ರೇಣುಕಾ ಸ್ವಾಮಿ ಕೊಲೆ: ಪ್ರಕರಣದ 17 ಆರೋಪಿಗಳು ಎಸಗಿರುವ ಕೃತ್ಯಗಳೇನು?

ರೇಣುಕಾ ಸ್ವಾಮಿ ಪ್ರಕರಣದಲ್ಲಿ ದರ್ಶನ್ ತೂಗುದೀಪ ಪವಿತ್ರಾ ಗೌಡ ಸೇರಿ 17 ಆರೋಪಿಗಳಿದ್ದಾರೆ. ಪ್ರತಿಯೊಬ್ಬ ಆರೋಪಿಯ ಮೇಲೂ ಇರುವ ಆರೋಪವೇನು? ಈ ಪ್ರಕರಣದಲ್ಲಿ ಆರೋಪಿಗಳು ಎಸಗಿರುವ ಕೃತ್ಯಗಳೇನು? ವಿವರ ಇಲ್ಲಿದೆ.

ರೇಣುಕಾ ಸ್ವಾಮಿ ಕೊಲೆ: ಪ್ರಕರಣದ 17 ಆರೋಪಿಗಳು ಎಸಗಿರುವ ಕೃತ್ಯಗಳೇನು?
ದರ್ಶನ್-ರೇಣುಕಾ ಸ್ವಾಮಿ
Follow us
|

Updated on: Jun 15, 2024 | 9:53 PM

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ದರ್ಶನ್ (Darshan Thoogudeepa), ಪವಿತ್ರಾ ಗೌಡ ಸೇರಿದಂತೆ 17 ಮಂದಿ ಆರೋಪಿಗಳಿದ್ದಾರೆ. ಪ್ರತಿಯೊಬ್ಬ ಆರೋಪಿಯೂ ಕೊಲೆ ಪ್ರಕರಣದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಭಾಗಿಯಾಗಿದ್ದಾರೆ ಎಂಬುದು ಪೊಲೀಸರ ಆರೋಪ. ರೇಣುಕಾ ಸ್ವಾಮಿ ಪ್ರಕರಣದಲ್ಲಿನ ಎಲ್ಲ ಆರೋಪಿಗಳ ಮೇಲೆ ಇರುವ ಆರೋಪಗಳೇನು? ಪೊಲೀಸರ ಪ್ರಕಾರ, ಯಾವ ಆರೋಪಿ ಯಾವ ಕೃತ್ಯ ಎಸಗಿದ್ದಾನೆ? ಇಲ್ಲಿದೆ ಸಂಪೂರ್ಣ ಮಾಹಿತಿ.

A1 ಪವಿತ್ರಾಗೌಡ: ಕೊಲೆ ಮಾಡಲು ಮೂಲ ಕಾರಣ, ಮತ್ತು ಹಲ್ಲೆ ನಡೆಸುವ ಸ್ಥಳದಲ್ಲಿ ಹಾಜರಿದ್ದಳು, ಮೃತ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿರುವ ಆರೋಪ.

A2 ದರ್ಶನ್: ರೇಣುಕಾ ಸ್ವಾಮಿಯನ್ನು ಅಪಹರಣ ಮಾಡಿಸಿದ್ದು, ಹಲ್ಲೆ ಮಾಡಿರುವುದು, ಕೊಲೆ ಆದ ನಂತರ ಅದನ್ನು ಮುಚ್ಚಿಹಾಕಲು ಯತ್ನಿಸಿದ್ದು, ಸಾಕ್ಷ್ಯ ನಾಶದ ಯತ್ನ ಆರೋಪ.

A3 ಪವನ್: ಪವಿತ್ರ ಜೊತೆಗೆ ಇದ್ದು, ರೇಣುಕಾ ಸ್ವಾಮಿಯ ಅಪರಹರಣ ಮಾಡುವಾಗ ಮತ್ತೊಬ್ಬ ಆರೋಪಿ ರಾಘವೇಂದ್ರ ನೆರವು. ಶೆಡ್​ನಲ್ಲಿ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿರುವ ಆರೋಪ.

A4 ರಾಘವೇಂದ್ರ: ಚಿತ್ರದುರ್ಗ ದರ್ಶನ್ ಅಭಿಮಾನಿಗಳ ಸಂಘದ ಅದ್ಯಕ್ಷ, ರೇಣುಕಾ ಸ್ವಾಮಿಯ ಅಪಹರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ, ಹಲ್ಲೆ ಮಾಡಿದ್ದಾನೆ . ಕೊಲೆಯಾದ ಸ್ಥಳದಲ್ಲಿ ಹಾಜರಿದ್ದ, ಪ್ರಕರಣ ಮುಚ್ಚಿಹಾಕಲು ಯತ್ನ.

