Maharashtra: ಟ್ರ್ಯಾಂಪೊಲೈನ್ ಮೇಲೆ ಜಿಗಿದು ಕಾಲು ಮುರಿದುಕೊಂಡ ಯುವಕ, ಮಾಲ್‌ನ ಸಿಬ್ಬಂದಿಯ ಬಂಧನ
ಟ್ರ್ಯಾಂಪೊಲೈನ್ ಮೇಲೆ ಜಿಗಿದು ಯುವಕನೊಬ್ಬ ಕಾಲು ಮುರಿದುಕೊಂಡಿರುವ ಘಟನೆ ಮಹಾರಾಷ್ಟ್ರದ ಮಲಾಡ್ನಲ್ಲಿರುವ ಮಾಲ್ನಲ್ಲಿ ನಡೆದಿದೆ. ಇದೀಗ ಈ ವೀಡಿಯೊ ಎಲ್ಲ ಕಡೆ ವೈರಲ್ ಆಗಿದೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಮಾಲ್ ಸಿಬ್ಬಂದಿಯನ್ನು ಬಂಧಿಸಿದ್ದಾರೆ.
ಮಲಾಡ್: ಮಾಲ್‌ಗೆ ಹೋದಾಗ ಅಲ್ಲಿರುವ ಗೇಮಿಂಗ್ ಝೋನ್ಗಳನ್ನು ನೋಡಿದಾಗ ಒಂದು ಬಾರಿ ಆಟವಾಡುವ ಎಂದು ಅನ್ನಿಸುವುದು ಸಹಜ, ಮಜಾ ಇರುತ್ತೇ ಎಂದು ಆಟವಾಡಲು ಹೋದರೆ ಹೀಗೂ ಆಗುಬಹುದು ನೋಡಿ, ಹೌದು ಇನ್ಫಿನಿಟಿ ಮಾಲ್‌ನ ಗೇಮಿಂಗ್ ಝೋನ್‌ನಲ್ಲಿ ಇತ್ತೀಚೆಗೆ ನಡೆದ ಘಟನೆಯ ವೀಡಿಯೊ ವೈರಲ್ ಆಗಿದೆ. ಗೇಮಿಂಗ್ ಏರಿಯಾದಲ್ಲಿ ಟ್ರ್ಯಾಂಪೊಲೈನ್ ಬಳಸುವಾಗ ಕಾಲು ಮುರಿದು, ಗಂಭೀರ ಗಾಯ ಉಂಟಾಗಿರುವ ಘಟನೆ ಮಹಾರಾಷ್ಟ್ರದ ಮಲಾಡ್ನಲ್ಲಿ ನಡೆದಿದೆ. ಈ ಬಗ್ಗೆ ಬಂಗೂರ್ ನಗರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಅಲ್ಲಿನ ವ್ಯವಸ್ಥಾಪನಾ ವಿರುದ್ಧ ಕ್ರಮ ಕೈಗೊಳ್ಳಲಿದೆ. 19 ವರ್ಷದ ತೀರ್ಥ್ ಬೋರಾ ಎಂಬಾತ ದೂರು ನೀಡಿದ್ದಾರೆ.
