Daily Horoscope: ಓದಿನಲ್ಲಿ ಆಸಕ್ತಿ ಕಡಿಮೆಯಾಗಿ ಅನ್ಯ ಚಟುವಟಿಕೆಯಲ್ಲಿ ತೊಡಗುವಿರಿ
11 ಜನವರಿ 2025: ಶನಿವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಆದಾಯ ಮೂಲದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ಅದೃಷ್ಟವನ್ನು ನಂಬುವುದಕ್ಕಿಂತ ಸಾಮರ್ಥ್ಯವನ್ನು ನಂಬುವುದು ಒಳ್ಳೆಯದು. ಅತಿಯಾದ ಧನಾರ್ಜನೆಯ ಚಿಂತೆಯು ನಿಮ್ಮ ಎಲ್ಲ ಕೆಲಸಗಳನ್ನು ಮರೆಸುವುದು. ಹಾಗಾದರೆ ಜನವರಿ 11ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ದ್ವಾದಶೀ / ತ್ರಯೋದಶೀ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಬ್ರಹ್ಮ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ 01 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 19 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:51 ರಿಂದ 11:16ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:05 ರಿಂದ 03:30 ರವರೆಗೆ, ಗುಳಿಕ ಬೆಳಿಗ್ಗೆ 07:02 ರಿಂದ 08: 27 ರವರೆಗೆ.
ಮೇಷ ರಾಶಿ: ನಿಮ್ಮ ಸಂಕಲ್ಪವನ್ನು ಬದಲಿಸಲಾರಿರಿ. ಪರೀಕ್ಷೆಯ ಫಲಿತಾಂಶದ ಮೇಲೆ ನಿಮ್ಮ ಮುಂದಿನ ಅಭ್ಯಾಸವು ನಿರ್ಣಯವಾಗಲಿದೆ. ವಿವಾಹಕ್ಕೆ ಬಂದಿರುವ ವಿಘ್ನಗಳನ್ನು ನೀವು ಪರಿಹರಿಸಿಕೊಳ್ಳುವುದು ಅನಿವಾರ್ಯವಾದೀತು. ಓದಿನಲ್ಲಿ ಆಸಕ್ತಿ ಕಡಿಮೆಯಾಗಿ ಅನ್ಯ ಚಟುವಟಿಕೆಯಲ್ಲಿ ತೊಡಗುವಿರಿ. ಸಹೋದರನಿಗೆ ನಿಮ್ಮಿಂದ ಅಲ್ಪವಾದರೂ ಸಹಾಯ ಮಾಡುವ ಮನಸ್ಸಾಗುವುದು. ಇಂದು ಆಗಬೇಕಾದ ಕೆಲಸಗಳನ್ನು ವೇಗವಾಗಿಯೂ ಹಾಗೂ ಬಹಳ ಎಚ್ಚರಿಕೆಯಿಂದ ಮಾಡುವಿರಿ. ಸಹೋದರನಿಂದ ಅನಿರೀಕ್ಷಿತ ಸಹಾಯವು ಸಿಗಬಹುದು. ಸಾಲವಾಗಿ ಪರಿಚಿತರಿಗೆ ಹಣವನ್ನು ಕೊಡಬೇಕಾದೀತು. ದಾಂಪತ್ಯದ ಕಲಹದಲ್ಲಿ ಮೌನವಹಿಸಿ ನೀವೇ ಶಾಂತಗೊಳಿಸಿ. ಆಗಾಗ ನಕಾರಾತ್ಮಕ ಅಂಶಗಳು ನಿಮ್ಮೊಳಗೆ ಏನನ್ನೋ ಮಾಡುತ್ತಾ ಇರುತ್ತದೆ. ಹೊಸ ವ್ಯಕ್ತಿಗಳ ಪರಿಚಯವಾಗಲಿದ್ದು ಆಪ್ತತೆಯೂ ಬೆಳೆದು, ವಿನಾಕಾರಣ ದೂರವೂ ಆಗಬಹುದು. ಪ್ರತ್ಯಕ್ಷ ಜ್ಞಾನ ಸಿಗದೇ ಬಂಧುಗಳ ನಡುವೆಯೇ ವೈಮನಸ್ಯ ಬೇಡ.
