Viral News: ಆನ್ಲೈನ್ನಲ್ಲಿ ಆರ್ಡರ್ ಮಾಡಿದ ವಸ್ತು 4 ವರ್ಷದ ಬಳಿಕ ಡೆಲಿವರಿ
ವ್ಯಕ್ತಿಯೊರ್ವ ಸುಮಾರು ಸುಮಾರು ನಾಲ್ಕು ವರ್ಷಗಳ ಹಿಂದೆ ಪ್ರಾಡೆಕ್ಟ್ ಒಂದನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದು, ಇದೀಗಾ ಆತನ ಕೈಗೆ ಬಂದು ತಲುಪಿದೆ. ಈ ಕುರಿತು ಪೋಸ್ಟ್ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.
ದೆಹಲಿ ಮೂಲದ ನಿತಿನ್ ಅಗರ್ವಾಲ್ ಎಂಬ ಟೆಕ್ಕಿ ಸುಮಾರು ನಾಲ್ಕು ವರ್ಷಗಳ ಹಿಂದೆ ಅಲಿ ಎಕ್ಸ್ಪ್ರೆಸ್(AliExpress) ಆಪ್ಲೀಕೇಶನ್ನಲ್ಲಿ ಪ್ರಾಡೆಕ್ಟ್ ಒಂದನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದಾರೆ. ಬರೋಬ್ಬರೀ ನಾಲ್ಕು ವರ್ಷಗಳ ನಂತರ ಡೆಲಿವರಿ ಆಗಿದ್ದು, ಸ್ವತಃ ನಿತಿನ್ ಈ ಕುರಿತು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಇದೀಗಾ ಈ ಸುದ್ದಿ ಎಲ್ಲೆಡೆ ಭಾರೀ ವೈರಲ್ ಆಗಿದೆ.
2020 ರಲ್ಲಿ ಭಾರತ ಸರ್ಕಾರವು 58 ಇತರ ಚೀನೀ ಅಪ್ಲಿಕೇಶನ್‌ಗಳೊಂದಿಗೆ ಈ ಅಲಿ ಎಕ್ಸ್ಪ್ರೆಸ್ ಅಪ್ಲಿಕೇಶನ್ ಅನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಆದರೆ ಬ್ಯಾನ್ ಮಾಡುವ ಸ್ವಲ್ಪ ದಿನಗಳ ಹಿಂದೆ, ನಿತಿನ್ ಎಲೆಕ್ಟ್ರಾನಿಕ್ಸ್ ಉತ್ಪನ್ನವೊಂದನ್ನು ಆರ್ಡರ್ ಮಾಡಿದ್ದಾರೆ. ಈ ಅಲಿ ಎಕ್ಸ್ಪ್ರೆಸ್ (ಈಗ ಭಾರತದಲ್ಲಿ ನಿಷೇಧಿಸಲಾಗಿದೆ) ಅಪ್ಲಿಕೇಶನ್ ಮೂಲಕ ಭಾರತದಲ್ಲಿ ಲಭ್ಯವಿಲ್ಲದ ಕೆಲವು ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಚೀನಾದಿಂದ ಆರ್ಡರ್ ಮಾಡಬಹುದಾಗಿತ್ತು.
Never lose hope! So, I ordered this from Ali Express (now banned in India) back in 2019 and the parcel was delivered today. pic.twitter.com/xRa5JADonK
— Tech Bharat (Nitin Agarwal) (@techbharatco) June 21, 2023
ಇದನ್ನೂ ಓದಿ: ಹೆಣ್ಣುಮಕ್ಕಳಿಂದ ನಿರಾಕರಣೆ; ತನ್ನ ಎತ್ತರ ಹೆಚ್ಚಿಸಿಕೊಳ್ಳಲು ಈತ ರೂ. 66 ಲಕ್ಷ ವ್ಯಯಿಸಿದ
ಟ್ವಿಟರ್ ಪೋಸ್ಟ್‌ನಲ್ಲಿ, ಅಗರ್ವಾಲ್ ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದು, ಜೊತೆಗೆ ಎಂದಿಗೂ ಭರವಸೆ ಕಳೆದುಕೊಳ್ಳದಿರಿ. ಅಲಿ ಎಕ್ಸ್‌ಪ್ರೆಸ್‌ನಿಂದ 2019 ರಲ್ಲಿ ಆರ್ಡರ್ ಮಾಡಿದ್ದೆ, ಇಂದು ಪಾರ್ಸೆಲ್ ಬಂದು ತಲುಪಿದೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: