ರೇಣುಕಾ ಸ್ವಾಮಿ ಕೊಲೆ ಕೇಸ್; ಆರೋಪಿಗಳನ್ನು ನೋಡಲು ಮುಗಿಬಿದ್ದ ಜನ
ನಟ ದರ್ಶನ್ ಮತ್ತು ಗ್ಯಾಂಗ್ನಿಂದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಅದರಂತೆ ಇಂದು(ಜೂ.16) ಪ್ರಕರಣದ 4ನೇ ಆರೋಪಿಯಾದ ಚಿತ್ರದುರ್ಗದ ರಘು ಎಂಬಾತನ ಮನೆಯಲ್ಲಿ ನಾಲ್ವರು ಆರೋಪಿಗಳನ್ನ ಕರೆತಂದು ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳ ಮಹಜರು ನಡೆಸಿದರು.
ಚಿತ್ರದುರ್ಗ, ಜೂ.16: ನಟ ದರ್ಶನ್ ಮತ್ತು ಗ್ಯಾಂಗ್ನಿಂದ ರೇಣುಕಾ ಸ್ವಾಮಿ(Renuka Swamy) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಈಗಾಗಲೇ ಆರೋಪಿಗಳ ಸಂಖ್ಯೆ 19ಕ್ಕೆ ಏರಿದೆ. ಅದರಂತೆ ಇಂದು(ಜೂ.16) ಪ್ರಕರಣದ 4ನೇ ಆರೋಪಿಯಾದ ಚಿತ್ರದುರ್ಗದ ರಘು ಎಂಬಾತನ ಮನೆಯಲ್ಲಿ ನಾಲ್ವರು ಆರೋಪಿಗಳನ್ನ ಕರೆತಂದು ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳ ಮಹಜರು ನಡೆಸಿದರು. ಈ ವೇಳೆ ಆರೋಪಿಗಳನ್ನು ನೋಡಲು ಸ್ಥಳೀಯರು ಮುಗಿಬಿದ್ದಿದ್ದಾರೆ.
ರೇಣುಕಾ ಸ್ವಾಮಿ ಕೊರಳಲ್ಲಿನ ಚಿನ್ನದ ಸರ, ನಟ ದರ್ಶನ್ ಗ್ಯಾಂಗ್ ನೀಡಿದೆ ಎನ್ನಲಾಗುತ್ತಿರುವ 5 ಲಕ್ಷ ರೂ. ರಿಕವರಿಗೆ ಸತತ ಅರ್ಧಗಂಟೆಯಿಂದ ರಾಘವೇಂದ್ರ ಮನೆಯಲ್ಲಿ ಶೋಧಕಾರ್ಯ ನಡೆಯುತ್ತಿದೆ. ಈ ವೇಳೆ ರಘು ಪತ್ನಿ ಸಹನಾ ಅವರನ್ನು ವಿಚಾರಣೆ ನಡೆಸುತ್ತಿದ್ದು, ರಘು ವಾಸವಾಗಿರುವ ಬಾಡಿಗೆ ಮನೆಯ ಮಾಲೀಕರಾದ ಗೌರಮ್ಮ ಬಳಿಯೂ ಅನು ಹಾಗೂ ಜಗ್ಗ ಮನೆಗೆ ಬಂದಿದ್ದ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos