ಬಿಕಾನೇರ್‌ನ ರಾಜ ಕುಟುಂಬದ ಕುಲದೇವರಾದ ಇಲಿಗಳಿಗೆ ಈ ದೇಗುಲದಲ್ಲಿ ಮೊದಲ ನೈವೇದ್ಯ… ಅವು ತಿಂದ ನಂತರ, ಉಳಿದಿದ್ದು ಭಕ್ತರಿಗೆ ಪ್ರಸಾದ!
ಕರಣಿ ಮಾತಾ ಮಂದಿರವನ್ನು ಬಿಕಾನೇರ್‌ನ ರಾಜ ಕುಟುಂಬದ ಕುಲದೇವಿ ಎಂದು ಕರೆಯಲಾಗುತ್ತದೆ. ಇಲ್ಲಿ ವಾಸಿಸುವ ಬಿಳಿ ಇಲಿಗಳನ್ನು ಮಾತೃ ವಾಹನ ಎಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಈ ದೇವಾಲಯವನ್ನು ಇಲಿ ದೇವಾಲಯ ಎಂದೂ ಕರೆಯುತ್ತಾರೆ. ಇಲ್ಲಿ 20 ಸಾವಿರಕ್ಕೂ ಹೆಚ್ಚು ಇಲಿಗಳು ಓಡಾಡುತ್ತವೆ. ಅದರಲ್ಲಿ ಕೆಲವು ಬಿಳಿ ಇಲಿಗಳೂ ಇವೆ. ಇಲ್ಲಿಗೆ ಬರುವ ಭಕ್ತನು ಸತ್ತರೆ ಅವನು ಕರ್ಣಿ ಮಾತಾ ದೇವಸ್ಥಾನದಲ್ಲಿ ಮರುಜನ್ಮ ಪಡೆಯುತ್ತಾನೆ ಎಂದು ನಂಬಲಾಗಿದೆ.
ಭಾರತದಲ್ಲಿ ಅನೇಕಾನೇಕ ಧಾರ್ಮಿಕ ಸ್ಥಳಗಳಿವೆ. ಪ್ರತಿಯೊಂದು ದೇವಾಲಯ ಮತ್ತು ಕ್ಷೇತ್ರದ ಇತಿಹಾಸವು ತುಂಬಾ ಆಸಕ್ತಿದಾಯಕವಾಗಿದೆ. ಕರ್ಣಿ ಮಾತಾ ಮಂದಿರವು (karni mata temple in rajasthan) ಅಂತಹ ಒಂದು ಸ್ಥಳವಾಗಿದೆ. ಈ ಪುಣ್ಯಕ್ಷೇತ್ರವು ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಬಹಳ ಪ್ರಸಿದ್ಧವಾಗಿದೆ. ತನ್ನ ಸೌಂದರ್ಯದಿಂದ ಪ್ರವಾಸಿಗರ ಮನ ಸೆಳೆಯುವಲ್ಲಿ ರಾಜಸ್ಥಾನ ಸದಾ ಮುಂದಿದೆ. ಇದು ತನ್ನ ನೈಸರ್ಗಿಕ ಸೌಂದರ್ಯ, ಕಲೆ ಮತ್ತು ರಾಯಲ್ ನೋಟಕ್ಕಾಗಿ (Royal Family) ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಆದರೆ ಬೇಸಿಗೆಯಲ್ಲಿ ಇಲ್ಲಿಗೆ ಬರಲು ಜನ ಹೆದರುತ್ತಾರೆ. ಪ್ರಖರ ಬಿಸಿಲಿನಿಂದ ಇಲ್ಲಿ ನಡೆದಾಡಲೂ ಕಷ್ಟವಾಗುತ್ತದೆ. ಅಲ್ಲದೆ, ರಾಜಸ್ಥಾನವು ತನ್ನ ಧಾರ್ಮಿಕ ಸ್ಥಳಗಳಿಗಾಗಿ ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ. ಇಲ್ಲಿ ಇಲಿಗೆ ಸಂಬಂಧಿಸಿದ ದೇವಾಲಯವಿದೆ (Spiritual).
