Viral Video: ‘ಪುಟ್ಟಿ, ನೀನು ಸ್ಪೈಡರ್​ಮ್ಯಾನ್​ನ​ ಮಗಳೇ? ವಂಡರ್ ವುಮನ್​ನ​ ಮಗಳೇ?’

Wonder Girl : ಮಕ್ಕಳ ಮನೋದೈಹಿಕ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವುದು ಪೋಷಕರ ಕರ್ತವ್ಯ. ಇನ್ನೊಬ್ಬರ ಮಕ್ಕಳಂತೆ ನಮ್ಮ ಮಕ್ಕಳು ಯಾಕಿಲ್ಲ ಎಂದು ಕೊರಗುವುದು ಶುದ್ಧ ಮೂರ್ಖತನ. ನೀವೇನಂತೀರಿ ಈ ವಿಡಿಯೋ ನೋಡಿ?

Viral Video: 'ಪುಟ್ಟಿ, ನೀನು ಸ್ಪೈಡರ್​ಮ್ಯಾನ್​ನ​ ಮಗಳೇ? ವಂಡರ್ ವುಮನ್​ನ​ ಮಗಳೇ?'
ಆಧಾರವಿಲ್ಲದೆ ಗೋಡೆ ಏರುತ್ತಿರುವ ಬಾಲಕಿ
Follow us
|

Updated on:Jun 27, 2023 | 12:50 PM

Spider-Girl: ಸಾಮಾನ್ಯ ಮಕ್ಕಳು ಹೀಗೆ ವರ್ತಿಸುವುದಿಲ್ಲ. ಇದು ಮೂರ್ಖತನದ ಪರಮಾವಧಿ. ಇವರ ತಂದೆತಾಯಂದಿರಿಗೆ ಬುದ್ದಿ ಇಲ್ಲ, ಹೀಗೆ ವಿಡಿಯೋ ಕೂಡ ಮಾಡಿ ಹಾಕುತ್ತಾರೆ. ಈ ಮಗುವನ್ನು ಹೀಗೆ ಬಿಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ. ಮನೆಯಲ್ಲಿಯೇ ಹೀಗಾದರೆ ನಾಳೆ ಶಾಲೆಯಲ್ಲಿ ಏನು ಗತಿ? ಈಕೆಗಾಗಿಯೇ ಪ್ರತ್ಯೇಕ ಶಿಕ್ಷಕರನ್ನು (Teacher) ನೇಮಿಸಬೇಕಾಗುತ್ತದೆ. ದೊಡ್ಡವಳಾದ ಮೇಲೆ ಹೀಗೆ ಈಕೆ ಕಟ್ಟಡಗಳನ್ನು ಏರುತ್ತ ಹೊರಟರೆ ಏನು ಗತಿ? ಅಂತೆಲ್ಲ ನೆಟ್ಟಿಗರು ಆತಂಕ, ಅಚ್ಚರಿ, ಟೀಕೆ ಮತ್ತು ಪ್ರಶಂಸೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ನೋಡಿ ಈ ಕೆಳಗಿನ ವಿಡಿಯೋ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Technology • Gadget • Tools (@rising.teching)

ಇದನ್ನು ನೋಡುತ್ತಿದ್ದರೆ ನನಗೆ ನಿಜಕ್ಕೂ ಭಯವಾಗುತ್ತಿದೆ ಎನ್ನುತ್ತಿದ್ದಾರೆ ಅನೇಕರು. ಆದರೆ ಇದರಲ್ಲಿ ಭಯ ಪಡುವಂಥದ್ದೇನಿದೆ? ಇದೂ ಒಂದು ಸಾಹಸ ಕೌಶಲ, ಇಂಥ ಮಕ್ಕಳನ್ನು ಶಿಸ್ತಿನಿಂದ ಮತ್ತು ವಿಶೇಷ ಕಾಳಜಿಯಿಂದ ಅಭ್ಯಾಸಕ್ಕೆ ಒಳಪಡಿಸಿದರೆ ಸಾಹಸ ಕಲೆಯಲ್ಲಿ ಪರಿಣತಿ ಹೊಂದಬಹುದು. ಪ್ರತೀ ಮನುಷ್ಯನೂ ವಿಶಿಷ್ಟ. ಒಬ್ಬೊಬ್ಬರಲ್ಲಿ ಒಂದೊಂದು ಪ್ರತಿಭೆ ಇರುತ್ತದೆ, ಅದನ್ನು ಸಾಣೆ ಹಿಡಿಯಬೇಕು ಎನ್ನುವುದನ್ನು ನಾವ್ಯಾಕೆ ಮರೆಯುತ್ತೇವೆ? ಏಕೆಂದರೆ ಅಕ್ಕಪಕ್ಕದ ಮಕ್ಕಳನ್ನು ನೋಡಿ, ಅವುಗಳಂತೆ ನಮ್ಮ ಮಕ್ಕಳು ಯಾಕಿಲ್ಲ ಎಂದು ಯೋಚಿಸುತ್ತೇವೆ. ಇದೇ ಅಲ್ಲವೆ ನಾವು ಮಾಡುವ ತಪ್ಪು?

