Padahastasana: ನರವ್ಯೂಹವನ್ನು ಬಲಪಡಿಸುವ ಪಾದಹಸ್ತಾಸನ ಮಾಡುವುದು ಹೇಗೆ? ಮೋದಿ ವಿಡಿಯೋ ಇಲ್ಲಿದೆ
International Yoga Day 2024: ಯೋಗ ದಿನ ಸನ್ನಿಹಿತವಾಗಿದೆ. ಪ್ರತಿ ವರ್ಷವೂ ಜೂನ್ 21ರಂದು ವಿಶ್ವ ಯೋಗದಿನವನ್ನು ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಯೋಗದ ಮಹತ್ವವನ್ನು ತಿಳಿಸುವ ಹಾಗೂ ಅದರ ಪ್ರಯೋಜನಗಳನ್ನು ವಿವರಿಸುವ ವಿಡಿಯೋಗಳನ್ನು ಪ್ರಧಾನಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಪಾದಹಸ್ತಾಸನ.
ಯೋಗ ದಿನ ಸನ್ನಿಹಿತವಾಗಿದೆ. ಪ್ರತಿ ವರ್ಷವೂ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನ(International Yoga Day)ವನ್ನು ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಯೋಗದ ಮಹತ್ವವನ್ನು ತಿಳಿಸುವ ಹಾಗೂ ಅದರ ಪ್ರಯೋಜನಗಳನ್ನು ವಿವರಿಸುವ ವಿಡಿಯೋಗಳನ್ನು ಪ್ರಧಾನಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಪಾದಹಸ್ತಾಸನ.
ಈ ಆಸನದಲ್ಲಿ ಕಾಲಬೆರಳು ಮತ್ತು ಕಾಲುಗಂಟುಗಳನ್ನು ಸ್ಪರ್ಷಿಸಲಾಗುತ್ತದೆ. ಈ ಆಸನದಲ್ಲಿ ಕೈಯನ್ನು ಕಾಲುಗಳ ಸಮೀಪಕ್ಕೆ ತರುವುದರಿಂದ ಇದಕ್ಕೆ ಪಾದಹಸ್ತಾಸನ ಎಂದು ಕರೆಯಲಾಗುತ್ತದೆ.
ವಿಧಾನ: ಮೊದಲು ಕಾಲುಗಳನ್ನು ಹತ್ತಿರವಾಗಿಸಿ ನೇರವಾಗಿ ನಿಂತುಕೊಳ್ಳಿ, ಉಸಿರನ್ನು ಒಳತೆಗೆದುಕೊಂಡು ಎರಡೂ ಕೈಗಳನ್ನು ಮೇಲಕ್ಕೆತ್ತಿ, ಕೈಗಳು ನೇರವಾಗಿದ್ದು, ಕಿವಿಗೆ ತಾಗುವಂತಿರಬೇಕು.
ಉಸಿರನ್ನು ಹೊರಗೆ ಬಿಡುತ್ತಾ, ಸೊಂಟದಿಂದ ಕೆಳಗೆ ಬಾಗಿ ನಿಮ್ಮ ಕೈಗಳಿಂದ ಕಾಲನ್ನು ಮುಟ್ಟಿರಿ. ಈ ಭಂಗಿಯಲ್ಲಿ ಕಾಲನ್ನು ನೇರವಾಗಿಸಿ ತಲೆಯನ್ನು ಮೊಣಗಂಟಿನ ಸಮೀಪದವರೆಗೆ ಬಾಗಿಸಿ. ಇದೇ ಭಂಗಿಯಲ್ಲಿ ಸುಮಾರು 30-40 ಸೆಕೆಂಡುಗಳ ಕಾಲ ನಿಲ್ಲಿ, ಈ ಭಂಗಿ ಸೂರ್ಯ ನಮಸ್ಕಾರದ ಮೂರನೇ ಹಂತವೂ ಆಗಿದೆ. ಈ ಭಂಗಿಯಿಂದ ಮರಳಲು, ಉಸಿರನ್ನು ಒಳತೆಗೆದುಕೊಂಡು ಕೈಗಳನ್ನು ಸಡಿಲಗೊಳಿಸಿ ಬಳಿಕ ದೇಹವನ್ನು ಮೇಲಕ್ಕೆತ್ತಿ.
ಬೆನ್ನುಹುರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವವರು ಈ ಆಸನಗಳನ್ನು ಮಾಡುವುದು ಸೂಕ್ತವಲ್ಲ.
ಪ್ರಯೋಜನಗಳೇನು?
ಉದರದ ಸ್ನಾಯುಗಳು ಮತ್ತು ತೊಡೆಯ ಸ್ನಾಯುಗಳನ್ನು ಶಕ್ತಿಯುತಗೊಳಿಸುತ್ತದೆ.
ಮಲಬದ್ಧತೆ ಮುಂತಾದ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ.
ಉದರದ ಸ್ನಾಯುಗಳು ಮತ್ತು ತೊಡೆಯ ಸ್ನಾಯುಗಳನ್ನು ಶಕ್ತಿಯುತಗೊಳಿಸುತ್ತದೆ.
ನರವ್ಯೂಹವನ್ನು ಬಲಗೊಳಿಸುತ್ತದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 16, 2024 11:41 AM
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

