Viral Video: ಕೇಳ್ರಪ್ಪೋ, ಮತ್ತೊಂದು ವಿಚಿತ್ರ ತಿನಿಸು ‘ದಹೀ ಕುರ್ಕುರೆ ಚಾಟ್’​ ರೂ. 40ಗೆ

Street Food : ಕುರ್ಕುರೆಯಲ್ಲಿ ಪ್ಲಾಸ್ಟಿಕ್​ ಇರುತ್ತದೆ, ಅದನ್ನು ತಿನ್ನಬೇಡಿ ಎಂದು ಮಕ್ಕಳಿಗೆ ಸುಟ್ಟು ತೋರಿಸಿದ್ದು ನೆನಪಿರಬಹುದು. ಆದರೆ ಈ ಬೀದಿವ್ಯಾಪಾರಿ ಅದೇ ಕುರ್ಕುರೆಗೆ ಮೊಸರು ಹಾಕಿ ಚಾಟ್​ ತಯಾರಿಸಿದ್ದಾರೆ. ನೋಡಿ ವಿಡಿಯೋ.

Viral Video: ಕೇಳ್ರಪ್ಪೋ, ಮತ್ತೊಂದು ವಿಚಿತ್ರ ತಿನಿಸು 'ದಹೀ ಕುರ್ಕುರೆ ಚಾಟ್'​ ರೂ. 40ಗೆ
ನಾಗಪುರದ ಬೀದಿವ್ಯಾಪಾರಿ ತಯಾರಿಸಿದ ದಹೀ ಕುರ್ಕುರೆ ಚಾಟ್
Follow us
ಶ್ರೀದೇವಿ ಕಳಸದ
|

Updated on:Jun 24, 2023 | 2:34 PM

Indian Street Chat : ಈ ಚಾಟ್​ ತಿನ್ನೋದಕ್ಕೆ ನೀವು ನೂರಾರು ಮೈಲಿ ಪ್ರಯಾಣ ಮಾಡಬೇಕಾಗತ್ತೆ. ನಾಗ್ಪುರದ ಲಕಡ್​ಗಂಜ್​ನಲ್ಲಿರುವ ಬಾರ್ಬೆಟ್​ ಗಾರ್ಡನ್​ನ ಬೀದಿಬದಿಯ ಚಾಟ್​ವಾಲಾ (Chatwala) ಇದನ್ನು ಸಂಶೋಧಿಸಿದ್ದಾರೆ. ರೂ. 40 ಕೊಟ್ಟರೆ ಸಾಕು ಈ ದಹೀ ಕುರ್ಕುರೆ ಚಾಟ್​ ತಿನ್ನಬಹುದು. ಏನು ಇನ್ನೂ ಮೀನಾ ಮೇಷ ಎಣಿಸುತ್ತಿದ್ದೀರಾ? ಹೇಗೂ ವೀಕೆಂಡ್​, ನಡೀರಿ ಹೋಗೋಣ ಮತ್ತೆ. ಸಾಕು ಸುಮ್ನಿರಿ, ಎರಡು ದಿನಕ್ಕೊಮ್ಮೆ ಇಂಥ ವಿಚಿತ್ರ ತಿಂಡಿಗಳನ್ನು ಚಾಟ್​ವಾಲಾಗಳು ಮಾಡುತ್ತಿರುತ್ತಾರೆ. ಫುಡ್ ವ್ಲಾಗರ್​​​ಗಳಿಗೂ ಅಂಥವರೇ ಬೇಕು. ಇವೆಲ್ಲ ಎಷ್ಟು ಆರೋಗ್ಯಕರ ಮತ್ತು ಸ್ವಾದಿಷ್ಠ? ಅಂತ ಬಯ್ಕೊಳ್ತಿದ್ದೀರಾ? ಆದರೂ ಈ ದಹೀ ಕುರ್ಕುರೆ ಚಾಟ್​ ಹೇಗೆ ಮಾಡೋದು ಅಂತ ನೋಡದೆ ಇರುತ್ತೀರಾ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Kushal | Jaipur (@oyehoyeindia)

