Ardha Chakrasana: ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಆಸನ ಅರ್ಧ ಚಕ್ರಾಸನ

Ardha Chakrasana: ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಆಸನ ಅರ್ಧ ಚಕ್ರಾಸನ

ನಯನಾ ರಾಜೀವ್
|

Updated on:Jun 16, 2024 | 3:01 PM

International Yoga Day 2024: ಪ್ರತಿ ವರ್ಷವೂ ಜೂನ್​ 21ರಂದು ಅಂತಾರಾಷ್ಟ್ರೀಯ ಯೋಗದಿನ(International Yoga Day )ವನ್ನಾಗಿ ಆಚರಿಸಲಾಗುತ್ತದೆ. ಯೋಗದ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅನಿಮೇಟೆಡ್ ವಿಡಿಯೋಗಳನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅರ್ಧ ಚಕ್ರಾಸನ ಕೂಡ ಒಂದು.

ಪ್ರತಿ ವರ್ಷವೂ ಜೂನ್​ 21ರಂದು ಅಂತಾರಾಷ್ಟ್ರೀಯ ಯೋಗದಿನ(International Yoga Day )ವನ್ನಾಗಿ ಆಚರಿಸಲಾಗುತ್ತದೆ. ಯೋಗದ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅನಿಮೇಟೆಡ್ ವಿಡಿಯೋಗಳನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅರ್ಧ ಚಕ್ರಾಸನ ಕೂಡ ಒಂದು.

ಈ ಆಸನವು ನಿಂತುಕೊಂಡು ಮಾಡುವಂತಹ ಸುಲಭದ ಆಸನವಾಗಿದೆ. ಪಾದಹಸ್ತಾಸನದಂತೆ ಪ್ರಾರಂಭದಲ್ಲಿ ಭೂಮಿಗೆ ನೇರವಾಗಿ, ಲಂಬವಾಗಿ ನಿಲ್ಲಬೇಕು. ನಂತರ ಎರಡು ಕಾಲುಗಳ ನಡುವೆ ಒಂದು ಅಡಿಯಷ್ಟು ಅಂತರವಿರಿಸಿ ಅಂಗೈಗಳನ್ನು ಸೊಂಟದ ಮೇಲೆ ಇಡಬೇಕು.

ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಹಿಂದಕ್ಕೆ ಬಾಗಬೇಕು, ಸ್ವಲ್ಪ ಸಮಯ ಸಹಜ ಉಸಿರಾಟ ನಡೆಸಬೇಕು ಬಳಿಕ ಉಸಿರನ್ನು ಬಿಡುತ್ತಾ ಸಹಜ ಸ್ಥಿತಿಗೆ ಮರಳಬೇಕು. ಇದರಿಂದ ಶ್ವಾಸಕೋಶದ ಭಾಗ ಎಳೆತಕ್ಕೆ ಒಳಗಾಗಿ, ಹೆಚ್ಚಿನ ವಾಯುಸಂಚಾರವಾಗುತ್ತದೆ, ಎದೆಯ ಭಾಗಕ್ಕೆ ಮೆದು ವ್ಯಾಯಾಮವಾಗುತ್ತದೆ.

ಕೆಲವೊಮ್ಮೆ ಹಿಂದಕ್ಕೆ ಬಾಗಿದಾಗ ತಲೆ ತಿರುಗಿದ ಅನುಭವವಾಗುತ್ತದೆ, ಅಭ್ಯಾಸ ಮಾಡುತ್ತಾ ಹೋದರೆ ಕ್ರಮೇಣವಾಗಿ ಕಡಿಮೆಯಾಗುತ್ತದೆ.

ಇದರಿಂದ ಕುತ್ತಿಗೆ ಭಾಗಕ್ಕೂ ವ್ಯಾಯಾಮವಾದಂತಾಗುತ್ತದೆ, ಸೊಂಟದ ನೋವು ಮತ್ತು ಉದರ ಬ್ಯಾನೆಗಳಿದ್ದರೆ ದೂರವಾಗುತ್ತದೆ. ಬೆನ್ನುಮೂಳೆ ಸದೃಢವಾಗುತ್ತದೆ. ಚಕ್ರಾಸನವನ್ನು ಚಿಕ್ಕವಯಸ್ಸಿನ ಮಾಡುತ್ತಾ ಬಂದರೆ ವೃದ್ಧಾಪ್ಯದಲ್ಲೂ ಬೆನ್ನು ಬಾಗುವುದಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jun 16, 2024 03:00 PM