ಇದನ್ನೂ ಓದಿ : Viral Video: ”ಇಡೀ ಜಗತ್ತಿನಲ್ಲಿಯೇ ಇದು ಮೊದಲು, ಫೈವ್​ ಸ್ಟಾರ್​ ಹೋಟೆಲ್​ನಲ್ಲಿಯೂ ಇದು ಸಿಗದು!”

ನಾನು ಚಿಕ್ಕವಳಾಗಿದ್ದಾಗ ಹೀಗೆಯೇ ಮಾಡುತ್ತಿದ್ದೆ ಎಂದು ಕೆಲವರು ಹೇಳಿಕೊಂಡಿದ್ದಾಳೆ. Exorcista! ಎಂದಿದ್ಧಾರೆ ಇನ್ನೊಬ್ಬರು. Exorcist ಇದು ಹಾರರ್ ಸಿನೆಮಾ. (ಇದು ಎಲ್ಲ ಪ್ರೇಕ್ಷಕರಿಗೂ ರೂಪಿಸಿದ ಸಿನೆಮಾ ಅಲ್ಲ ಎಂದು ನಿಷೇಧಿಸಲಾಯಿತು) ವಂಡರ್​ ವುಮನ್ ಸಿನೆಮಾದ ನಾಯಕಿಯನ್ನು ನೆನಪಿಸಿದ್ಧಾರೆ ಅನೇಕರು. ಯಾರಲ್ಲಿ ಯಾವ ಸಾಮರ್ಥ್ಯ ಅಡಗಿರುತ್ತದೆ ಎಂದು ಯಾರಿಗೆ ಗೊತ್ತು? ಪೋಷಕರು ಮಕ್ಕಳನ್ನು ಗಮನಿಸುತ್ತ ಅವರೊಳಗಿನ ಪ್ರತಿಭೆಗೆ ಎರಕ ಹೊಯ್ಯಬೇಕು.

ಇದನ್ನೂ ಓದಿ : Viral: ಸೇಕ್ರೆಡ್​ ಫೈರ್; 16 ವರ್ಷಗಳ ”ದಾಸವಾಳ ಪುಷ್ಪಾ” ಕನಸು ನನಸಾದದ್ದು ಹೀಗೆ

ಹೆಣ್ಣಾಗಲಿ ಗಂಡಾಗಲಿ ಚಿಕ್ಕಂದಿನಲ್ಲಿ ಚಕ್ಕಂಬಕ್ಕಳ ಹಾಕಿ ಕೈಯಲ್ಲಿ ಪುಸ್ತಕ ಹಿಡಿದು ನಾಲ್ಕು ಗೋಡೆಯೊಳಗೇ  ಬಂಧಿಯಾಗಿರಬೇಕು. ಕೇಳಿದ್ದಕ್ಕೆಲ್ಲ ಪಟಪಟನೆ ಉತ್ತರ ಕೊಡಬೇಕು. ಎಲ್ಲರೊಂದಿಗೆ ನಗುತ್ತಿರಬೇಕು. ಇಂತಿಂಥ ಕಲೆ, ಕೆಲಸಗಳಲ್ಲಿ ಮಾತ್ರ ತೊಡಗಿಕೊಳ್ಳಬೇಕು ಅಂತೆಲ್ಲ ನಿರೀಕ್ಷಿಸುವುದು ಯಾಕೆ? ನಾವು ಮಾಡದ್ದನ್ನು ಅವಳೋ ಅಥವಾ ಅವನೋ ಮಾಡುತ್ತಿದ್ದಾಳೆ/ನೆ ಎಂದರೆ ಖುಷಿಯಿಂದ ಪ್ರೋತ್ಸಾಹಿಸಬೇಕಲ್ಲವೆ? ವಿಶೇಷ ಸಾಮರ್ಥ್ಯವನ್ನು ಗೌರವಿಸಬೇಕಲ್ಲವೆ?

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:43 pm, Tue, 27 June 23

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