Video Viral : ಕೇದಾರನಾಥಕ್ಕೆ ತೆರಳುವ ಮಾರ್ಗದಲ್ಲಿ ಕುದುರೆಗೆ ಒತ್ತಾಯ ಪೂರಕವಾಗಿ ಗಾಂಜಾ ನೀಡಿ ಹಿಂಸೆ, ನೆಟ್ಟಿಗರು ಅಕ್ರೋಶ
ಕೇದಾರನಾಥಕ್ಕೆ ತೆರಳುವ ಮಾರ್ಗದಲ್ಲಿ ಕುದುರೆಗೆ ಒತ್ತಾಯ ಪೂರಕವಾಗಿ ಗಾಂಜಾ ನೀಡಿ ಹಿಂಸೆ ನೀಡಲಾಗುತ್ತಿದೆ. ಈ ಬಗ್ಗೆ ನೆಟ್ಟಿಗರು ಅಕ್ರೋಶ ವ್ಯಕ್ತಪಡಿಸಿದ್ದು. ಈ ಬಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಆದೇಶ ನೀಡಿದ್ದಾರೆ.
ಡೆಹ್ರಡೂನ್: ಉತ್ತರಾಖಂಡವು ತನ್ನ ಪರ್ವತಗಳು, ಕಣಿವೆಗಳು, ನದಿಗಳು ಮತ್ತು ಅಲ್ಲಿನ ರಮಣೀಯ ಸೌಂದರ್ಯಗಳಿಗೆ ಹೆಸರುವಾಸಿ. ಅನೇಕರು ಇಲ್ಲಿ ಸೌಂದರ್ಯದ ಜತೆಗೆ ಸಮಯ ಕಳೆಯಲು ಮತ್ತು ಹಿಮಪಾತದ ಮಳೆಯನ್ನು ಆನಂದಿಸಲು ಸಾವಿರಾರು ಜನರು ಭೇಟಿ ನೀಡುತ್ತಾರೆ. ಇದರ ಜೊತೆಗೆ, ಚಾರ್ ಧಾಮ್‌ಗಳಾದ ದ್ವಾರಕಾ, ಬದರಿನಾಥ್, ಪುರಿ ಮತ್ತು ರಾಮೇಶ್ವರಂ ಸೇರಿದಂತೆ ಹಲವಾರು ಯಾತ್ರಾ ಸ್ಥಳಗಳ ವಾಸಸ್ಥಾನವಾಗಿದ್ದು, ಪ್ರವಾಸಿಗರು ಇಲ್ಲಿಯ ದೇವರ ಆಶೀರ್ವಾದ ಪಡೆಯಲು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಇನ್ನೂ ಇಲ್ಲಿಗೆ ಬಹಳಷ್ಟು ಜನ ಯುವಕರು ಹೆಚ್ಚಾಗಿ ಭೇಟಿ ನೀಡುತ್ತಾರೆ. ಇನ್ನೂ ಇಲ್ಲಿಗೆ ಟ್ರಾಕಿಂಗ್ ಮಾಡಲು ಕೋಲಿನಲ್ಲಿ ಸಹಾಯ ಪಡೆಯುತ್ತಾರೆ, ಇನ್ನೂ ವಯಸ್ಸಾದರನ್ನು ಮಟ್ಟಿಲು ಹತ್ತಾಲು ಸಾಧ್ಯವಿಲ್ಲದವರನ್ನು ಇಲ್ಲಿ ಕರೆದುಕೊಂಡು ಬರಲು ಕುದುರೆಗಳನ್ನು ಉಪಯೋಗ ಮಾಡುತ್ತಾರೆ, ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ಷೇಪಗಳು ವ್ಯಕ್ತವಾಗಿತ್ತು. ಹೌದು ಕೇದಾರನಾಥ್ಕ್ಕೆ ಭೇಟಿ ನೀಡುವ ವೇಳೆ ಕುದುರೆಗಳನ್ನು ಬಳಸುತ್ತಾರೆ. ಆದರೆ ಅದು ಅಷ್ಟು ದೊಡ್ಡ ಪರ್ವತವನ್ನು ತನ್ನ ಬೆನ್ನಿನ ಮೇಲೆ ಮನುಷ್ಯರನ್ನು ಕೂರಿಸಿಕೊಂಡು ಹೋಗುತ್ತಾರೆ, ಆದರೆ ಕೆಲವೊಂದು ಕುದುರೆಗಳನ್ನು ಆಯಸಗೊಂಡು ಅಲ್ಲಿ ಬಿದ್ದು ಬೀಡುತ್ತದೆ, ಇನ್ನೂ ಕೆಲವು ಅಲ್ಲೇ ಸತ್ತ ಬಗ್ಗೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದೆ. ಆದರೆ ಅಲ್ಲಿ ಈ ಬಗ್ಗೆ ಕೇಳಿದಾಗ ಇದು ಅನಿವಾರ್ಯ ಎಂದು ಹೇಳುತ್ತಾರೆ.
