Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಲುಂಗೀಧಾರಿ ಬೇರ್​ ಗ್ರಿಲ್ಸ್​; ‘ಜಂಗಲ್​ ಸರ್ವೈವರ್‘ನ ಮುಂದಿನ ಅತಿಥಿ ಯಾರು?

Jungle Survival : ನೀಲ್ ಆಲಿವರ್, ಅನ್ನೇಕಾ ರೈಸ್​, ರಿಚರ್ಡ್​ ಬ್ರ್ಯಾನ್​ಸನ್​, ವಿರಾಟ ಕೊಹ್ಲಿ, ಅಕ್ಷಯ್​ ಕುಮಾರ್, ವಿಕ್ಕಿ ಕೌಶಲ್​, ರಣವೀರ್​ ಸಿಂಗ್​, ತಲೈವಾ ರಜನೀಕಾಂತ... ಮುಂತಾದವರ ಹೆಸರುಗಳ ಹೊಳೆಯನ್ನೇ ಹರಿಸಿದ್ದಾರೆ ನೆಟ್ಟಿಗರು.

Viral: ಲುಂಗೀಧಾರಿ ಬೇರ್​ ಗ್ರಿಲ್ಸ್​; ‘ಜಂಗಲ್​ ಸರ್ವೈವರ್‘ನ ಮುಂದಿನ ಅತಿಥಿ ಯಾರು?
ಜಂಗಲ್​ ಸರ್ವೈವರ್ ರಿಯಾಲಿಟಿ ಷೋನ ನಿರೂಪಕ, ಸಾಹಸಿ ಬೇರ್ ಗ್ರಿಲ್ಸ್​
Follow us
ಶ್ರೀದೇವಿ ಕಳಸದ
|

Updated on: Jun 26, 2023 | 12:44 PM

Bear Grylls : ಜಂಗಲ್​ ಸರ್ವೈವಲ್​ (Jungle Survival) ರಿಯಾಲಿಟಿ ಷೋನ ಖ್ಯಾತ ನಿರೂಪಕ ಮತ್ತು ಸಾಹಸಿಗ ಬೇರ್ ಗ್ರಿಲ್ಸ್​ ಲುಂಗಿ ಧರಿಸಿದ ತಮ್ಮ ಫೋಟೋ ಟ್ವೀಟ್ ಮಾಡಿ ‘ಮ್ಯಾನ್​ ವರ್ಸಸ್​ ವೈಲ್ಡ್​’ (Man v/s Wild)ನ  ಮುಂದಿನ ಎಪಿಸೋಡ್​ಗೆ ಯಾರು ಅತಿಥಿ ಎಂದು ಕೇಳಿದ್ದಾರೆ. ಈ ಟ್ವೀಟ್​ ವೀಕ್ಷಕರನ್ನು ಕುತೂಹಲಕ್ಕೆ ಕೆಡವಿದೆ. ಸ್ಕಾಟಿಷ್​ ಹೈಲ್ಯಾಂಡ್ಸ್​ನ (Scottish Highlands) ನದೀತಟದಲ್ಲಿ ಈ ಫೋಟೋ ತೆಗೆಯಲಾಗಿದೆ. ಈ ಟ್ವೀಟ್​ಗೆ ನೆಟ್ಟಗರು ಉತ್ಸಾಹದಿಂದ ಪ್ರತಿಕ್ರಿಯಿಸಿದ್ದಾರೆ.

ಶರ್ಟ್​ ಕೆಳಗೆ ಧರಿಸಿದ ಉಡುಪು ಎಂಥದು ಇದು ಎಂದು ಅನೇಕರು ಕೇಳಿದ್ದಾರೆ. ಇದು ಭಾರತೀಯರು ಧರಿಸುವ ಲುಂಗಿ ಎಂದು ಹಲವರು ಹೇಳಿದ್ದಾರೆ. ಬಾಂಗ್ಲಾದೇಶದ ಸಾಂಪ್ರದಾಯಿಕ ಉಡುಪು ಇದು ಎಂದಿದ್ದಾರೆ ಮತ್ತೊಂದಿಷ್ಟು ಜನ. ಓಹ್ ಲುಂಗಿಡ್ಯಾನ್ಸ್​ ಸ್ಟೈಲ್​! ಎಂದು ಅಚ್ಚರಿಪಟ್ಟಿದ್ಧಾರೆ ಕೆಲವರು. ಲುಂಗೀಮ್ಯಾನ್​, ಎಸಿ ಪ್ಯಾಂಟ್, ಗಾಳಿ ಬೀಸಿದರೆ ಅಷ್ಟೇ, ಹುಷಾರಾಗಿರಿ​ ಎಂದು ಕಾಲೆಳೆದಿದ್ದಾರೆ ಇನ್ನೂ ಒಂದಿಷ್ಟು ಜನ.

ಇದನ್ನೂ ಓದಿ : Viral Video: ಎಲ್ಲಿಯ ಉಡುಪಿ ಎಲ್ಲಿಯ ಚಿಕ್ಕಬಳ್ಳಾಪುರ; ಇಲ್ಲಿದೆ ಗಣೇಶ್ ಮತ್ತು ಶ್ರೀವಿದ್ಯಾ ಕಲಾಹೂರಣ

ನೀಲ್ ಆಲಿವರ್, ಅನ್ನೇಕಾ ರೈಸ್​, ಇವಾನ್​ ಮ್ಯಾಕ್​ಗ್ರಿಗೋರ್, ರಿಚರ್ಡ್​ ಬ್ರ್ಯಾನ್​ಸನ್​, ವಿರಾಟ ಕೊಹ್ಲಿ, ಅಕ್ಷಯ್​ ಕುಮಾರ್, ವಿಕ್ಕಿ ಕೌಶಲ್​, ರಣವೀರ್​ ಸಿಂಗ್​, ತಲೈವಾ ರಜನೀಕಾಂತ… ಹೀಗೆ ಪ್ರಸಿದ್ಧ ವ್ಯಕ್ತಿಗಳ ಹೆಸರುಗಳ ಪಟ್ಟಿಯನ್ನೇ ಟ್ವೀಟಿಗರು ನೀಡಿದ್ದಾರೆ. ಒಟ್ಟಿನಲ್ಲಿ ಊಹಾಪೋಹಗಳ ನಡುವೆ ಈ ಟ್ವೀಟ್ ಶರವೇಗದಲ್ಲಿ ವೈರಲ್ ಆಗುತ್ತಿದೆ. ಕೆಲ ಮೂಲಗಳ ಪ್ರಕಾರ, ಪ್ರಿಯಾಂಕಾ ಛೋಪ್ರಾ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ನಿಮ್ಮ ಊಹೆಯಂತೆ ಯಾವ ಸೆಲೆಬ್ರಿಟಿ ಈ ಷೋನಲ್ಲಿ ಭಾಗವಹಿಸಲಿದ್ದಾರೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ
ಹನಿ ಟ್ರ್ಯಾಪ್ ಪ್ರಕರಣ ವೈಯಕ್ತಿಕವಾದದ್ದು, ಕಾಮೆಂಟ್ ಮಾಡಲಾರೆ: ರಾಜು ಕಾಗೆ
ಹನಿ ಟ್ರ್ಯಾಪ್ ಪ್ರಕರಣ ವೈಯಕ್ತಿಕವಾದದ್ದು, ಕಾಮೆಂಟ್ ಮಾಡಲಾರೆ: ರಾಜು ಕಾಗೆ