Viral Video: ‘ಇಡೀ ಜಗತ್ತಿನಲ್ಲಿಯೇ ಇದು ಮೊದಲು, ಫೈವ್​ ಸ್ಟಾರ್​ ಹೋಟೆಲ್​ನಲ್ಲಿಯೂ ಇದು ಸಿಗದು!’

Tea: ಈ ಐಎಎಸ್​ ಚಾಯ್​ವಾಲಾನನ್ನು ಜೀವಂತವಾಗಿ ಹಿಡಿಯಬೇಕಿದೆ ಎಂಬ ಟ್ವೀಟ್​ಗೆ, ಒಂದು ದಿನ ರಜೆ ಹಾಕಿ ಇವನನ್ನು ಹುಡುಕುತ್ತೇನೆ. ಪೇಟೆಂಟ್​ಗೆ ಇವನು ಅರ್ಜಿ ಸಲ್ಲಸಬಹುದು. ಇನ್ನೂ ಜೈಲಿಗೆ ಹಾಕಿಲ್ಲವೇ? ಅಂತೆಲ್ಲ ಪ್ರತಿಕ್ರಿಯೆಗಳ ಕುದಿತ!

Viral Video: 'ಇಡೀ ಜಗತ್ತಿನಲ್ಲಿಯೇ ಇದು ಮೊದಲು, ಫೈವ್​ ಸ್ಟಾರ್​ ಹೋಟೆಲ್​ನಲ್ಲಿಯೂ ಇದು ಸಿಗದು!'
ಹಣ್ಣುಗಳನ್ನು ಹಾಕಿ ಚಹಾ ಮಾಡುತ್ತಿರುವ ಐಎಎಸ್​ ಚಾಯ್​ವಾಲಾ
Follow us
|

Updated on:Jun 27, 2023 | 11:43 AM

Tea: ಏಲಕ್ಕಿ ಚಹಾ, ಮಸಾಲಾ ಚಹಾ, ನಿಂಬೆಹುಲ್ಲಿನ ಚಹಾ, ವೀಳ್ಯದೆಲೆ ಚಹಾ, ಪುದೀನಾ ಚಹಾ, ನಿಂಬೆ ಚಹಾ, ತುಳಸೀ ಚಹಾ, ದಾಸವಾಳದ ಚಹಾ, ಗುಲಾಬಿ ಚಹಾ… ಹೀಗೆ ಮಸಾಲೆ, ಎಲೆ, ಹೂಪಕಳೆಗಳನ್ನು ಹಾಕಿ ಮಾಡಿದ ಚಹಾ ಕೇಳಿಯೂ ಮತ್ತು ಕುಡಿದೂ ಗೊತ್ತು. ಆದರೆ ಹಣ್ಣಿನ ಚಹಾ!? ಹಿಂದೊಮ್ಮೆ ಬೀದಿಬದಿ ವ್ಯಾಪಾರಿ ಇಂಥದೇ ಒಂದು ಪ್ರಯೋಗ ಮಾಡಿದ್ದ. ಆದರೆ ಇದೀಗ ವೈರಲ್ ಆಗುತ್ತಿರುವ ಈ ಚಹಾವಾಲಾ ಮಾತ್ರ ಹೈಟೆಕ್​. ಯಾಕೆ ಹೈಟೆಕ್​ ಎಂದು ಗುಂಗಿಗೆ ಬಿದ್ದಿರಾ? ನೋಡಿ ಈ ಕೆಳಗಿನ ವಿಡಿಯೋ.

