ರೇಣುಕಾ ಸ್ವಾಮಿ ಅಪಹರಣಕ್ಕೆ ಬಳಕೆ ಆಗಿದ್ದ ಕಾರು ಜಪ್ತಿ; ಚಾಲಕ ರವಿ ಮನೆಯಲ್ಲಿ ತೀವ್ರ ವಿಚಾರಣೆ

ರೇಣುಕಾ ಸ್ವಾಮಿ ಅಪಹರಣಕ್ಕೆ ಬಳಕೆ ಆಗಿದ್ದ ಕಾರು ಜಪ್ತಿ; ಚಾಲಕ ರವಿ ಮನೆಯಲ್ಲಿ ತೀವ್ರ ವಿಚಾರಣೆ

ಬಸವರಾಜ ಮುದನೂರ್, ಚಿತ್ರದುರ್ಗ
| Updated By: ಮದನ್​ ಕುಮಾರ್​

Updated on: Jun 16, 2024 | 4:03 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣದ 8ನೇ ಆರೋಪಿ ಆಗಿರುವ ರವಿಶಂಕರ್​ ಮನೆಯಲ್ಲಿ ವಿಚಾರಣೆ ಮಾಡಲಾಗಿದೆ. ಕಾಮಾಕ್ಷಿಪಾಳ್ಯ ಸಿಪಿಐ ಸುಬ್ರಹ್ಮಣ್ಯ ಅವರ ನೇತೃತ್ವದಲ್ಲಿ ವಿಚಾರಣೆ ನಡೆದಿದೆ. ರವಿ ಕುಟುಂಬದವರಿಗೆ ಹಲವು ಪ್ರಶ್ನೆಗಳನ್ನು ಕೇಳಿ ಮಾಹಿತಿ ಸಂಗ್ರಹಿಸಲಾಗಿದೆ. ಜೂನ್​ 8ರಂದು ರೇಣುಕಾ ಸ್ವಾಮಿ ಅಪಹರಣಕ್ಕೆ ರವಿಶಂಕರ್​ ಕಾರು ಬಳಕೆಯಾಗಿತ್ತು. ಆರೋಪಿಗಳು ಜೂನ್​ 9ರಂದು ಅದೇ ಕಾರಿನಲ್ಲಿ ವಾಪಸ್​ ಚಿತ್ರದುರ್ಗಕ್ಕೆ ಬಂದಿದ್ದರು.

ನಟ ದರ್ಶನ್​ ಮತ್ತು ಗ್ಯಾಂಗ್​ ಸೇರಿ ನಡೆಸಿದ್ದಾರೆ ಎನ್ನಲಾದ ರೇಣುಕಾ ಸ್ವಾಮಿ (Renuka Swamy) ಹತ್ಯೆಯ ಬಗ್ಗೆ ಅನೇಕ ವಿಚಾರಗಳು ಹೊರಬರುತ್ತಿವೆ. ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿಕೊಂಡು ಬೆಂಗಳೂರಿಗೆ ಕರೆದುಕೊಂಡ ಬರಲಾಗಿತ್ತು. ಅದಕ್ಕೆ ಬಳಕೆ ಆಗಿದ್ದು ರವಿಶಂಕರ್​ ಎಂಬಾತನ ಕಾರು. ಆತ 8ನೇ ಆರೋಪಿ ಆಗಿದ್ದಾನೆ. ಚಿತ್ರದುರ್ಗದಲ್ಲಿ ಇರುವ ರವಿಶಂಕರ್ ಮನೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಆತನ ಕಾರನ್ನು ಜಪ್ತಿ ಮಾಡಲಾಗಿದೆ. ಚಿತ್ರದುರ್ಗ ತಾಲೂಕಿನ ಐನಳ್ಳಿ ಕುರುಬರಹಟ್ಟಿಯಲ್ಲಿ ರವಿಶಂಕರ್​​ ಮನೆ ಇದೆ. ಕೊಲೆ ನಡೆದ ಬಳಿಕ ದರ್ಶನ್​ (Darshan) ಹಾಗೂ ಗ್ಯಾಂಗ್​ನಿಂದ 5 ಲಕ್ಷ ರೂಪಾಯಿ ಪಡೆದಿದ್ದಾನೆ ಎಂಬ ಮಾಹಿತಿ ಇದೆ. ರವಿಶಂಕರ್​ ಮನೆಯಲ್ಲಿ ಪೊಲೀಸರು ಹಲವು ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ವಿಚಾರಣೆ ತೀವ್ರಗೊಂಡಿದೆ. ಕಾಮಾಕ್ಷಿಪಾಳ್ಯ ಸಿಪಿಐ ಸುಬ್ರಹ್ಮಣ್ಯ ನೇತೃತ್ವದಲ್ಲಿ ವಿಚಾರಣೆ ನಡೆದಿದ್ದು, ಇದರಲ್ಲಿ ರವಿಶಂಕರ್ ಕುಟುಂಬಸ್ಥರಿಗೆ ಹಲವು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆಯಲಾಗಿದೆ. ಜೂ.8ರಂದು ರೇಣುಕಾಸ್ವಾಮಿ ಕಿಡ್ನ್ಯಾಪ್​​ಗೆ ರವಿಶಂಕರ್​ ಕಾರು ಬಳಕೆ ಆಗಿತ್ತು. ಜೂ.9ರಂದು ಆರೋಪಿಗಳು ಅದೇ ಕಾರಿನಲ್ಲಿ ಚಿತ್ರದುರ್ಗಕ್ಕೆ (Chitradurga) ವಾಪಸ್​ ಬಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.