Viral Video: ಎಲ್ಲಿಯ ಉಡುಪಿ ಎಲ್ಲಿಯ ಚಿಕ್ಕಬಳ್ಳಾಪುರ; ಇಲ್ಲಿದೆ ಗಣೇಶ್ ಮತ್ತು ಶ್ರೀವಿದ್ಯಾ ಕಲಾಹೂರಣ

Kannada Comedy: ಬದುಕಿನ ಏಕತಾನತೆಯನ್ನು ಮುರಿಯಲು ಸೃಜನಾತ್ಮಕವಾಗಿ ಹೇಗೆ ತೊಡಗಿಕೊಳ್ಳಬೇಕು ಎನ್ನುವುದಕ್ಕೆ ಇವರು ಉತ್ತಮ ಉದಾಹರಣೆ. ಸಾಫ್ಟ್​ವೇರ್​ ಎಂಜನಿಯರುಗಳಾದ ಇವರು ಜೊತೆಯಾಗಿದ್ದು ಹೇಗೆ ಎನ್ನುವ ಕಥೆ ಇಲ್ಲಿದೆ.

Viral Video: ಎಲ್ಲಿಯ ಉಡುಪಿ ಎಲ್ಲಿಯ ಚಿಕ್ಕಬಳ್ಳಾಪುರ; ಇಲ್ಲಿದೆ ಗಣೇಶ್ ಮತ್ತು ಶ್ರೀವಿದ್ಯಾ ಕಲಾಹೂರಣ
ಕಲಾವಿದರಾದ ಗಣೇಶ ಕಾರಂತ ಮತ್ತು ಶ್ರೀವಿದ್ಯಾ ಸುರೇಶ
Follow us
ಶ್ರೀದೇವಿ ಕಳಸದ
|

Updated on:Jun 24, 2023 | 4:01 PM

Tere Hawale : ಕೊರೊನಾ ಸಮಯದಲ್ಲಿ ಏನು ಉಸಿರಾಡಿದರೂ ಸಾಮಾಜಿಕ ಜಾಲತಾಣಗಳ ಮೂಲಕವೇ. ನೋವು ಸಾವುಗಳ ಮಧ್ಯೆ ನಿತ್ಯಜೀವನ ಸಾಗಬೇಕೆಂದರೆ ಮನರಂಜನೆಯೂ ಬೇಕಿತ್ತು. ಈ ಸಂದರ್ಭದಲ್ಲಿಯೇ ಸಾವಿರಾರು ಮನರಂಜನಾಕಾರರು ಹುಟ್ಟಿಕೊಂಡರೇನೋ ನಿಜ. ಆದರೆ ಬೆರಳೆಣಿಕೆಯಷ್ಟು ರೀಲಿಗರು ಮಾತ್ರ ಇಂದಿಗೂ ತಮ್ಮ ಸೃಜನಶೀಲತೆಯ ಒರತೆಯನ್ನು ಬತ್ತದಂತೆ ಕಾಪಾಡಿಕೊಳ್ಳುತ್ತಿದ್ದಾರೆ. ಇಂಥವರಲ್ಲಿ ಗಣೇಶ ಕಾರಂತ ಮತ್ತು ಶ್ರೀವಿದ್ಯಾ ಸುರೇಶ ಜೋಡಿ (Ganesh Karanth and Shreevidya Suresh) ಗಮನಾರ್ಹರು. ನಮ್ಮನಿಮ್ಮ ಮನೆಯ ಸಂಗತಿ ಇವರಿಗೆ ಹೇಗೆ ತಲುಪಿತು? ಎನ್ನುವಷ್ಟು ಸಹಜವಾದ ಕಂಟೆಂಟ್,  ಮತ್ತೆಮತ್ತೆ ಆ ರೀಲ್ ನೋಡಬೇಕೆನ್ನಿಸುವಂಥ ನವಿರು ಹಾಸ್ಯದ ಲೇಪ. ಗಾಯಕರೂ ಆಗಿರುವ ಗಣೇಶ ಇತ್ತೀಚೆಗೆ ಹಾಡಿದ ಈ ಹಾಡನ್ನು ನೀವು ಕೇಳಲೇಬೇಕು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Ganesh Karanth ಗಣೇಶ್ ಕಾರಂತ್ (@ganeshkaranth)