ಇಡೀ ದೇಶ ಅಲ್ಲ ಜಗತ್ತಿನಲ್ಲಿಯೇ ಇಂಥ ಅದ್ಭುತವಾದ ಫ್ರೂಟ್ಸ್​ ಚಹಾ ನಿಮಗೆ ದೊರಕದು. ಈತನಕ ಯಾರೂ ಇಂಥ ಪ್ರಯೋಗ ಮಾಡಿಲ್ಲ ಎನ್ನುತ್ತ ಬಾಳೆಹಣ್ಣು, ಸಪೋಟ ಹಣ್ಣನ್ನು ಕುದಿಯುವ ಚಹಾದಲ್ಲಿ ಹಾಕಿ ಕಿವುಚುತ್ತಾನೆ ಮತ್ತದನ್ನು ಕುದಿಸುತ್ತಾನೆ. ಒಂದು ಸಣ್ಣಕಪ್ಪಿನಲ್ಲಿ ಅದನ್ನು ಸೋಸಿ ಬಾಳೆಹಣ್ಣಿನ ಸಿಪ್ಪೆಯೊಳಗಿಟ್ಟು ಕೊಡುತ್ತಾನೆ. ಗೊತ್ತಾಯಿತಲ್ಲ ಅದರ ಬೆಲೆ? ಕೇವಲ ರೂ. 200. ಇದು ಎಕ್ಸ್​ಕ್ಲ್ಯೂಸಿವ್​, ಫೈವ್​ ಸ್ಟಾರ್ ಹೋಟೆಲ್​ನಲ್ಲಿಯೂ ಇದು ಲಭ್ಯವಿಲ್ಲ ಎಂದು ಹೇಳುತ್ತಾನೆ. ಗ್ರಾಹಕನೊಬ್ಬ, ಈ ತನಕ ನನ್ನ ಜೀವನದಲ್ಲಿ ಇಷ್ಟು ತುಟ್ಟಿ ಚಹಾ ಕುಡಿದೇ ಇಲ್ಲ ಎನ್ನುತ್ತಾ ಹಣ ಕೊಡುತ್ತಾನೆ.

ಇದನ್ನೂ ಓದಿ : Viral Video: ಬನಾನಾ ಪಾನೀಪುರಿ; ಆಗಲೇ ಕಿವುಚಿದ ಬಾಳೆಹಣ್ಣಿನಂತಾಗೋಯ್ತಾ ನಿಮ್ಮ ಮುಖ?

ಇದನ್ನು ಕುಡಿದ ಮೇಲೆ ಜೀವಂತ ಉಳಿಯುತ್ತಾರಾ? ಆ ಬಾಳೆಹಣ್ಣನ್ನು ಅವನ ಮೂಗಿನಲ್ಲಿ ತುರುಕಬೇಕು. ಇವನು ಪೇಟೆಂಟ್​ ಪಡೆಯಲು ಅರ್ಜಿ ಸಲ್ಲಿಸಬಹುದು. ನಾನು ಒಂದು ರಜೆ ಹಾಕಿಯಾದರೂ ಇವನನ್ನು ಹುಡುಕೇ ಹುಕುತ್ತೇನೆ. ಐಎಎಸ್​ವಾಲಾಗೆ ಬುದ್ಧಿಯೇ ಇಲ್ಲ, ಬಾಳೆಹಣ್ಣನ್ನು ಕತ್ತರಿಸಬಹುದಿತ್ತು. ಈ ಚಹಾ ಅನ್ನು ನನ್ನ ಕಣ್ಣಲ್ಲಿ ಸುರಿಯಿರಿ… ಅಂತೆಲ್ಲ ನೆಟ್ಟಿಗರು ಸಹನೆ ಕಳೆದುಕೊಂಡು ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ : Viral: ಲುಂಗೀಧಾರಿ ಬೇರ್​ ಗ್ರಿಲ್ಸ್​; ‘ಜಂಗಲ್​ ಸರ್ವೈವರ್‘ನ ಮುಂದಿನ ಅತಿಥಿ ಯಾರು?

ಚಹಾಪ್ರಿಯ ದೋಸ್ತರನ್ನು ಅನೇಕರು ಈ ವಿಡಿಯೋಗೆ ಟ್ಯಾಗ್​ ಮಾಡಿ ಕಾಲೆಳೆಯುತ್ತಿದ್ದಾರೆ. 200 ಅಲ್ಲ 2 ರೂಪಾಯಿ ಕೂಡ ಇವನಿಗೆ ಕೊಡಬಾರದು. ಇಡೀ ಜಗತ್ತಿನ ಮಂದಿಯೆಲ್ಲ ಇವನಿಗೆ ಪಾಠ ಕಲಿಸಬೇಕು, ಹುಚ್ಚು ಹಿಡಿದಿದೆ ಇವನಿಗೆ ಎಂದು ಆಕ್ರೋಶದಿಂದ ಪ್ರತಿಕ್ರಿಯಿಸಿದ್ದಾರೆ ಕೆಲಜನ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:33 am, Tue, 27 June 23

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