ತಂದೆಯ ಅಂತ್ಯಕ್ರಿಯೆ ನೆರವೇರಿಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪಿ ಅನುಕುಮಾರ್​

ತಂದೆಯ ಅಂತ್ಯಕ್ರಿಯೆ ನೆರವೇರಿಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪಿ ಅನುಕುಮಾರ್​

ವಿವೇಕ ಬಿರಾದಾರ
|

Updated on: Jun 16, 2024 | 8:06 AM

ನಟ ದರ್ಶನ ಮತ್ತು ಗ್ಯಾಂಗ್​ನಿಂದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಅನುಕುಮಾರ್​ ತಂದೆ ಚಂದ್ರಣ್ಣ (60) ಅವರ ಅಂತ್ಯಕ್ರಿಯೆ ಶನಿವಾರ ಮಧ್ಯರಾತ್ರಿ ಹೊಳಲ್ಕೆರೆ ರಸ್ತೆಯ ರುದ್ರಭೂಮಿಯಲ್ಲಿ ನೆರವೇರಿತು.

ಚಿತ್ರದುರ್ಗ, ಜೂನ್​ 16: ನಟ ದರ್ಶನ (Darshan) ಮತ್ತು ಗ್ಯಾಂಗ್​ನಿಂದ ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದ ಆರೋಪಿ ಅನುಕುಮಾರ್​ ತಂದೆ ಚಂದ್ರಣ್ಣ (60) ಅವರ ಅಂತ್ಯಕ್ರಿಯೆ ಶನಿವಾರ ಮಧ್ಯರಾತ್ರಿ ಹೊಳಲ್ಕೆರೆ ರಸ್ತೆಯ ರುದ್ರಭೂಮಿಯಲ್ಲಿ ನೆರವೇರಿತು. ತಂದೆಯ ಅಂತ್ಯಕ್ತಿಯೆಯಲ್ಲಿ ಆರೋಪಿ ಅನುಕುಮಾರ್​ ಭಾಗವಹಿಸಿದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಗನನ್ನು ಕಂಡು ತಾಯಿ ಕಣ್ಣೀರಿಟ್ಟರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ7 ಅನುಕುಮಾರ್​ ಬಂಧಿತರಾಗಿದ್ದನ್ನು ತಿಳಿದು ಅವರ ತಂದೆ ಚಂದ್ರಣ್ಣ ಆಘಾತಕ್ಕೊಳಗಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ರೇಣುಕಾಸ್ವಾಮಿಯನ್ನು ಅಪಹರಿಸಿದ್ದ ನಾಲ್ವರು ಆರೋಪಿಗಳು ಎ4 ರಘು, ಎ6 ಜಗದೀಶ್, ಎ7 ಅನು, ಎ8 ರವಿಯನ್ನು ಪೊಲೀಸರು ಚಿತ್ರದುರ್ಗಕ್ಕೆ ಕರೆತಂದಿದ್ದಾರೆ. ಅನುಕುಮಾರ್​ ಹೊರತುಪಡಿಸಿ ಉಳಿದ ಆರೋಪಿಗಳನ್ನು ಖಾಸಗಿ ಹೋಟೆಲ್​​ನಲ್ಲಿ ಇರಿಸಲಾಗಿದೆ. ಅಂತ್ಯಕ್ರಿಯೆ ನೆರವೇರಿದ ಬಳಿಕ ಪೊಲೀಸರು ಸ್ಥಳ ಮಹಜರು ನಡೆಸಿದರು.

ಇದನ್ನೂ ಓದಿ: ಜೂನ್ 20ರವರೆಗೆ ದರ್ಶನ್ ಹಾಗೂ ಗ್ಯಾಂಗ್​ ಪೊಲೀಸ್ ಕಸ್ಟಡಿ ಮುಂದುವರಿಕೆ

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