ಆಶಾ ಕಾರ್ಯಕರ್ತೆಯರು ಧರಣಿ ನಿಲ್ಲಿಸುತ್ತಾರೆಯೇ ಇಲ್ಲ ಮುಂದುವರಿಸುತ್ತಾರೆಯೇ? ಗೊಂದಲ ಹುಟ್ಟಿಸಿದ ಸಿಎಂ ಮಾತು!

ಆಶಾ ಕಾರ್ಯಕರ್ತೆಯರು ಧರಣಿ ನಿಲ್ಲಿಸುತ್ತಾರೆಯೇ ಇಲ್ಲ ಮುಂದುವರಿಸುತ್ತಾರೆಯೇ? ಗೊಂದಲ ಹುಟ್ಟಿಸಿದ ಸಿಎಂ ಮಾತು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 10, 2025 | 8:19 PM

ಸರ್ಕಾರದ ಬೊಕ್ಕಸದಲ್ಲಿ ದುಡ್ಡೇ ಇಲ್ಲ, ಎಲ್ಲಿಂದ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ ₹ 10,000 ಎಲ್ಲಿಂದ ಕೊಡುತ್ತಾರೆ ಅಂತ ವಿರೋಧ ಪಕ್ಷಗಳು ಗೇಲಿ ಮಾಡುತ್ತಿವೆ ಅಂದಾಗ ಮುಖ್ಯಮಂತ್ರಿ ಸಮಂಜಸ ಸಮರ್ಥನೆ ನೀಡಲ್ಲ. ಅವರಿಗೆ ₹ 8,000 ಸಿಗುತ್ತಿದೆ, ಇನ್ಸೆನ್ಟಿವ್ ಮೂಲಕ ₹2,000 ಸಿಗುತ್ತದೆ, ಯಾರಿಗಾದರೂ ಇನ್ಸೆನ್ಟಿವ್ ಸಿಗದಿದ್ದರೆ ಅದನ್ನು ಅವರಿಗೆ ತಲುಪಿಸುವ ಕೆಲಸ ಸರ್ಕಾರದಿಂದ ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ.

ಮೈಸೂರು: ನಾಲ್ಕು ದಿನಗಳಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಜೊತೆ ತಾವು ಮಾತಾಡಿದ್ದು ಅವರು ಧರಣಿಯನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪ್ರತಿ ಆಶಾ ಕಾರ್ಯಕರ್ತೆಗೆ ಇನ್ಸೆನ್ಟಿವ್ ಸೇರಿ ತಿಂಗಳಿಗೆ ₹ 10,000 ನೀಡುವ ಭರವಸೆಯನ್ನು ನೀಡಲಾಗಿದೆ, ಅವರು ಅದಕ್ಕೆ ಒಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು. ಆದರೆ ಮೂಲಗಳ ಪ್ರಕಾರ ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲ ಮತ್ತು ಧರಣಿಯನ್ನು ಮುಂದುವರಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚಂಡಮಾರುತದಿಂದ ಕಾಪಾಡಲು ವೃದ್ಧೆಯನ್ನು ಬೆನ್ನಲ್ಲಿ ಹೊತ್ತು ನಡೆದ ಆಶಾ ಕಾರ್ಯಕರ್ತೆ