A5 ನಂದೀಶ: ರೇಣುಕಾ ಸ್ವಾಮಿಯ ಮೇಲೆ ತೀವ್ರವಾಗಿ ಹಲ್ಲೆ ಮಾಡಿರುವ ವ್ಯಕ್ತಿಗಳಲ್ಲಿ ಒಬ್ಬ. ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ಮಾಡಿರುವ ಆರೋಪ.

A6 ಜಗದೀಶ್ ಅಲಿಯಾಸ್ ಜಗ್ಗ: ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿಕೊಂಡು ಬೆಂಗಳೂರಿಗೆ ತಂದ ತಂಡದ ಸದಸ್ಯ, ಕೊಲೆ ಆದ ಸ್ಥಳದಲ್ಲಿದ್ದ, ಆ ಬಳಿಕ ನಾಪತ್ತೆ ಆಗಿದ್ದ.

A7 ಅನುಕುಮಾರ್ ಅಲಿಯಾಸ್ ಅನು : ರೇಣುಕಾ ಸ್ವಾಮಿಯನ್ನು ಅಪಹರಣ ಮಾಡಿಕೊಂಡು ಚಿತ್ರದುರ್ಗ ದಿಂದ ಬಂದಿದ್ದ ತಂಡದ ಸದಸ್ಯ , ರೇಣುಕಾ ಸ್ವಾಮಿಯ ಸಾವಿನ ಬಳಿ ನಾಪತ್ತೆಯಾಗಿದ್ದ. ಈಗ ಬಂಧಿತ.

ಇದನ್ನೂ ಓದಿ:ರೇಣುಕಾ ಸ್ವಾಮಿ ಹತ್ಯೆ ಪ್ರಕರಣ: ಜೂನ್ 20ರವರೆಗೆ ದರ್ಶನ್ ಹಾಗೂ ಗ್ಯಾಂಗ್​ ಪೊಲೀಸ್ ಕಸ್ಟಡಿ ಮುಂದುವರಿಕೆ

A8 ರವಿ ಅಲಿಯಾಸ್ ರವಿಶಂಕರ್ : ಕಾರು ಚಾಲಕ, ರೇಣುಕಾ ಸ್ವಾಮಿಯನ್ನು ಅಪಹರಿಸಿ ತಂದ ಕಾರಿನ ಚಾಲಕ. ಚಿತ್ರದುರ್ಗದಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಅಪ್ರೂವರ್ ಆಗಲು ನಿರಾಕರಿಸಿದ್ದ.

A9 ರಾಜು: ನಾಪತ್ತೆ, ಈತನ ಬಂಧನ ಆಗಬೇಕಿದೆ.

A10 ವಿನಯ್ : ಎರಡನೇ ಆರೋಪಿ ದರ್ಶನ್ ಆಪ್ತ, ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಮಾಲಿಕ, ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿರುವವರಲ್ಲಿ ಒಬ್ಬ. ಕೊಲೆಯ ಹೊಣೆಯನ್ನು ಬೇರೆಯವರ ಮೇಲೆ ಹೊರಿಸಿ, ಅವರಿಗೆ ಹಣ ನೀಡಿದ್ದ.

A11 ನಾಗರಾಜು ಅಲಿಯಾಸ್ ನಾಗ: ನಟ ದರ್ಶನ್ ನ ಅನಧಿಕೃತ ಮ್ಯಾನೇಜರ್, ಪಾರ್ಟಿ ಕುಡಿತ ಸೇರಿ ಎಲ್ಲಾ ಕಡೆ ಇರ್ತಿದ್ದ, ಹಲ್ಲೆ ಮಾಡುವಾಗ ಜೊತೆಗೆ ಇದ್ದ, ರೇಣುಕಾ ಸ್ವಾಮಿ ಮೇಲೆ ತೀವ್ರ ಹಲ್ಲೆ ಮಾಡಿದವರಲ್ಲಿ ಒಬ್ಬ.

A12 ಲಕ್ಷ್ಮಣ್ : ದರ್ಶನ್ ಕಾರು ಚಾಲಕ, ಕೊಲೆ ಮಾಡುವಾಗ ಸ್ಥಳದಲ್ಲಿ ಇದ್ದು ಹಲ್ಲೆ ಮಾಡಿದ್ದ, ಮೃತ ದೇಹವನ್ನು ಎಸೆಯಲು ಬೇಕಾದ ವ್ಯವಸ್ಥೆ ಮಾಡಿದ್ದ ಆರೋಪ.