ಗಣೇಶ್ ಹಾಡಿರುವ ಈ ಸುಶ್ರಾವ್ಯ ಗೀತೆ ‘ಲಾಲ್​ ಸಿಂಗ್​ ಛಡ್ಡಾ’ (Lal Singh Chadda) ಸಿನೆಮಾದ್ದು. ಗಣೇಶ್ ಮತ್ತು ಶ್ರೀವಿದ್ಯಾ ತಮ್ಮಲ್ಲಿರುವ ಸಮಾನ ಆಸಕ್ತಿಗಳನ್ನು ಪರಸ್ಪರ ಪೋಷಿಸಿಕೊಳ್ಳುತ್ತ ಜೀವನವನ್ನು ರಸವತ್ತಾಗಿಸಿಕೊಳ್ಳುತ್ತಿದ್ದಾರೆ. ಇವರ ಅನ್ಯೋನ್ನತೆಯನ್ನು ಕಂಡ ನೆಟ್ಟಿಗರು ಸಾಕಷ್ಟು ಸಲ ಇವರನ್ನು, ನಿಮ್ಮಿಬ್ಬರದು ಲವ್​ ಮ್ಯಾರೇಜ್​? ಎಂದು ಕೇಳಿರುವುದುಂಟು. ಅದಕ್ಕೆ ಗಣೇಶ್​, ‘To be honest we two were super tensed during our marriage. ಭೇಟಿ ಆಗುವ ತನಕ ನಾನು ಯಾರು ಎಂದೇ ಅವಳಿಗೆ ಗೊತ್ತಿರಲಿಲ್ಲ. ನನಗೂ ಕೂಡ ಅವಳು ಒಬ್ಬ ಅಪರಿಚಿತ ವ್ಯಕ್ತಿ. Mutual friends ಅಂತೂ ಇಲ್ಲವೇ ಇಲ್ಲ. ಬರೀ shaadi.com profile ನೋಡಿ ಏನೋ ಒಂದು blind belief ಇಂದ ಮದುವೆಯ ಮಾತುಕತೆ ಶುರುವಾಗಿ ಕೊನೆಗೆ ಮದುವೆಯೂ ನಡೆದು ಹೋಯಿತು.”

ಇದನ್ನೂ ಓದಿ : Viral Video: 6ಮಿಲಿಯನ್​ ಮಂದಿ ಕಣ್ಣಿಗೆ ಬಿದ್ದ ಈ ಬೆಣಚುಬೆಕ್ಕು; ಜಸ್ಟಿನ್​ ಬತ್ತಳಿಕೆಯಲ್ಲಿ ಗಾಂಧೀಜಿ, ರಮಣ ಮಹರ್ಷಿ ಇನ್ನೂ ಯಾರೆಲ್ಲ?

”ಎಲ್ಲಿಯ ಚಿಕ್ಕಬಳ್ಳಾಪುರ ಎಲ್ಲಿಯ ಉಡುಪಿ. ಆಹಾರ ಪದ್ದತಿ ಒಂದೇ ಆದರೂ ಇಬ್ಬರ ಆಚಾರ ವಿಚಾರಗಳು ಬೇರೆ. ಅವಳಿಗೆ ದೇವರೇ ಪ್ರಪಂಚ. ನನಗೆ hmmm ಬೇಡ ಬಿಡಿ. ಇಬ್ಬರ ಮಾತೃಭಾಷೆ ಕನ್ನಡ ಆಗಿದ್ದರೂ ಅವರ ಮನೆಯಲ್ಲಿ ಮಾತಾಡೋದು ಬೆಂಗಳೂರು ಕನ್ನಡ, ನಮ್ಮ ಮನೆಯಲ್ಲಿ ಅಪ್ಪಟ ಕರಾವಳಿ ಕನ್ನಡ. ನಾನು ಮುಂಗೋಪಿ ಆದರೆ ಅವಳು oh sorry ಅವಳೂ ಮುಂಗೋಪಿ.” ಎಂದಿದ್ದಾರೆ. ಈ ಮುಂಗೋಪವನ್ನೇ ಕೇಂದ್ರೀಕರಿಸಿ ಮಾಡಿದ ರೀಲ್​ ಈ ಕೆಳಗಿದೆ.

ಗಣೇಶ ಆಗಾಗ ‘ಬಿಯರ್ಡ್​ ಬಾಲಕ’ನಾಗಿ ರೀಲುಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅಷ್ಟೇ ಯಾಕೆ ತನ್ನ ಅಮ್ಮನನ್ನೂ ರೀಲುಗಳಲ್ಲಿ ಒಳಗೊಳ್ಳುವಂತೆ ಮಾಡುತ್ತಿರುತ್ತಾರೆ. ತಮ್ಮನ್ನು ತಾವು ಹೀಗೆ ಸೃಜನಾತ್ಮಕವಾಗಿ ಇರಿಸಿಕೊಳ್ಳುವ ಹಾದಿಯನ್ನು ಕಂಡುಕೊಂಡರೆ ಬಹುಶಃ ಬದುಕಿನ ಎಷ್ಟೋ ಸಮಸ್ಯೆಗಳು ಮಾಯವಾಗಿರುತ್ತವೆ! ಏನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:49 pm, Sat, 24 June 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