ಸಾವಿರಾರು ಜನರು ಈ ವಿಡಿಯೋ ನೋಡಿ ತೋಚಿದಂತೆ ಪ್ರತಿಕ್ರಿಯಿಸಿದ್ದಾರೆ. ಟೊಮ್ಯಾಟೋ ಐಸ್​ಕ್ರೀಮ್, ಸ್ಟ್ರಾಬೆರ್ರಿ ಬಿರಿಯಾನಿ, ಸಮೋಸಾ ಗುಲಾಬ್​ ಜಾಮೂನ್​ ನಂತರ ಇದೀಗ ಈ ದಹೀ ಕುರ್ಕುರೆ ಚಾಟ್​? ಅವನ್ನೆಲ್ಲಾ ನೋಡಿ ಎಷ್ಟು ವಾಕರಿಕೆ ಬಂದಿತ್ತೋ ಇದನ್ನು ನೋಡಿಯೂ ಇನ್ನೂ ಹೆಚ್ಚು ವಾಕರಿಕೆ ಬರುತ್ತಿದೆ. ಇಷ್ಟು ಅಸಹ್ಯವಾದ ಚಾಟ್​ ತಯಾರಿಸುವ ಉದ್ದೇಶವಾದರೂ ಏನು? ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.

ಇದನ್ನೂ ಓದಿ : Viral: ಹೆಣ್ಣುಮಕ್ಕಳಿಂದ ನಿರಾಕರಣೆ; ತನ್ನ ಎತ್ತರ ಹೆಚ್ಚಿಸಿಕೊಳ್ಳಲು ಈತ ರೂ. 66 ಲಕ್ಷ ವ್ಯಯಿಸಿದ

ದೇಶಾದ್ಯಂತ ಬೀದಿವ್ಯಾಪಾರಿಗಳು ಇಂಥ ವಿಚಿತ್ರ ಪ್ರವೃತ್ತಿಗೆ ಬಿದ್ದಿದ್ದಾರೆ. ಟೇಸ್ಟ್​ ಬಡ್ಸ್​ಗೆ ಚಿತ್ರಹಿಂಸೆ ನೀಡುತ್ತಿದ್ದಾರೆ. ನಿಜವಾಗಿಯೂ ಹೀಗೆ ಮಾಡುವುದರಿಂದ ಏನು ಪ್ರಯೋಜನ? ಒಂದೆರಡು ಈ ವಿಡಿಯೋಗಳು ದಿನ ವೈರಲ್​ ಆಗುತ್ತವೆ. ನಂತರ? ಎಂದು ಪ್ರಶ್ನಿಸಿದ್ದಾರೆ ಕೆಲವರು.

ಇದನ್ನೂ ಓದಿ : Viral Video:ನನ್ನ ಮೊಟ್ಟೆಗಳಿಗೆ ಕೈಹಾಕಿದರೆ ಅಷ್ಟೇ; ಹೆಬ್ಬಾವು ಮುಂದೇನು ಮಾಡಿತು?

ಸಾಮಾಜಿಕ ಜಾಲತಾಣದಲ್ಲಿ ಅಸ್ತಿತ್ವ ಹೊಂದಿದರೆ ಮಾತ್ರ ಬದುಕಿದ್ದೇವೆ ಮತ್ತು ಸಾಧನೆ ಮಾಡುತ್ತಿದ್ದೇವೆ ಎಂಬ ಹುಚ್ಚಿಗೆ ಮನುಷ್ಯ ಬಿದ್ದಿದ್ದಾನೆ. ವಿಡಿಯೋ ವ್ಲಾಗರ್​​ಗಳು ಕಂಟೆಂಟ್​ಗಾಗಿ ಇಂಥ ಅಸಂದ್ಧ ಪ್ರಯೋಗಗಳನ್ನು ಚಾಟ್​ವಾಲಾಗಳಿಂದ ಮಾಡಿಸುತ್ತಿದ್ಧಾರೆ ಎನ್ನುವುದು ಜನರಿಗೆ ಗೊತ್ತಾಗಿದೆ. ಎಷ್ಟು ದಿನ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯ? ಏನೇ ಆಗಲಿ ಒಂದೊಂದು ತಿಂಡಿ ತಿನಿಸಿಗೂ ಅದರದೇ ಆದ ವಿಧಾನ, ರುಚಿ, ಹದ ಎಲ್ಲವೂ ಇರುತ್ತದೆ. ಹೀಗೆಲ್ಲ ಅದನ್ನು ಕೆಡಿಸುವುದು ಸಲ್ಲದು. ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 2:30 pm, Sat, 24 June 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