AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್​ ಹಾಡಿಗೂ, ಗಣೇಶ್​ ನಟನೆಯ ‘ಬಾನ ದಾರಿಯಲಿ’ ಚಿತ್ರಕ್ಕೂ ಏನು ಲಿಂಕ್​?

ಪುನೀತ್​ ಹಾಡಿಗೂ, ಗಣೇಶ್​ ನಟನೆಯ ‘ಬಾನ ದಾರಿಯಲಿ’ ಚಿತ್ರಕ್ಕೂ ಏನು ಲಿಂಕ್​?

ಮದನ್​ ಕುಮಾರ್​
|

Updated on:Sep 06, 2023 | 2:09 PM

Share

‘ಬಾನ ದಾರಿಯಲಿ..’ ಎಂದ ತಕ್ಷಣ ಎಲ್ಲರಿಗೂ ಪುನೀತ್​ ರಾಜ್​ಕುಮಾರ್​ ಅವರ ‘ಭಾಗ್ಯವಂತ’ ಸಿನಿಮಾದ ಸಾಂಗ್​ ನೆನಪಾಗುತ್ತದೆ. ಹಾಗಾದರೆ ಆ ಹಾಡಿಗೂ ತಮ್ಮ ಸಿನಿಮಾದ ಕಥೆಗೂ ಯಾವ ರೀತಿ ನಂಟು ಇದೆ ಎಂಬುದನ್ನು ಗಣೇಶ್​ ವಿವರಿಸಿದ್ದಾರೆ. ಈ ಚಿತ್ರಕ್ಕೆ ಪ್ರೀತಂ ಗುಬ್ಬಿ ನಿರ್ದೇಶನ ಮಾಡಿದ್ದಾರೆ. ಚಿತ್ರದ ಟ್ರೇಲರ್​ ವೈರಲ್​ ಆಗಿದೆ.

‘ಗೋಲ್ಡನ್​ ಸ್ಟಾರ್​’ ಗಣೇಶ್​ ನಟನೆಯ ‘ಬಾನ ದಾರಿಯಲಿ’ (Baanadariyalli) ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಗಣೇಶ್​ ಜೊತೆ ರುಕ್ಮಿಣಿ ವಸಂತ್​, ರೀಷ್ಮಾ ನಾಣಯ್ಯ ಮುಂತಾದವರು ನಟಿಸಿದ್ದಾರೆ. ಪ್ರೀತಂ ಗುಬ್ಬಿ ಅವರು ನಿರ್ದೇಶನ ಮಾಡಿದ್ದಾರೆ. ಟ್ರೇಲರ್​ ರಿಲೀಸ್​ ಕಾರ್ಯಕ್ರಮದಲ್ಲಿ ಗಣೇಶ್​ (Golden Star Ganesh) ಅವರು ಈ ಚಿತ್ರದ ಟೈಟಲ್​ ಬಗ್ಗೆ ಮಾತನಾಡಿದ್ದಾರೆ. ‘ಬಾನ ದಾರಿಯಲಿ..’ ಎಂದ ತಕ್ಷಣ ಎಲ್ಲರಿಗೂ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರ ‘ಭಾಗ್ಯವಂತ’ ಸಿನಿಮಾದ ಸಾಂಗ್​ ನೆನಪಾಗುತ್ತದೆ. ಹಾಗಾದರೆ ಆ ಹಾಡಿಗೂ ತಮ್ಮ ಸಿನಿಮಾದ ಕಥೆಗೂ ಯಾವ ರೀತಿ ನಂಟು ಇದೆ ಎಂಬುದನ್ನು ಗಣೇಶ್​ ವಿವರಿಸಿದ್ದಾರೆ. ‘ನನಗೆ ಮತ್ತು ಪ್ರೀತಂ ಗುಬ್ಬಿ ಅವರಿಗೆ ಈ ಸಿನಿಮಾ ತುಂಬ ಸ್ಪೆಷಲ್​. ಇದು ಪ್ರೀತಿಯ ಬಗ್ಗೆ ಇರುವ ಸಿನಿಮಾ. ಯಾವ ಟೈಟಲ್​ ಅಂತ ಯೋಚಿಸುತ್ತಿದ್ದಾಗ ಪುನೀತ್​ ರಾಜ್​ಕುಮಾರ್​ ಅವರ ಹಾಡು ಕೇಳಿ ಈ ಶೀರ್ಷಿಕೆ ಆಯ್ಕೆ ಮಾಡಿಕೊಂಡೆವು. ನಮ್ಮ ಸಿನಿಮಾ ನೋಡಿದ ಬಳಿಕ ಈ ಹಾಡಿನ ಕೆಲವು ಸಾಲುಗಳು ನಮ್ಮನ್ನು ಕಾಡುತ್ತವೆ’ ಎಂದು ಗಣೇಶ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Sep 06, 2023 01:54 PM
Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More