Video Viral: ಜಲಾವೃತಗೊಂಡ ಬೈಪಾಸ್‌ನಲ್ಲಿ ಸಿಲುಕಿಕೊಂಡ ಕಾಲೇಜ್ ಬಸ್, ಕಿಟಕಿಯ ಮೂಲಕ ವಿದ್ಯಾರ್ಥಿಗಳ ರಕ್ಷಣೆ
Gujarat: ಖೇಡಾ ಜಿಲ್ಲೆಯ ನಾಡಿಯಾಡ್ ಪ್ರದೇಶದ ಬೈಪಾಸ್ ಮಳೆಯಿಂದ ತುಂಬಿಕೊಂಡಿದ್ದು, ಈ ಬೈಪಾಸ್‌ನಲ್ಲಿ ಮಕ್ಕಳಿದ್ದ ಕಾಲೇಜು ಬಸ್ ಸಿಲುಕಿಕೊಂಡಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಸ್ಥಳೀಯರು ಬಸ್ಸಿನಲ್ಲಿದ್ದ ಎಲ್ಲ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ.
ಗಾಂಧಿನಗರ: ಗುಜರಾತ್‌ನಲ್ಲಿ ಬಿಪರ್ಜಾಯ್ ಚಂಡಮಾರುತ ಅಪ್ಪಳಿಸಿದ ನಂತರ ರಾಜ್ಯದ ಅನೇಕ ಕಡೆ ಇಂದು (ಜೂ. 24) ಭಾರಿ ಮಳೆಯಾಗಿದ್ದು, ರಸ್ತೆಗಳು ಜಲಾವೃತವಾಗಿದೆ, ಜೊತೆಗೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ. ಖೇಡಾ ಜಿಲ್ಲೆಯ ನಾಡಿಯಾಡ್ ಪ್ರದೇಶದ ಬೈಪಾಸ್ ಮಳೆ ನೀರಿನಿಂದ ತುಂಬಿಕೊಂಡಿದ್ದು, ಈ ಬೈಪಾಸ್‌ನಲ್ಲಿ ಮಕ್ಕಳಿದ್ದ ಕಾಲೇಜು ಬಸ್ ಸಿಲುಕಿಕೊಂಡಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಸ್ಥಳೀಯರು ಬಸ್ಸಿನಲ್ಲಿದ್ದ ಎಲ್ಲ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಈ ಕಾರ್ಯಚರಣೆಯಲ್ಲಿ ಯಾರಿಗೂ ತೊಂದರೆ ಆಗಿಲ್ಲ ಎಂದು ಹೇಳಿದ್ದಾರೆ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಒಂದು ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವಿದ್ಯಾರ್ಥಿಗಳನ್ನು ಬಸ್ಸಿನ ಕಿಟಕಿಯ ಮೂಲಕ ಹೊರಗೆ ತರಲಾಗಿದೆ.
ಭಾರತ ಹವಾಮಾನ ಇಲಾಖೆ (IMD) ಜೂನ್ 22 ರಿಂದ ಜೂನ್ 25 ರವರೆಗೆ ಗುಜರಾತ್‌ನ ವಿವಿಧ ಭಾಗಗಳಲ್ಲಿ ಲಘು ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ರಾಜ್ಯದ ಹವಾಮಾನದ ಮಾದರಿಗಳು ಕೂಡ ವರದಿಯನ್ನು ನೀಡಿತ್ತು. ದಕ್ಷಿಣ ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಪ್ರಾರಂಭಿಕ ತುಂತುರು ಮಳೆಯಾಗಿದ್ದು, ಮಾನ್ಸೂನ್ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿರುವ ರೈತರು ಮತ್ತು ನಿವಾಸಿಗಳಿಗೆ ಭರವಸೆಯನ್ನು ನೀಡಿದೆ. ಇತ್ತೀಚಿನ IMD ಬುಲೆಟಿನ್ ಪ್ರಕಾರ, ಗುಜರಾತ್ ಪ್ರದೇಶದ ಹಲವಾರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಮುಂದಿನ ದಿನಗಳಲ್ಲಿ ಲಘು ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು IANS ವರದಿ ಮಾಡಿದೆ.
#WATCH | Gujarat: Due to heavy rain in Nadiad area of Kheda district, leading to waterlogging, a college bus got stuck in a bypass. The locals immediately rushed to the spot and rescued all the students on the bus. pic.twitter.com/D61cs00Hu7
— ANI (@ANI) June 24, 2023
ಇದನ್ನೂ ಓದಿ:Biporjoy Cyclone: ಗುಜರಾತ್ನತ್ತ ಬಿಪರ್ಜಾಯ್ ಚಂಡಮಾರುತ; ಹೈಅಲರ್ಟ್ ಘೋಷಣೆ
ಮಾನ್ಸೂನ್ ಮುಂದುವರೆದಂತೆ, ಜೂನ್ 24 ರಂದು ಸೂರತ್, ತಾಪಿ, ಡ್ಯಾಂಗ್, ನವಸಾರಿ, ವಲ್ಸಾದ್ ಜಿಲ್ಲೆಗಳು ಮತ್ತು ದಮನ್, ದಾದ್ರಾ ನಗರ ಹವೇಲಿಯಲ್ಲಿ ಲಘು ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಪೋರಬಂದರ್, ಗಿರ್ ಸೋಮನಾಥ್ ಮತ್ತು ಜುನಾಗಢವನ್ನು ಒಳಗೊಂಡಿರುವ ಸೌರಾಷ್ಟ್ರ ಪ್ರದೇಶವು ಸಹ ಇದೇ ರೀತಿಯ ಮಳೆಯಾಗಲಿದೆ ಎಂದು ಹೇಳಿದೆ. ಜೂನ್ 25ರಂದು ಕೂಡ ಅಂದರೆ ನಾಳೆ ಪೋರ್ಬಂದರ್, ಗಿರ್ ಸೋಮನಾಥ್, ಜುನಾಗಢ್ ಮತ್ತು ದಿಯು ಸೇರಿದಂತೆ ದಮನ್ ಮತ್ತು ದಾದ್ರಾ ನಗರ ಹವೇಲಿ ಸೇರಿದಂತೆ ದಕ್ಷಿಣ ಗುಜರಾತ್ ಪ್ರದೇಶದ ಎಲ್ಲಾ ಜಿಲ್ಲೆಗಳು ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:02 pm, Sat, 24 June 23