A13 ದೀಪಕ್ : ದರ್ಶನ್ ಆಪ್ತನಾಗಿದ್ದ,ಹಲ್ಲೆ ಮಾಡಿದ್ದು ನಂತ್ರ ದರ್ಶನ್ ,ಪ್ರದೋಶ್ ಹೇಳಿದಂತೆ ಹಣವನ್ನು ಇತರೆ ಆರೋಪಿಗಳಾದ ನಿಖಿಲ್, ಕೇಶವಮೂರ್ತಿ ಮತ್ತು ಕಾರ್ತಿಕ್ ಗೆ ಹೇಳಿ ಒಪ್ಪಿಸಿ ಹಣ ನೀಡಿದ್ದ ತಲಾ ಐದು ಲಕ್ಷ ಹಣ ನೀಡಿದ್ದ.

ಇದನ್ನೂ ಓದಿ:ನ್ಯಾಯಾಲಯದಲ್ಲಿ ಇಂದು ನಡೆದಿದ್ದೇನು? ವಿವರಿಸಿದ ದರ್ಶನ್ ಪರ ವಕೀಲ

A14 ಪ್ರದೂಶ್: ದರ್ಶನ್ ಜೊತೆಗೆ ಇದ್ದುಕೊಂಡು ಹಲ್ಲೆ ಮಾಡಿದ್ದ, ನಂತರ ದರ್ಶನ್ ಜೊತೆಗೆ ವ್ಯವಹಾರ ನಡೆದಿ ಕೊಲೆ ಮಾಡಿದ್ದವರ ಖರ್ಚಿಗಾಗಿ ಮೂವತ್ತು ಲಕ್ಷ ಹಣವನ್ನು ಪಡೆದುತಂದಿದ್ದ, ದೀಪಕ್ ಮೂಲಕ ವ್ಯವಹಾರ ಮಾಡಿಸಿದ್ದ. ಆರೋಪಿಗಳು ಭಯ ಪಟ್ಟಾಗ ಮತ್ತೆ ದರ್ಶನ್ ಭೇಟಿ ಮಾಡಿಸಿ ಸರೆಂಡರ್ ಮಾಡಿಸಿದ್ದ.

A15 ಕಾರ್ತಿಕ್ ಅಲಿಯಾಸ್ ಕಪ್ಪೆ: ಶೆಡ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಕಾರ್ಮಿಕ, ದರ್ಶನ್ ಹಾಗೂ ಆಪ್ತರು ಕೊಟ್ಟ ಹಣ ಪಡೆದು ರೇಣುಕಾ ಸ್ವಾಮಿಯ ಶವ ಸಾಗಿಸಿದ್ದ, ನಂತರ ಪೊಲೀಸರ ಮುಂದೆ ತಾನೇ ಕೊಲೆ ಮಾಡಿದ್ದಾಗಿ ಸುಳ್ಳು ಆರೋಪ ಹೊತ್ತು ಸರಂಡರ್ ಆಗಿದ್ದ.

A16 ಕೇಶವಮೂರ್ತಿ: ಹಣ ಪಡೆದು ಮೃತ ದೇಹವನ್ನು ಕಾಮಾಕ್ಷಿ ಪಾಳ್ಯದ ರಾಜಕಾಲುವೆ ಬಳಿ ಹಾಕಿ, ರೇಣುಕಾ ಸ್ವಾಮಿಯನ್ನು ತಾನೇ ಕೊಂದಿದ್ದಾಗಿ ಪೊಲೀಸರ ಮುಂದೆ ಶರಣಾಗಿದ್ದ.