ವೃಷಭ ರಾಶಿ: ಪ್ರತಿಭೆಗೆ ಸೂಕ್ತ ಸ್ಥಳವನ್ನು ಪಡೆಯುವಿರಿ. ನಿಮ್ಮಲ್ಲಿ ಧಾರ್ಮಿಕ ಆಸಕ್ತಿಯ ಕೊರತೆ ಕಾಣಿಸುವುದು. ಉದ್ಯಮ ಕ್ಷೇತ್ರದಲ್ಲಿ ಹೊಸ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ನಿಮ್ಮದನ್ನಾಗಿ ಮಾಡಿಕೊಂಡಿದ್ದು ಸ್ವಲ್ಪ ಭೂಮಿಯು ಪರರ ಪಾಲಾಗಬಹುದು. ನೀವು ಇಂದು ಬೇಸರದಿಂದ ಯಾರ ಸಹಾಯವನ್ನೂ ಇಚ್ಛಿಸುವುದಿಲ್ಲ. ಪುಣ್ಯ ಸ್ಥಳಗಳ ದರ್ಶನವು ಅನಿರೀಕ್ಷಿತವಾಗಿ ಮಾಡುವಿರಿ. ಮಾನಸಿಕ ದುರ್ಬಲತೆಯಿಂದ ಇಂದು ಕಾರ್ಯವನ್ನು ಮಾಡುವಿರಿ. ಆಲಸ್ಯವು ಇಂದಿನ ಕಛೇರಿಯ ಕೆಲಸವನ್ನು ನಿಧಾನ ಮಾಡಿಸುವುದು. ಮನೋನಿಗ್ರಹದ ಬಗ್ಗೆ ಗಮನವನ್ನು ಕೊಡುವುದು ಮುಖ್ಯವಾಗಿರಲಿ. ನಿಮ್ಮ ಸ್ವಭಾವವು ಇದ್ದಕಿದ್ದಂತೆ ಬದಲಾಗಿ ಪ್ರೀತಿಸುವವರಿಗೆ ಇದು ಕಷ್ಟವಾಗಬಹುದು. ಹಿತಶತ್ರುಗಳನ್ನು ದೂರವಿಟ್ಟು ಕೆಲಸವನ್ನು ಸಾಧಿಸಿಕೊಳ್ಳಬೇಕಾಗಿದೆ. ಜೀವನ ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ನಿಮ್ಮ ಜಿಜ್ಞಾಸೆಗೆ ಸೂಕ್ತ ಜನರಿಂದ ಪರಿಹಾರ ಸಿಗಲಿದೆ. ನಿಮ್ಮ ಮಾತುಗಳು ದುರುಪಯೋಗ ಆಗಬಹುದು.
ಮಿಥುನ ರಾಶಿ: ನಿಮ್ಮ ಪ್ರಮುಖ ಅಂಶಗಳು ಬದಲಾಗುವುದು. ರಾಜಕಾರಣಿಗಳಿಗೆ ಅಧಿಕಾರಿಗಳಿಂದ ಸಂಕಟ ಕಾಣಿಸುವುದು. ಸಹೋದ್ಯೋಗಿಗಳ ಜೊತೆ ವಿರೋಧ ಕಟ್ಟಿಕೊಂಡ ಕಾರಣ ಇಂದಿನ ಕಛೇರಿಯ ಕೆಲಸವು ಅಸ್ತವ್ಯಸ್ತವಾಗುವುದು. ದೊಡ್ಡ ನಗರಗಳಲ್ಲಿ ಸುತ್ತಾಡುವ ಇಚ್ಛೆಯನ್ನು ಸ್ನೇಹಿತರಲ್ಲಿ ಹೇಳುವಿರಿ. ಯಾಂತ್ರಿಕ ಕಾರ್ಯದಲ್ಲಿ ಹೆಚ್ಚು ಸಫಲತೆ ಸಿಗಲಿದೆ. ವೃತ್ತಿಯಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನ ಸಿಗಬಹುದು. ಸ್ವಂತ ಉದ್ಯಮಕ್ಕೆ ವೇಗವನ್ನು ಕೊಡುವ ಕಾರ್ಯವು ಆಗಬೇಕಿದೆ. ತಂದೆಯಿಂದ ಸಂಪತ್ತನ್ನು ಪಡೆಯುವಿರಿ. ಸಹೋದ್ಯೋಗಿಯ ಕಾರಣದಿಂದ ನಿಮಗೆ ಬೈಗುಳ ಸಿಗುವುದು. ಭಯವನ್ನು ಬಿಟ್ಟು ಸಣ್ಣ ಅವಕಾಶವನ್ನಾದರೂ ಪಡೆಯಿರಿ. ಇಂದು ಅಸಾಧ್ಯ ಕಾರ್ಯದಲ್ಲಿ ದುಸ್ಸಾಹಸ ಮಾಡುವುದು ಬೇಡ. ಸಕಾರಾತ್ಮಕ ಚಿಂತನೆಯ ಬಗ್ಗೆ ಹೆಚ್ಚು ಗಮನವಿರಲಿ. ಜೀವನ ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಸಾಮಾಜಿಕ ಕೆಲಸಗಳು ಗೌರವವನ್ನು ಕೊಡುವುವು.
