Dhoni: ಧೋನಿ ಎಕಾನಾಮಿ ಕ್ಲಾಸ್​ನಲ್ಲಿ ರಾಂಚಿಗೆ ಪ್ರಯಾಣ, ವಿಡಿಯೋ ವೈರಲ್

Ranchi : ಬಗೆಬಗೆಯ ಚಾಕೋಲೇಟ್​ನೊಂದಿಗೆ ಧೋನಿ ಮುಂದೆ ನಿಲ್ಲುತ್ತಾಳೆ ಗಗನಸಖಿ. ಸುತ್ತಲಿನವರೆಲ್ಲ ಇಷ್ಟೊಂದು ಚಾಕೋಲೇಟ್​ ಈ ವ್ಯಕ್ತಿಗೆ ಮಾತ್ರ! ಎಂದು ಅಚ್ಚರಿಯಾಗುತ್ತಾರೆ ವಿನಾ ಆ ವ್ಯಕ್ತಿ ಯಾರೆಂದು ತಲೆಕೆಡಿಸಿಕೊಳ್ಳುವುದೇ ಇಲ್ಲ.

Dhoni: ಧೋನಿ ಎಕಾನಾಮಿ ಕ್ಲಾಸ್​ನಲ್ಲಿ ರಾಂಚಿಗೆ ಪ್ರಯಾಣ, ವಿಡಿಯೋ ವೈರಲ್
ಎಕಾನಾಮಿ ಕ್ಲಾಸ್​ನಲ್ಲಿ ರಾಂಚಿಗೆ ಪ್ರಯಾಣಿಸುತ್ತಿರುವ ಕ್ರಿಕೆಟ್​ ಆಟಗಾರ ಎಂ ಎಸ್​ ಧೋನಿ.
Follow us
ಶ್ರೀದೇವಿ ಕಳಸದ
|

Updated on:Jun 27, 2023 | 10:50 AM

Economy Class : ಅರೆ ಓ ಧೋನಿ! (M S Dhoni) ನನ್ನ ಪಕ್ಕದಲ್ಲಿಯೇ ಕುಳಿತಿದ್ದಾರೆ. ನನ್ನ ಮುಂದಿನ ಸೀಟಿನಲ್ಲಿದ್ದಾರೆ. ನನ್ನ ಹಿಂದಿನ ಸೀಟಿನಲ್ಲಿದ್ದಾರೆ. ನಿಮ್ಮದೊಂದು ಆಟೋಗ್ರಾಫ್​ ಬೇಕು. ಒಂದು ಸೆಲ್ಫೀ ಸರ್ಜೀ… ಹೀಗೆಲ್ಲ ಯಾವ ಧ್ವನಿಗಳೂ ಅಲ್ಲ ಕೇಳಿಬರಲಿಲ್ಲ. ನೂಕುನುಗ್ಗಲು ಉಂಟಾಗಲಿಲ್ಲ. ಎಲ್ಲರೂ ಅವರವರ ಪಾಡಿಗೆ ಕುಳಿತಿದ್ದರು. ಹಾಗೆಯೇ ಧೋನಿ ಕೂಡ. ಮೊದಲ ಸಾಲಿನಲ್ಲಿ ಅಲ್ಲ ಮತ್ತೆ! 3F ನಲ್ಲಿ. ಅಚ್ಚರಿಯಾಗುತ್ತಿದೆಯಾ? ಹೌದು ಇದು ನಡೆದಿದ್ದು ರಾಂಚಿ ಬಜೆಟ್​ ಫ್ಲೈಟ್​ನಲ್ಲಿ. ಗಗನಸಖಿ ತಟ್ಟೆತುಂಬ ಥರಾವರಿ ಚಾಕೋಲೇಟ್ ತಂದುಕೊಟ್ಟಾಗ ಹಿಂದಿನ ಸೀಟಿನಲ್ಲಿರುವ ಮಹಿಳೆ, ಅರೆ ನನಗ್ಯಾಕೆ ಚಾಕೊಲೇಟ್ ತಂದುಕೊಟ್ಟಿಲ್ಲ ಎಂದು ನೋಡುತ್ತಿರುವಂತೆ ತೋರುತ್ತಿಲ್ಲವೆ?