A17 ನಿಖಿಲ್: ದರ್ಶನ್ ಹಾಗೂ ಆಪ್ತರು ಕೊಟ್ಟ ಹಣ ಪಡೆದುಕೊಂಡು ರೇಣುಕಾ ಸ್ವಾಮಿಯ ಮೃತದೇಹ ಸಾಗಿಸಿದ್ದ, ಬಳಿಕ ಪೊಲೀಸರ ಮುಂದೆ ರೇಣುಕಾ ಸ್ವಾಮಿ ಕೊಲೆ ಮಾಡಿದ್ದಾಗಿ ಸುಳ್ಳು ಆರೋಪ ಹೊತ್ತುಕೊಂಡ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
Daily Devotional: ಪಂಚಮುಖ ರುದ್ರಾಕ್ಷಿ ಧಾರಣೆಯ ಮಹತ್ವ ತಿಳಿಯಿರಿ
Daily Devotional: ಪಂಚಮುಖ ರುದ್ರಾಕ್ಷಿ ಧಾರಣೆಯ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯ ಅವಿವಾಹಿತರಿಗೆ ಇಂದು ವಿವಾಹ ನಿಶ್ಚಯವಾಗಲಿದೆ
Daily Horoscope: ಈ ರಾಶಿಯ ಅವಿವಾಹಿತರಿಗೆ ಇಂದು ವಿವಾಹ ನಿಶ್ಚಯವಾಗಲಿದೆ
International Yoga Day: ಶ್ರೀನಗರದ ದಾಲ್​ ಸರೋವರದ ತಟದಲ್ಲಿ ಮೋದಿ ಯೋಗ
International Yoga Day: ಶ್ರೀನಗರದ ದಾಲ್​ ಸರೋವರದ ತಟದಲ್ಲಿ ಮೋದಿ ಯೋಗ
ಕ್ಯಾಮೆರಾ ಕೆಲಸ ನೋಡಿಕೋ ಅಂತ ಪಾರ್ವತಮ್ಮ ಹೇಳಿದ್ದಕ್ಕೆ ದರ್ಶನ್​ಗೆ ಬೇಸರ
ಕ್ಯಾಮೆರಾ ಕೆಲಸ ನೋಡಿಕೋ ಅಂತ ಪಾರ್ವತಮ್ಮ ಹೇಳಿದ್ದಕ್ಕೆ ದರ್ಶನ್​ಗೆ ಬೇಸರ
ಮತ್ತೆ ದರ್ಶನ್​ ಹಾಗೂ ಗ್ಯಾಂಗ್ ಖಾಕಿ ಕಸ್ಟಡಿಗೆ! ಜಿ.ಪರಮೇಶ್ವರ್ ಹೇಳಿದ್ದೇನು
ಮತ್ತೆ ದರ್ಶನ್​ ಹಾಗೂ ಗ್ಯಾಂಗ್ ಖಾಕಿ ಕಸ್ಟಡಿಗೆ! ಜಿ.ಪರಮೇಶ್ವರ್ ಹೇಳಿದ್ದೇನು
ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿ ಅಗ್ನಿ ಅವಘಡ: ತಪ್ಪಿದ ಭಾರೀ ಅನಾಹುತ
ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿ ಅಗ್ನಿ ಅವಘಡ: ತಪ್ಪಿದ ಭಾರೀ ಅನಾಹುತ
ಜೈಲಿಗೆ ಹೋದ ಪವಿತ್ರಾ ಗೌಡ; ಅಮ್ಮನಿಗಾಗಿ ಪೊಲೀಸ್ ವ್ಯಾನ್ ಹೊರಗೆ ಕಾದ ಮಗಳು
ಜೈಲಿಗೆ ಹೋದ ಪವಿತ್ರಾ ಗೌಡ; ಅಮ್ಮನಿಗಾಗಿ ಪೊಲೀಸ್ ವ್ಯಾನ್ ಹೊರಗೆ ಕಾದ ಮಗಳು
ರೇಣುಕಾ ಸ್ವಾಮಿ ಪ್ರಕರಣ: ಪವಿತ್ರಾ ಗೌಡ ಪರ ವಕೀಲರ ಆಕ್ರೋಶದ ಪ್ರತಿಕ್ರಿಯೆ
ರೇಣುಕಾ ಸ್ವಾಮಿ ಪ್ರಕರಣ: ಪವಿತ್ರಾ ಗೌಡ ಪರ ವಕೀಲರ ಆಕ್ರೋಶದ ಪ್ರತಿಕ್ರಿಯೆ
ಕೋರ್ಟ್​ ಆವರಣದಲ್ಲೂ ದರ್ಶನ್​ಗೆ ಅಭಿಮಾನಿಗಳ ಜೈಕಾರ; ವಿಡಿಯೋ ನೋಡಿ..
ಕೋರ್ಟ್​ ಆವರಣದಲ್ಲೂ ದರ್ಶನ್​ಗೆ ಅಭಿಮಾನಿಗಳ ಜೈಕಾರ; ವಿಡಿಯೋ ನೋಡಿ..
ಕಟ್ಟಡ ದಿಢೀರ್ ಕುಸಿತ; ಅವಶೇಷಗಳಡಿ ಸಿಲುಕಿದ್ದ 8 ಕಾರ್ಮಿಕರ ಪೈಕಿ 2 ರಕ್ಷಣೆ
ಕಟ್ಟಡ ದಿಢೀರ್ ಕುಸಿತ; ಅವಶೇಷಗಳಡಿ ಸಿಲುಕಿದ್ದ 8 ಕಾರ್ಮಿಕರ ಪೈಕಿ 2 ರಕ್ಷಣೆ