ಕರ್ಕಾಟಕ ರಾಶಿ: ಕೃಷಿ ವ್ಯಾಪಾರದಲ್ಲಿ ಲಾಭವು ಸಿಗಲಿದ್ದು, ಇಂದು ತೊಡಗಿಕೊಳ್ಳಲು ಸಾಧ್ಯವಾಗಸು. ಇಂದು ನಿರುದ್ಯೋಗಿಗಳಿಗೆ ಒಂದೊಂದೆ ಚಿಂತೆ ಕಾಡುವುದು. ಶತ್ರುಗಳ ತೊಂದರೆಯಿಂದ ತಪ್ಪಿಸಿಕೊಳ್ಳಲು ನಿಮ್ಮ ಬೇರೆ ಕೆಲಸಗಳನ್ನು ಪಕ್ಕಕ್ಕಿರಿಸುವಿರಿ. ಅನಿರೀಕ್ಷಿತ ಸಹಾಯವು ನಿಮಗೆ ಸಿಕ್ಕಲಿದೆ. ನಿಮ್ಮ ಆತ್ಮವಿಶ್ವಾಸವು ಒಂದು ಮಿತಿಯಲ್ಲಿ ಇರಲಿ. ನಿಮಗೆ ಅಧಿಕಾರವನ್ನು ಕೊಡುವ ಬಗ್ಗೆ ಮಾತುಕತೆಗಳು ನಡೆಯಬಹುದು. ವ್ಯಕ್ತಿಗಳ ಮೇಲೆ ವಿರಕ್ತಿ ಉಂಟಾಗಬಹುದು. ಒಡಂಬಡಿಕೆಗೆ ಸರಿಯಾಗಿ ವ್ಯವಹಾರವಿದ್ದರೆ ಚೆಂದ ಬಲವಂತವಾಗಿ ನೆಮ್ಮದಿಯನ್ನು ತಂದುಕೊಳ್ಳುವಿರಿ. ನಿಮ್ಮ ಯೋಜನೆಯನ್ನು ಸುಲಭ ಮಾಡಿಕೊಂಡು ಖರ್ಚನ್ನು ಕಡಿತಗೊಳಿಸಿ. ಸಾಮಾಜಿಕ ಚಟುವಟಿಕೆಯಲ್ಲಿ ಬಹಳ ದಿನಗಳ ಅನಂತರ ಭಾಗವಹಿಸುವಿರಿ. ಪ್ರಣಯದಲ್ಲಿ ಆಸಕ್ತಿಯು ಹೆಚ್ಚು ಇರುವುದು. ಮನಸ್ಸು ಉದ್ವೇಗದಿಂದ ಹೊರಬರಲು ಮನಸ್ಸು ಮಾರ್ಗವನ್ನು ಹುಡುಕುವುದು. ಸಮಾಜದಲ್ಲಿ ಗೌರವ, ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವಿರಿ. ನೂತನ ಉದ್ಯೋಗಕ್ಕೆ ಪ್ರವೇಶಿಸಲು ಮುಜುಗರವಾಗಲಿದೆ.
