ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ

ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ

ಶಾಂತಮೂರ್ತಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 16, 2024 | 4:20 PM

ಕಾಂಗ್ರೆಸ್ ಸರ್ಕಾರ (Congress Government)ವು ಪೆಟ್ರೋಲ್-ಡೀಸೆಲ್ ಬೆಲೆ (Petrol Diesel Price Increase) ಏರಿಸುವ ಮೂಲಕ ರಾಜ್ಯದ ಜನರಿಗೆ ಬರೆ ಎಳೆದಿದೆ. ದಿಡೀರ್​ ದರ ಏರಿಕೆಯಿಂದ ವಾಹನ ಸವಾರರಿಗೆ ಬಿಗ್ ಶಾಕ್ ಕೊಟ್ಟಂತಾಗಿದೆ. ಇತ್ತ ದರ ಏರಿಕೆ ವಿರುದ್ಧ ನಾರಿಯರು ಕಿಡಿಕಾರಿದ್ದು, ಪೆಟ್ರೋಲ್-ಡಿಸೇಲ್ ದರ ಹೆಚ್ಚಿಸಿದ್ರೆ ತರಕಾರಿ, ಹಣ್ಣಿಗೂ ಬಿಸಿ ತಟ್ಟುತ್ತದೆ. ಈ ರೀತಿ ಜಾಸ್ತಿ ಮಾಡ್ತಿದ್ರೆ ಜನರಿಗೆ ಕಷ್ಟ ಆಗುತ್ತೆ, ಫ್ರೀ ಬಸ್ ಕೊಡ್ತೀವೆ ಅಂತಾರೆ, ಡಿಸೇಲ್​ನಲ್ಲಿ ಕಿತ್ಕೋತ್ತಿದ್ದಾರೆ ಎಂದು ಮಹಿಳಾಮಣಿಯರು ಗರಂ ಆಗಿದ್ದಾರೆ.

ಬೆಂಗಳೂರು, ಜೂ.16: ಕಾಂಗ್ರೆಸ್ ಸರ್ಕಾರ (Congress Government)ವು ಪೆಟ್ರೋಲ್-ಡೀಸೆಲ್ ಬೆಲೆ (Petrol Diesel Price Increase) ಏರಿಸುವ ಮೂಲಕ ರಾಜ್ಯದ ಜನರಿಗೆ ಬರೆ ಎಳೆದಿದೆ. ದಿಡೀರ್​ ದರ ಏರಿಕೆಯಿಂದ ವಾಹನ ಸವಾರರಿಗೆ ಬಿಗ್ ಶಾಕ್ ಕೊಟ್ಟಂತಾಗಿದೆ. ಹೌದು, ಪೆಟ್ರೋಲ್ ಮೇಲೆ 3 ರೂಪಾಯಿ ಹಾಗೂ ಡಿಸೇಲ್ ಬೆಲೆಯಲ್ಲಿ ಮೂರುವರೆ ರೂಪಾಯಿ ಏರಿಕೆ ಮಾಡಿದೆ. ಈ ಹಿನ್ನಲೆ ಸರ್ಕಾರದ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಪೆಟ್ರೋಲ್ -ಡಿಸೇಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿಕಾರಿದ್ದಾರೆ. ಪೆಟ್ರೋಲ್-ಡಿಸೇಲ್ ದರ ಹೆಚ್ಚಿಸಿದ್ರೆ ತರಕಾರಿ, ಹಣ್ಣಿಗೂ ಬಿಸಿ ತಟ್ಟುತ್ತದೆ. ಈ ರೀತಿ ಜಾಸ್ತಿ ಮಾಡ್ತಿದ್ರೆ ಜನರಿಗೆ ಕಷ್ಟ ಆಗುತ್ತೆ, ಫ್ರೀ ಬಸ್ ಕೊಡ್ತೀವೆ ಅಂತಾರೆ, ಡಿಸೇಲ್​ನಲ್ಲಿ ಕಿತ್ಕೋತ್ತಿದ್ದಾರೆ. ಸರ್ಕಾರ ನಮಗೆ ಫ್ರೀ ಕೊಡೋದೇ ಬೇಡ, ರೇಟ್ ಕಡಿಮೆ ಮಾಡಲಿ. ಫ್ರೀ ಬಸ್ ಬೇಡ, ಪೆಟ್ರೋಲ್-ಡಿಸೇಲ್ ರೇಟ್ ಇಳಿಸಿ ಎಂದು ಸರ್ಕಾರದ ದರ ಏರಿಕೆ ನೀತಿಗೆ ಮಹಿಳಾಮಣಿಯರು ಗರಂ ಆಗಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