Video Viral: ಅಮ್ಮ ನನಗೆ ಬಾಯ್ ಫ್ರೆಂಡ್ ಇದ್ದಾನೆ ಎಂದ ಮಗಳಿಗೆ ಬಿತ್ತು ತಾಯಿಯಿಂದ ಧರ್ಮದೇಟು

ಬಾಯ್ ಫ್ರೆಂಡ್ ಇದ್ದಾನೆ ಎಂಬ ಕಾರಣಕ್ಕೆ ತಾಯಿ ತನ್ನ ಮಗಳಿಗೆ ತಂದೆ ಮತ್ತು ಸಹೋದರನ ಮುಂದೆಯೇ ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಒಬ್ಬ ತಾಯಿ ತನ್ನ ಮಗಳಿಗೆ ಹೀಗೆಲ್ಲ ಹೊಡೆಯುವುದು ಸರಿಯೇ, ಅಂತಹ ತಪ್ಪು ಏನು ಮಾಡಿದ್ದಾರೆ, ಪ್ರೀತಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾಳೆ ಅಷ್ಟೇ, ಅದನ್ನು ನೀವು ಅವಳ ಜತೆಗೆ ಕೂತು ಬಗೆಹರಿಸಿಕೊಳ್ಳಬಹುದು, ಈ ರೀತಿ ಮಾಡುವುದು ಸರಿ ಅಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Video Viral: ಅಮ್ಮ ನನಗೆ ಬಾಯ್ ಫ್ರೆಂಡ್ ಇದ್ದಾನೆ ಎಂದ ಮಗಳಿಗೆ ಬಿತ್ತು ತಾಯಿಯಿಂದ ಧರ್ಮದೇಟು
Follow us
ಅಕ್ಷಯ್​ ಪಲ್ಲಮಜಲು​​
|

Updated on: Apr 08, 2024 | 4:09 PM

ಪ್ರೀತ್ಸೋದ್‌ ತಪ್ಪಾ? ಪ್ರೀತಿ ಎಂದರೆ ಸಾಕು ಮನೆಯಲ್ಲಿ ಒಂದು ದೊಡ್ಡ ರಣರಂಗವೆ ಆಗುತ್ತದೆ.  ಪ್ರೀತಿ ಮಾಡುವುದಕ್ಕೆ ಕೆಲವೊಂದು ಮನೆಯಲ್ಲಿ ವಿರೋಧ ಇರುತ್ತದೆ, ಇನ್ನೂ ಕೆಲವು ಮನೆಗಳಲ್ಲಿ ಮಕ್ಕಳ ಖುಷಿ ನಮ್ಮ ಖುಷಿ ಎಂದು ಪ್ರೀತಿಗೆ ಒಪ್ಪಿಕೊಳ್ಳುತ್ತಾರೆ. ಇನ್ನೂ ಕೆಲವರು ನಮ್ಮ ಪ್ರೀತಿಯನ್ನು ಒಪ್ಪದಿದ್ದಾಗ ಮನೆ ಬಿಟ್ಟು ಹೋಗುತ್ತಾರೆ. ಇಂತಹ ಅನೇಕ ಘಟನೆಗಳು ನಡೆದಿರುವುದನ್ನು ನೀವು ಸೋಶಿಯಲ್​​ ಮೀಡಿಯಾದಲ್ಲಿ ನೋಡಿರಬಹುದು ಅಥವಾ ಕೇಳಿರಬಹುದು, ಮನೆಯಲ್ಲಿ ಪ್ರೀತಿ – ಪ್ರೇಮ ಎಂದರೆ ಸಾಕು ದೊಡ್ಡ ಯುದ್ಧವೇ ನಡೆದು ಹೋಗುತ್ತದೆ. ಇದೀಗ ಇಂತಹದೇ ಒಂದು ವೀಡಿಯೊ ಟ್ವಿಟರ್​​ನಲ್ಲಿ ವೈರಲ್ ಆಗಿದೆ. ಅಮ್ಮ ನನಗೆ ಬಾಯ್ ಫ್ರೆಂಡ್ ಇದ್ದಾನೆ ಎಂದು ಹೇಳಿದ ಮಗಳಿಗೆ ತಾಯಿ ಹೊಡೆದಿರುವ ವೀಡಿಯೊ ಎಲ್ಲ ಕಡೆ ವೈರಲ್​​ ಆಗಿದೆ, ಈ ಬಗ್ಗೆ ನೆಟ್ಟಿಗರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳು ಪ್ರೀತಿ ಮಾಡುವುದು ಸಹಜ ಆದರೆ ಅದನ್ನು ಸಮಾಧಾನದಿಂದ ಅವರಿಗೆ ತಿಳಿ ಹೇಳಬಹುದು. ಆದರೆ ಇಲ್ಲಿ ಆ ಹುಡುಗಿಗೆ ದೈಹಿವಾಗಿ ಮತ್ತು ಮಾನಸಿಕವಾಗಿ ನೋವು ನೀಡುವುದು ಸರಿಯಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ.