ಸಿಂಹ ರಾಶಿ: ಮನೆಯ ನಿರ್ಮಾಣಕ್ಕೆ ಆಪ್ತರ ಸಲಹೆಯನ್ನು ಪಡೆಯಬಹುದು. ಇಂದು ಕಾರ್ಯದ ಸ್ಥಳದಲ್ಲಿ ಹೆಚ್ಚಿನ ಒತ್ತಡವಿರುತ್ತದೆ. ಎಲ್ಲ ವ್ಯಕ್ತಿ, ವಸ್ತು, ಹುದ್ದೆಗಳ ಮೇಲೆ ವಿರಕ್ತಿ ಉಂಟಾಗಬಹುದು. ನಿಮ್ಮವರ ಇಂಗಿತವನ್ನು ಅರ್ಥಮಾಡಿಕೊಳ್ಳುವಲ್ಲಿ ಸೋಲುವಿರಿ. ನೆರೆಹೊರೆಯರಿಂದ ತೊಂದರೆ ಬರಬಹುದು. ಕೋಪದಿಂದ ಸಿಗುವ ಸ್ಥಾನ ತಪ್ಪಬಹುದು. ಸಾಹಿತ್ಯಾಸಕ್ತರಿಗೆ ಅನುಕೂಲಕರವಾದ ಸನ್ನಿವೇಶಗಳು ಬರಬಹುದು. ನಿಮ್ಮ ಯೋಜನೆಯನ್ನು ಸುಲಭ ಮಾಡಿಕೊಂಡು ಖರ್ಚನ್ನು ಕಡಿತಗೊಳಿಸಿ. ಆಪ್ತರನ್ನು ಕಳೆದುಕೊಳ್ಳುವ ಭಯವು ಉಂಟಾಗಬಹುದು. ಧನಲಾಭದಿಂದ ಆರ್ಥಿಕತೆಯೂ ಸುಸ್ಥಿರವಾಗುವುದು. ಬಹಳ ದಿನಗಳಿಂದ ಸಾಗುತ್ತಿದ್ದ ಕೆಲಸವನ್ನು ಇಂದೇ ಮುಗಿಸಬೇಕೆಂದು ನಿರ್ಧರಿಸುವಿರಿ. ಸಂದರ್ಭವನ್ನು ನೋಡಿ ಮಾತನಾಡುವುದು ಉತ್ತಮ. ಸುಲಭದ ಕೆಲಸಗಳನ್ನು ಮೊದಲು ಮಾಡಿಕೊಳ್ಳಿ. ಇಲ್ಲವಾದರೆ ನಕಾರಾತ್ಮಕ ಸಂದೇಶ ನಿಮ್ಮಿಂದ ಹೋಗಬಹುದು.
ಕನ್ಯಾ ರಾಶಿ; ಆದಾಯ ಮೂಲದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ಅದೃಷ್ಟವನ್ನು ನಂಬುವುದಕ್ಕಿಂತ ಸಾಮರ್ಥ್ಯವನ್ನು ನಂಬುವುದು ಒಳ್ಳೆಯದು. ಅತಿಯಾದ ಧನಾರ್ಜನೆಯ ಚಿಂತೆಯು ನಿಮ್ಮ ಎಲ್ಲ ಕೆಲಸಗಳನ್ನು ಮರೆಸುವುದು. ಕಾನೂನು ಸಮರದಲ್ಲಿ ಸೋಲುಣ್ಣಬೇಕಾಗುವುದು. ನಿಮ್ಮ ದಿಕ್ಕನ್ನು ಇನ್ನೊಂದುಕಡೆಗೆ ತಿರುಗಿಸಲು ಪ್ರಯತ್ನ ಮಾಡಬಹುದು. ನಿಮ್ಮ ವ್ಯಕ್ತಿತ್ವದ ನಿರ್ಮಾಣವು ಇನ್ನಷ್ಟು ಆಗಬೇಕಿದೆ. ಅನುಕರಿಸುವ ಸ್ವಭಾವವು ಹೆಚ್ಚು ಇರುವುದು. ಮೇಲಧಿಕಾರಿಗಳ ಜೊತೆ ಕಲಹ ಮಾಡಿಕೊಳ್ಳುವಿರಿ. ಮಿತ್ರರ ನಡುವೆ ಪ್ರೇಮವ ವಿವಾರಕ್ಕೆ ದ್ವೇಷವು ಬೆಳೆಯಬಹುದು. ವೃತ್ತಿಯಲ್ಲಿ ಒತ್ತಡವು ಹೆಚ್ಚಾಗಿರುವುದು. ಸಂಗಾತಿಯ ಜೊತೆ ಸಮಾರಂಭಗಳಲ್ಲಿ ಭಾಗವಹಿಸುವಿರಿ. ತಾಯಿಯ ಜೊತೆ ಕಲಹವಾಡಿ ಅವರನ್ನು ಬೇಸರಿಸುವಿರಿ. ಉದ್ಯಮದಲ್ಲಿ ಸಹವರ್ತಿಗಳು ರೂಪುಗೊಳ್ಳುವರು. ಅವಧಿಗೆ ಮೊದಲೇ ಕಾರ್ಯವನ್ನು ಮುಗಿಸಿ, ಇನ್ನಷ್ಟು ಮಾಡಬೇಕಾಗುವುದು.