ಹೌದು, ರಾಜಸ್ಥಾನದ ಬಿಕಾನೇರ್‌ನಲ್ಲಿ ಕರಣಿ ಮಾತಾ ದೇವಾಲಯವಿದೆ. ಇದರ ವಿಶೇಷತೆ ಏನೆಂದು ತಿಳಿದರೆ ಅಚ್ಚರಿ ಪಡುತ್ತೀರಿ. ಯಾಕೆಂದರೆ.. ಈ ದೇವಸ್ಥಾನದಲ್ಲಿ ದೇವರ ಮುಂದೆ ಇಲಿಗಳಿಗೆ ನೈವೇದ್ಯ ಅರ್ಪಿಸುತ್ತಾರೆ. ಮತ್ತು ಅವು ತಿಂದು ಬಿಟ್ಟ, ಉಳಿದ ಆಹಾರವನ್ನು ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ. ಇಂತಹ ವಿಚಿತ್ರ ಆಚರಣೆ ಇರುವ ದೇವಸ್ಥಾನ ರಾಜಸ್ಥಾನದ ಬಿಕಾನೇರ್ ನಲ್ಲಿರುವ ಕರಣಿ ಮಾತಾ ದೇವಸ್ಥಾನ. ಇದು ಯಾವಾಗಲೂ ಪ್ರವಾಸಿಗರ ಜನಸಂದಣಿಯಿಂದ ತುಂಬಿದ್ದು, ಬಹಳ ಜನಪ್ರಿಯವಾಗಿದೆ. ಈ ದೇವಾಲಯವನ್ನು ಕರ್ಣಿ ದೇವಿಗೆ ಸಮರ್ಪಿಸಲಾಗಿದೆ. ಈ ದೇವಾಲಯವು ಇಲಿಗಳಿಂದಾಗಿ ದೇಶದಾದ್ಯಂತ ಬಹಳ ಜನಪ್ರಿಯವಾಗಿದೆ. ಇಲ್ಲಿ ಭಕ್ತರಿಗೆ ಇಲಿಗಳು ತಿಂದು ಉಳಿಸಿದ್ದನ್ನೇ ಪ್ರಸಾದವಾಗಿ ನೀಡಲಾಗುತ್ತದೆ. ಹಾಗಾದರೆ ಈ ದೇವಾಲಯದ ಬಗ್ಗೆ ಇನ್ನಷ್ಟು ಕೆಲವು ಕುತೂಹಲಕಾರಿ ಸಂಗತಿಗಳನ್ನು ತಿಳಿಯೋಣ.
ಹೌದು, ಕರಣಿ ಮಾತಾ ದೇವಾಲಯವನ್ನು 20 ನೇ ಶತಮಾನದಲ್ಲಿ ಬಿಕಾನೇರ್‌ನ ಮಹಾರಾಜ ಗಂಗಾ ಸಿಂಗ್ ನಿರ್ಮಿಸಿದ. ಈ ದೇವಾಲಯವು ತುಂಬಾ ಸುಂದರವಾಗಿದೆ. ಈ ದೇವಾಲಯದ ಮುಖ್ಯ ದ್ವಾರ ಬೆಳ್ಳಿಯಿಂದ ಮಾಡಲ್ಪಟ್ಟಿದೆ. ಕರಣಿ ಮಾತೆಗೆ ಚಿನ್ನದ ಗೋಪುರವನ್ನು ನಿರ್ಮಿಸಲಾಗಿದೆ. ಈ ದೇವಾಲಯದ ವಿಶೇಷತೆಯೆಂದರೆ ಇಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಇಲಿಗಳು ಓಡಾಡುತ್ತವೆ. ಅವಕ್ಕೆ ಪೂಜೆ ಸಲ್ಲಿಸಿದ ನಂತರ ಭಕ್ತರು ಕಾಣಿಕೆಗಳನ್ನು ಅರ್ಪಿಸುತ್ತಾರೆ. ಇದಲ್ಲದೆ, ಕೆಲವು ಬಿಳಿ ಇಲಿಗಳು ಸಹ ಇಲ್ಲಿ ಕಂಡುಬರುತ್ತವೆ. ದೇವಾಲಯದಲ್ಲಿ ಈ ಇಲಿಗಳನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಇಲಿಗಳನ್ನು ಭಕ್ತರು ಕಾಬಾ ಎಂದೂ ಕರೆಯುತ್ತಾರೆ. ಮೇಲಾಗಿ.. ಈ ದೇವಾಲಯದಲ್ಲಿ ಇಲಿಗಳ ಬೆಳ್ಳಿಯ ವಿಗ್ರಹಗಳನ್ನು ಪೂಜಿಸಲಾಗುತ್ತದೆ.