ಇದೀಗ ಇನ್ನೊಂದು ವೀಡಿಯೊ ವೈರಲ್ ಆಗಿದ್ದು, ಈ ಕುದುರೆಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ವೀಡಿಯೊ ಎಲ್ಲ ಕಡೆ ಹರಿದಾಡುತ್ತಿದೆ, ಈ ವೀಡಿಯೊ ನೆಟಿಗರು ಅಕ್ರೋಶಕ್ಕೆ ಕಾರಣವಾಗಿದೆ, ಈ ವೀಡಿಯೊದಲ್ಲಿ ಇಬ್ಬರು ವ್ಯಕ್ತಿಗಳು ಕುದುರೆಗೆ ವ್ಯಸನಕಾರಿ, ಗಾಂಜಾವನ್ನು ಒತ್ತಾಯ ಪೂರಕವಾಗಿ ನೀಡುತ್ತಿರುವುದನ್ನು ಈ ವೀಡಿಯೊದಲ್ಲಿ ನೋಡಬಹುದು.
#Uttrakhand Some people are making a horse smoke weed forcefully at the trek of Kedarnath temple.@uttarakhandcops @DehradunPolice @RudraprayagPol @AshokKumar_IPS should look into this matter and find the culprit behind thispic.twitter.com/yyX1BNMiLk
— Himanshi Mehra ? (@manshi_mehra_) June 23, 2023
ಇದನ್ನೂ ಓದಿ: Viral Video: ಸಂಗಾತಿಯ ಅಗಲಿಕೆಯ ದುಃಖದಿಂದ ಪ್ರಾಣ ಬಿಟ್ಟ ಪುಟ್ಟ ಹಕ್ಕಿ, ಪರಿಶುದ್ಧ ಪ್ರೀತಿಗೆ ಇದು ಸಾಕ್ಷಿ
ವರದಿಗಳ ಪ್ರಕಾರ, ಕೇದಾರನಾಥ ದೇವಾಲಯಕ್ಕೆ ಪ್ರಯಾಣಿಸುವಾಗ ಈ ಘಟನೆ ಸಂಭವಿಸಿದೆ ಮತ್ತು ಸಂದರ್ಶಕರೊಬ್ಬರು ಇದನ್ನು ಚಿತ್ರೀಕರಿಸಿದ್ದಾರೆ. ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗಿನಿಂದ, ಈ ಬಗ್ಗೆ ಸಾಮಾಜಿಕ ಜಾಲತಾಣ ಬಳಕೆದಾರರೂ ಎಲ್ಲ ಕಡೆ ವೈರಲ್ ಮಾಡುತ್ತಿದ್ದಾರೆ, ಇದೀಗ ಈ ಘಟನೆ ಅಧಿಕಾರಿಗಳ ಗಮನ ಸೆಳೆದಿದ್ದಾರೆ ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸುವಂತೆ ಒತ್ತಾಯಿಸಿದ್ದಾರೆ. ವ್ಯಕ್ತಿಗಳಿಬ್ಬರು ತಮ್ಮ ಕೈಗಳಿಂದ ಕುದುರೆಗಳ ಬಾಯಿ ಮತ್ತು ಮೂಗಿನ ಹೊಳ್ಳೆಗಳಿಗೆ ಈ ವ್ಯಸನಗಳನ್ನು ತುಂಬುತ್ತಿದ್ದಾರೆ. ಮತ್ತೊಂದೆಡೆ, ಈ ಸೇವಿಸಿದ ತಕ್ಷಣ ಕುದುರೆಯು ಉಸಿರಾಡಲು ಹೆಣಗಾಡುತ್ತಾ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಈ ವೀಡಿಯೊದಲ್ಲಿ ನೋಡಬಹುದು. ಇದೀಗ ಈ ವೀಡಿಯೊ ಎಲ್ಲರಿಗೂ ಗೊಂದಲ ಮೂಡಿಸಿದೆ.
ಈ ವೀಡಿಯೋ ಭಕ್ತ ಪ್ರಯಣಕ್ಕಾಗಿ ಬಳಸಲಾಗುತ್ತದೆ. ಪ್ರವಾಸಿಗರ ಸುರಕ್ಷತೆಯ ಬಗ್ಗೆಯೂ ಕಳವಳ ಮೂಡಿಸಿದೆ ಮತ್ತು ಪ್ರಾಣಿ ಹಿಂಸೆಯ ಬಗ್ಗೆ ಗಂಭೀರವಾದ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗುತ್ತಿದೆ. ಈ ಪ್ರದೇಶದಲ್ಲಿ ಇತ್ತೀಚೆಗೆ ಪ್ರಾಣಿಗಳ ಮೇಲೆ ಹಿಂಸಾಚಾರ ಹೆಚ್ಚಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