ಬಾಯ್ ಫ್ರೆಂಡ್ ಇದ್ದಾನೆ ಎಂಬ ಕಾರಣಕ್ಕೆ ತಾಯಿ ತನ್ನ ಮಗಳಿಗೆ ತಂದೆ ಮತ್ತು ಸಹೋದರನ ಮುಂದೆಯೇ ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಒಬ್ಬ ತಾಯಿ ತನ್ನ ಮಗಳಿಗೆ ಹೀಗೆಲ್ಲ ಹೊಡೆಯುವುದು ಸರಿಯೇ, ಅಂತಹ ತಪ್ಪು ಏನು ಮಾಡಿದ್ದಾರೆ, ಪ್ರೀತಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾಳೆ ಅಷ್ಟೇ, ಅದನ್ನು ನೀವು ಅವಳ ಜತೆಗೆ ಕೂತು ಬಗೆಹರಿಸಿಕೊಳ್ಳಬಹುದು, ಈ ರೀತಿ ಮಾಡುವುದು ಸರಿ ಅಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಮಗಳು ಅಷ್ಟು ಅಳುತ್ತಿದ್ದರು, ಅಮ್ಮ ಹೊಡಿಬೇಡ ಅಂದರು ತಾಯಿ ನಿಲ್ಲಿಸದೆ ಪದೇ ಪದೇ ಕಪಾಳಮೋಕ್ಷ ಮಾಡುತ್ತಿರುವುದನ್ನು ಈ ವೀಡಿಯೊದಲ್ಲಿ ನೋಡಬಹುದು. ಆದರೆ ಮಗಳ ಮಾತನ್ನು ತಾಯಿ ಕೇಳುವ ಪರಿಸ್ಥಿತಿಯಲ್ಲೇ ಇಲ್ಲ. ಎಷ್ಟು ಕೇಳಿಕೊಂಡರು ಬೀಡದೆ ತಾಯಿ ಕೊಣೆಯಿಂದ ಹೊರಗೆ ಎಳೆದುಕೊಂಡು ಹೋಗುತ್ತಾರೆ.

ಇದನ್ನೂ ಓದಿ: Viral Video: ‘ಪುಟ್ಟಿ, ನೀನು ಸ್ಪೈಡರ್​ಮ್ಯಾನ್​ನ​ ಮಗಳೇ? ವಂಡರ್ ವುಮನ್​ನ​ ಮಗಳೇ?’

ಈ ವಿಡಿಯೋ ಅಪ್ಲೋಡ್ ಆದ ನಂತರ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದಕ್ಕಾಗಿಯೇ ಹುಡುಗಿಯರು ತಮ್ಮ ಕುಟುಂಬದ ಸದಸ್ಯರೊಂದಿಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ, ಮಕ್ಕಳ ಹೇಳುವುದನ್ನು ಒಮ್ಮೆ ತಾಳ್ಮೆಯಿಂದ ಕೇಳಬೇಕು, ನಮ್ಮ ಭಾರತದಲ್ಲಿರುವ ಅನೇಕ ಪೋಷಕರಿಗೆ ಈ ವಿಚಾರದಲ್ಲಿ ತಾಳ್ಮೆ ಇರುವುದಿಲ್ಲ. ಒಂದು ಬಾರಿ ಅವಳು ಯಾರನ್ನೂ ಪ್ರೀತಿ ಮಾಡುತ್ತಿದ್ದಾಳೆ. ಯಾಕೆ? ಏನು? ಎಂಬುದನ್ನು ವಿಚಾರ ಮಾಡದೆ ಈ ರೀತಿ ವರ್ತನೆ ಮಾಡುವುದು ಸರಿಯಲ್ಲ ಎಂದು ಟ್ವಿಟರ್​​ನಲ್ಲಿ ಬಳಕೆದಾರರೊಬ್ಬರು ಹೇಳಿದ್ದಾರೆ.

‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!