ರಾಂಚಿಯು ಕೇವಲ ಬಜೆಟ್​ ಫ್ಲೈಟ್​ ಅನ್ನು ಹೊಂದಿದೆ ಎಂದು ಗಬ್ಬರ್​ ಎನ್ನುವವರು ಈ ವಿಡಿಯೋ ಟ್ವೀಟ್​ ಮಾಡಿದ ಬೆನ್ನಲ್ಲಿ ನೆಟ್ಟಿಗರೆಲ್ಲರೂ ರಾಂಚಿಗೆ ಇರುವ ವಿಮಾನ ಸೌಲಭ್ಯದ ಬಗ್ಗೆ ಚರ್ಚಿಸಿದ್ದಾರೆ. ರಾಂಚಿಗೆ ಏರ್ ಇಂಡಿಯಾ ಮತ್ತು ವಿಸ್ತಾರಾ ಎರಡೂ ವಿಮಾನ ಸೌಲಭ್ಯ ಇವೆ. ಆದರೆ ರಾಂಚಿಗೆ ವಿಸ್ತಾರಾ ನೇರ ಸಂಪರ್ಕ ಹೊಂದಿಲ್ಲದ ಕಾರಣ ಧೋನಿ ಹೀಗೆ ಪ್ರಯಾಣಿಸಿದ್ದಾರೆ. ಬಿಝಿನೆಸ್​ ಕ್ಲಾಸ್​ ಬಗ್ಗೆ ಯೋಚಿಸದ ಅವರ ಸರಳತೆಯನ್ನು ಗಮನಿಸಿ ಎಂದಿದ್ದಾರೆ.

ಇದನ್ನೂ ಓದಿ : Viral: ಸೇಕ್ರೆಡ್​ ಫೈರ್; 16 ವರ್ಷಗಳ ”ದಾಸವಾಳ ಪುಷ್ಪಾ” ಕನಸು ನನಸಾದದ್ದು ಹೀಗೆ

ಏರ್ ಇಂಡಿಯಾ, ಏರ್ ಏಷ್ಯಾ ಇಂಡಿಯಾ, ಗೋ ಏರ್, ಇಂಡಿಗೊ, ವಿಸ್ತಾರಾ ಈ ಎಲ್ಲ ಕನೆಕ್ಟೆಡ್​ ಫ್ಲೈಟ್​ಗಳು ರಾಂಚಿಗೆ ಲಭ್ಯ ಎಂದ ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ರಾಂಚಿಗೆ ಪ್ರಯಾಣಿಸಲು ಇಂಡಿಗೋ ವಿಮಾನ ಉತ್ತಮ ಎಂದು ಇನ್ನೊಬ್ಬರು ಹೇಳಿದ್ದಾರೆ. ಎಲ್ಲಾ ಸರಿ ಮಧ್ಯದ ಸೀಟ್ ಯಾಕೆ ಖಾಲೀ ಇದೆ ಎಂದು ಮಗದೊಬ್ಬರು ಪ್ರಶ್ನಿಸಿದ್ದಾರೆ. ಅರೆರೆ! ಧೋನಿ ಕ್ಯಾಂಡಿ ಕ್ರಷ್ ಆಡುತ್ತಿದ್ದಾರೆ ಎಂದಿದ್ದಾರೆ ಕೆಲವರು. ಧೋನಿಯವರ ಸರಳತೆಗೆ ಸುಧಾ ಮೂರ್ತಿ ಹೆಮ್ಮೆ ಪಡಬಹುದು ಎಂದಿದ್ದಾರೆ ಒಬ್ಬರೇ ಒಬ್ಬರು!

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:44 am, Tue, 27 June 23

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