ಜೂನ್ 18ರಂದು ತೀರ್ಥ್ ಬೋರಾ ತನ್ನ ಸ್ನೇಹಿತರೊಂದಿಗೆ ಮಲಾಡ್ ಪಶ್ಚಿಮದ ಲಿಂಕ್ ರಸ್ತೆಯಲ್ಲಿರುವ ಜನಪ್ರಿಯ ಮಾಲ್‌ಗೆ ಬಂದು ಗೇಮಿಂಗ್ ಝೋನ್‌ನಲ್ಲಿ ಕೆಲವೊಂದು ಗೇಮಿಂಗ್ಗಳಲ್ಲಿ ಭಾಗವಹಿಸಿದ್ದಾರೆ, ಈ ಸಮಯದಲ್ಲಿ ಈ ಘಟನೆ ನಡೆದಿದೆ. ಟ್ರ್ಯಾಂಪೊಲೈನ್ ಮೇಲೆ ಜಿಗಿಯುತ್ತಿರುವಾಗ, ಎರಡು ಸ್ಪ್ರಿಂಗ್‌ಗಳು ಲಾಕ್ ಬಿಟ್ಟಿದೆ ಎಂದು ಹೇಳಲಾಗುತ್ತದೆ, ಈ ಸಮಯದಲ್ಲಿ ತೀರ್ಥ್ ಬೋರಾ ಅವರ ಮೊಣಕಾಲು ಪಕ್ಕದ ಕಬ್ಬಿಣದ ಸ್ಪ್ರಿಂಗ್ಗೆ ಬಡಿದು ಮೂಳೆ ಮುರಿದಿದೆ. ನಂತರ ತೀರ್ಥ್ ಬೋರಾ ಅವರನ್ನು ತಕ್ಷಣವೇ ಕುರ್ಲಾದ ಕ್ರಿಟಿಕ್ ಕೇರ್ ಏಷ್ಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಮೂಳೆ ಮುರಿದಿದೆ ಎಂದು ಹೇಳಿದ್ದಾರೆ. ನಂತರ ಆಸ್ಪತ್ರೆ ಸಿಬ್ಬಂದಿ ಘಟನೆಯ ಕುರಿತು ಬಂಗೂರ್ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತೀರ್ಥ್ ಬೋರಾ ಅವರು ಘಟನೆಯ ಬಗ್ಗೆ ತಿಳಿಸಿದ್ದಾರೆ. ನಾನು ನನ್ನ ಸ್ನೇಹಿತರೊಂದಿಗೆ ಜಾಲಿ ಮೂಡ್ ಕಳೆಯಲು ಮಾಲ್‌ಗೆ ಹೋಗಿದ್ದೆ, ಅಲ್ಲಿ ಗೇಮಿಂಗ್ ಝೋನ್‌ನಲ್ಲಿ ಟ್ರ್ಯಾಂಪೊಲೈನ್ ಜಗಿಯಲು ಹೋದೆ, ಟ್ರ್ಯಾಂಪೊಲೈನ್ನ ಎರಡು ಸ್ಪ್ರಿಂಗ್‌ಗಳು ಸಡಿಲಗೊಂಡು ನಾನು ಲೋಹದ ಭಾಗಕ್ಕೆ ಬಿದ್ದೆ. ಒಂದು ಸ್ಪ್ರಿಂಗ್ ನನ್ನ ಮೊಣಕಾಲಿಗೆ ಹೊಡೆದ ಪರಿಣಾಮವು ಕಾಲುಗಳು ಒಂದು ಬಾರಿ ಮುರಿದಂತೆ ಭಾಸವಾಯಿತು, ಅಲ್ಲಿದ್ದ ಸಿಬ್ಬಂದಿ ತಕ್ಷಣವೇ ನನ್ನ ಬಳಿ ಬಂದು ವಿಚಾರಿಸಿದ್ದಾರೆ. ನನ್ನನ್ನು ಕ್ರಿಟಿಕ್ ಕೇರ್ ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಕೂಡ ಮಾಡಿದ್ದಾರೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ:Video Viral: ಜಲಾವೃತಗೊಂಡ ಬೈಪಾಸ್‌ನಲ್ಲಿ ಸಿಲುಕಿಕೊಂಡ ಕಾಲೇಜ್ ಬಸ್, ಕಿಟಕಿಯ ಮೂಲಕ ವಿದ್ಯಾರ್ಥಿಗಳ ರಕ್ಷಣೆ
ಜುಲೈ 19ರಂದು ಬೋರಾ ನೀಡಿದ ದೂರಿ ಆಧಾರದಲ್ಲಿ ಬಂಗೂರ್ ನಗರ ಪೊಲೀಸರು ಗೇಮಿಂಗ್ ವಲಯದ ನಿರ್ವಹಣೆ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕಾಯ್ದೆ) ಮತ್ತು 338 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕೃತ್ಯದಿಂದ ತೀವ್ರ ನೋವನ್ನುಂಟು ಮಾಡುವುದು) ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಇನ್ಫಿನಿಟಿ ಮಾಲ್‌ನಲ್ಲಿನ ಗೇಮ್ ಝೋನ್‌ನ ನಿರ್ವಾಹಕ 42 ವರ್ಷದ ಪ್ರಣವ್ ನಾಗೋರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