಿ’ ಎಂದು ಸಂಜಯ್​ ಸಿಂಗ್​ ಹೇಳಿದ್ದಾರೆ. ‘ಟಿವಿ9 ಕನ್ನಡ’ ಜೊತೆ ಅವರು ಎಕ್ಸ್​ಕ್ಲೂಸಿವ್​ ಆಗಿ ಮಾತನಾಡಿದ್ದಾರೆ. ಮಾಜಿ ಪತ್ನಿ ಪವಿತ್ರಾ ಗೌಡ ವ್ಯಕ್ತಿತ್ವದ ಬಗ್ಗೆಯೂ ಅವರು ವಿವರ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.