Also Read: ಇದು ಜಗತ್ತಿನಲ್ಲೇ ಅತಿ ದೊಡ್ಡ ಕುಟುಂಬ! ಒಂದೇ ಮನೆಯಲ್ಲಿ 39 ಪತ್ನಿಯರು, 94 ಮಕ್ಕಳು, 36 ಮರಿಮಕ್ಕಳು!
ಕರಣಿ ಮಾತಾ ಮಂದಿರವನ್ನು ಬಿಕಾನೇರ್‌ನ ರಾಜ ಕುಟುಂಬದ ಕುಲದೇವಿ ಎಂದು ಕರೆಯಲಾಗುತ್ತದೆ. ಇಲ್ಲಿ ವಾಸಿಸುವ ಬಿಳಿ ಇಲಿಗಳನ್ನು ಮಾತೃ ವಾಹನ ಎಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಈ ದೇವಾಲಯವನ್ನು ಇಲಿ ದೇವಾಲಯ ಎಂದೂ ಕರೆಯುತ್ತಾರೆ. ಇಲ್ಲಿ 20 ಸಾವಿರಕ್ಕೂ ಹೆಚ್ಚು ಇಲಿಗಳು ಓಡಾಡುತ್ತವೆ. ಅದರಲ್ಲಿ ಕೆಲವು ಬಿಳಿ ಇಲಿಗಳೂ ಇವೆ. ಇಲ್ಲಿಗೆ ಬರುವ ಭಕ್ತನು ಸತ್ತರೆ ಅವನು ಕರ್ಣಿ ಮಾತಾ ದೇವಸ್ಥಾನದಲ್ಲಿ ಮರುಜನ್ಮ ಪಡೆಯುತ್ತಾನೆ ಎಂದು ನಂಬಲಾಗಿದೆ.
ರಾಜಸ್ಥಾನದ ಬಿಕಾನೇರ್ ನಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಈ ದೇವಾಲಯವನ್ನು ಇಲಿಗಳ ತಾಯಿ, ಇಲಿಗಳ ದೇವಾಲಯ, ಮೂಷಕ್ ದೇವಾಲಯ ಎಂದೂ ಕರೆಯುತ್ತಾರೆ. ಇಲ್ಲಿ ಇಲಿಗಳನ್ನು ಕಾಬಾ ಎಂದು ಕರೆಯಲಾಗುತ್ತದೆ. ಇಲಿ ದೇವಸ್ಥಾನದಲ್ಲಿ ಹೆಜ್ಜೆ ಹಾಕಬೇಕೆಂದರೆ ಜಾಗ್ರತೆ.. ಎಲ್ಲಿ ಹೆಜ್ಜೆ ಹಾಕಿದರೂ ಇಲಿಗಳೇ ಇಲಿಗಳು ಇಲ್ಲಿ.