International Yoga Day: ಅಂತಾರಾಷ್ಟ್ರೀಯ ಯೋಗ ದಿನದಂದು ವಿಶ್ವಸಂಸ್ಥೆ ಕಚೇರಿ ಆವರಣದಲ್ಲಿ ಮೋದಿ ಮೋಡಿ, ಚಿತ್ರಗಳಲ್ಲಿ ನೋಡಿ

ಅಮೆರಿಕಾದ ನ್ಯೂಯಾರ್ಕ್​​​​ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಆವರಣದಲ್ಲಿ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದಾರೆ. 180ಕ್ಕೂ ಹೆಚ್ಚು ದೇಶಗಳ ಜನರು ಪ್ರಧಾನಿ ಮೋದಿಯವರೊಂದಿಗೆ ಯೋಗ ಮಾಡಿದ್ದಾರೆ. ವಿಶೇಷ ಚಿತ್ರಗಳು ಇಲ್ಲಿವೆ ನೋಡಿ.

Ganapathi Sharma
|

Updated on: Jun 21, 2023 | 10:23 PM

International Yoga Day 2023 PM Narendra Modi Yoga practice with 180 nations representatives at UNO main office at New York

ಯೋಗ ನಮ್ಮಲ್ಲಿ ಒಗ್ಗಟ್ಟು ಮೂಡಿಸುವ ಕೆಲಸ ಮಾಡುತ್ತದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಯೋಗ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಯೋಗವು ದೈಹಿಕ ಮತ್ತು ಮಾನಸಿಕ ಫಿಟ್ನೆಸ್ ಅನ್ನು ಕಾಪಾಡುತ್ತದೆ. ಯೋಗ ಭಾರತವು ವಿಶ್ವಕ್ಕೆ ನೀಡಿದ ಕೊಡುಗೆಯಾಗಿದೆ ಎಂದು ಮೋದಿ ಹೇಳಿದ್ದಾರೆ.

1 / 6
International Yoga Day 2023 PM Narendra Modi Yoga practice with 180 nations representatives at UNO main office at New York

ಯೋಗದ ಮೇಲೆ ಯಾವುದೇ ಹಕ್ಕುಸ್ವಾಮ್ಯವಿಲ್ಲ ಎಂದು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಇದನ್ನು ಎಲ್ಲಿ ಬೇಕಾದರೂ ಮಾಡಬಹುದು. ಏಕಾಂಗಿಯಾಗಿಯೂ ಮಾಡಬಹುದು. ಇದು ಪೇಟೆಂಟ್ ಮತ್ತು ರಾಯಧನ ಮುಕ್ತವಾಗಿದೆ ಎಂದು ಅವರು ಹೇಳಿದ್ದಾರೆ.

2 / 6
International Yoga Day 2023 PM Narendra Modi Yoga practice with 180 nations representatives at UNO main office at New York

ಹಲವು ರಾಷ್ಟ್ರಗಳ ಜನರು ಇಲ್ಲಿಗೆ ಬಂದಿರುವುದು ಸಂತಸ ತಂದಿದೆ. ಯೋಗಕ್ಕಾಗಿ ಇಲ್ಲಿಗೆ ದೂರದಿಂದ ಬಂದ ನಿಮಗೆಲ್ಲ ಧನ್ಯವಾದಗಳು ಎಂದು ಮೋದಿ ಹೇಳಿದ್ದಾರೆ.

3 / 6
International Yoga Day 2023 PM Narendra Modi Yoga practice with 180 nations representatives at UNO main office at New York

ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಯೋಗ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ನಮನ ಸಲ್ಲಿಸಿದರು. ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.

4 / 6
International Yoga Day 2023 PM Narendra Modi Yoga practice with 180 nations representatives at UNO main office at New York

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಯೋಗ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯರು ಸೇರಿದಂತೆ 180 ದೇಶಗಳ ಜನರು ಭಾಗವಹಿಸಿದ್ದರು.

5 / 6
International Yoga Day 2023 PM Narendra Modi Yoga practice with 180 nations representatives at UNO main office at New York

ಯೋಗದ ಶಕ್ತಿ ನಮ್ಮನ್ನು ಆರೋಗ್ಯವಾಗಿರಿಸುವುದಷ್ಟೇ ಅಲ್ಲ, ಸ್ವಸ್ಥವಾಗಿರಿಸುವುದಾಗಿದೆ. ನಿಜವಾಗಿಯೂ ಇಂದು ಯೋಗ ಜಾಗತಿಕವಾಗಿ ಪ್ರಖ್ಯಾತಿಯಾಗಿದೆ. ಯೋಗ ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದೆ. ಸರ್ವೇ ಭವಂತು ಸುಖಿನಃ. ಸರ್ವೇ ಸಂತು ನಿರಾಮಯಃ. ಎಲ್ಲರೂ ಸುಖವಾಗಿ, ಆರೋಗ್ಯವಾಗಿ ಇರುವಂತಾಗಲಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

6 / 6
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